ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್‌: ಪಾಕ್‌ಗೆ ಗೆಲುವು

Last Updated 27 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಬ್ರಿಡ್ಜ್‌ಟೌನ್‌: ಚೊಚ್ಚಲ ಅಂತರರಾಷ್ಟ್ರೀಯ ಪಂದ್ಯದಲ್ಲೇ ಅಮೋಘ ಬೌಲಿಂಗ್‌ ಸಾಮರ್ಥ್ಯ ತೋರಿದ ಶಾದಬ್‌ ಖಾನ್‌ (7ಕ್ಕೆ3) ಭಾನುವಾರ ವೆಸ್ಟ್‌ ಇಂಡೀಸ್‌ ಬ್ಯಾಟ್ಸ್‌ಮನ್‌ಗಳಿಗೆ ಸಿಂಹ ಸ್ವಪ್ನರಾದರು.

ಹೀಗಾಗಿ ಪಾಕಿಸ್ತಾನ ತಂಡ ಮೊದಲ ಟ್ವೆಂಟಿ–20 ಪಂದ್ಯದಲ್ಲಿ 6 ವಿಕೆಟ್‌ಗಳಿಂದ ಗೆಲುವು ಗಳಿಸಿತು.

ಕಿಂಗ್ಸ್‌ಟನ್‌ ಓವಲ್‌ ಅಂಗಳದಲ್ಲಿ ಮೊದಲು ಬ್ಯಾಟ್‌ ಮಾಡಿದ ವೆಸ್ಟ್‌ ಇಂಡೀಸ್‌ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 111ರನ್‌ ಗಳಿಸಿತು.

ಸಾಧಾರಣ ಮೊತ್ತವನ್ನು ಪಾಕಿಸ್ತಾನ ಇನ್ನೂ 17 ಎಸೆತಗಳು ಬಾಕಿ ಇರುವಂತೆ 4 ವಿಕೆಟ್‌ ಕಳೆದುಕೊಂಡು ಮುಟ್ಟಿತು.

ಬ್ಯಾಟಿಂಗ್‌ ಆರಂಭಿಸಿದ ಕೆರಿಬಿಯನ್‌ ನಾಡಿನ ತಂಡ ಆರಂಭದಲ್ಲೇ ವಿಕೆಟ್‌ ಗಳನ್ನು ಕಳೆದುಕೊಂಡು ಸಂಕಷ್ಟ ಅನುಭವಿಸಿತು. ನಾಯಕ ಬ್ರಾಥ್‌ವೈಟ್‌ (ಔಟಾಗದೆ 34; 27ಎ, 2ಬೌಂ, 2ಸಿ) ಎರಡು ಅಮೂಲ್ಯ ಜೊತೆಯಾಟಗಳಲ್ಲಿ ಭಾಗಿಯಾಗಿ ತಂಡದ ಮೊತ್ತವನ್ನು 100ರ ಗಡಿ ದಾಟಿಸಿದರು.

ಅವರು ಕೀರನ್‌ ಪೊಲಾರ್ಡ್‌ (14; 27ಎ, 1ಬೌಂ) ಜೊತೆ ಏಳನೇ ವಿಕೆಟ್‌ಗೆ 25 ಮತ್ತು  ಜೇಸನ್‌ ಹೋಲ್ಡರ್‌ (14; 12ಎ, 2ಬೌಂ) ಅವರೊಂದಿಗೆ ಎಂಟನೇ ವಿಕೆಟ್‌ಗೆ 37ರನ್‌ ಕಲೆಹಾಕಿ ತಂಡಕ್ಕೆ ಆಸರೆಯಾದರು.

ಗುರಿ ಬೆನ್ನಟ್ಟಿದ ಪಾಕಿಸ್ತಾನ ತಂಡ ಉತ್ತಮ ಆರಂಭ ಪಡೆಯಿತು. ಆರಂಭಿಕ ರಾದ ಅಹ್ಮದ್‌ ಶೆಹಜಾದ್‌  (13) ಮತ್ತು  ಕಮ್ರನ್‌ ಅಕ್ಮಲ್‌ (22; 17ಎ, 3ಬೌಂ, 1ಸಿ) ಎಚ್ಚರಿಕೆಯ ಆಟ ಆಡಿದರು.

ಐದನೇ ಓವರ್‌ನಲ್ಲಿ ಶೆಹಜಾದ್‌, ಜೇಸನ್‌ ಹೋಲ್ಡರ್‌ಗೆ ವಿಕೆಟ್‌ ಒಪ್ಪಿಸಿದರು. ಇದರ ಬೆನ್ನಲ್ಲೇ ಅಕ್ಮಲ್‌ ಮತ್ತು ಮಹಮ್ಮದ್‌ ಹಫೀಜ್‌ (5) ಔಟಾ ಗಿದ್ದರಿಂದ ತಂಡ ಆತಂಕಕ್ಕೊಳಗಾಗಿತ್ತು.

ಆದರೆ ಬಾಬರ್‌ ಅಜಂ (29; 30ಎ, 3ಬೌಂ) ಮತ್ತು ಶೋಯಬ್‌ ಮಲಿಕ್‌ (ಔಟಾಗದೆ 38; 29ಎ, 3ಬೌಂ, 1ಸಿ) ಯಾವುದೇ ಅಪಾಯಕ್ಕೆ ಆಸ್ಪದ ನೀಡದೆ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.

ಸಂಕ್ಷಿಪ್ತ ಸ್ಕೋರ್‌:

ವೆಸ್ಟ್‌ ಇಂಡೀಸ್‌: 20 ಓವರ್‌ಗಳಲ್ಲಿ 8 ವಿಕೆಟ್‌ಗೆ 111 (ಎವಿನ್‌ ಲೆವಿಸ್‌ 10, ಚಾಡ್ವಿಕ್‌ ವಾಲ್ಟನ್‌ 18, ಕೀರನ್‌ ಪೊಲಾರ್ಡ್‌ 14, ಕಾರ್ಲೊಸ್‌ ಬ್ರಾಥ್‌ವೈಟ್‌ ಔಟಾಗದೆ 34, ಜೇಸನ್‌ ಹೋಲ್ಡರ್‌ 14; ಇಮಾದ್‌ ವಾಸೀಂ 12ಕ್ಕೆ1, ಸೊಹೇಲ್‌ ತನ್ವೀರ್‌ 21ಕ್ಕೆ1, ಹಸನ್‌ ಅಲಿ 25ಕ್ಕೆ1, ಶಾದಬ್‌ ಖಾನ್‌ 7ಕ್ಕೆ3, ವಹಾಬ್‌ ರಿಯಾಜ್‌ 35ಕ್ಕೆ1).

ಪಾಕಿಸ್ತಾನ: 17.1 ಓವರ್‌ಗಳಲ್ಲಿ 4 ವಿಕೆಟ್‌ಗೆ 115 (ಕಮ್ರನ್‌ ಅಕ್ಮಲ್‌ 22, ಅಹ್ಮದ್‌ ಶೆಹಜಾದ್‌ 13, ಬಾಬರ್‌ ಅಜಂ 29, ಶೋಯಬ್‌ ಮಲಿಕ್‌ ಔಟಾಗದೆ 38; ಸ್ಯಾಮುಯೆಲ್‌ ಬದ್ರಿ 24ಕ್ಕೆ1, ಜೇಸನ್‌ ಹೋಲ್ಡರ್‌ 27ಕ್ಕೆ2, ಕಾರ್ಲೊಸ್‌ ಬ್ರಾಥ್‌ವೈಟ್‌ 18ಕ್ಕೆ1).

ಫಲಿತಾಂಶ: ಪಾಕಿಸ್ತಾನಕ್ಕೆ 6 ವಿಕೆಟ್‌ ಗೆಲುವು ಹಾಗೂ 4 ಪಂದ್ಯಗಳ ಸರಣಿಯಲ್ಲಿ 1–0ರಲ್ಲಿ ಮುನ್ನಡೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT