ಉದ್ಯೋಗ ಪ್ರಯಾಣಿಕ ಪಾಸ್ ಹೊಂದಿದ್ದ ಯುವತಿಯರು ಭಾನುವಾರ ಬೆಳಿಗ್ಗೆ ಡೆನ್ವರ್‌ನಿಂದ ಮಿನ್ನೆಪೊಲಿಸ್‌ಗೆ ಪ್ರಯಾಣಿಸಬೇಕಿತ್ತು. ಆದರೆ ಏರ್‌ಲೈನ್ಸ್‌ನ ವಸ್ತ್ರಸಂಹಿತೆಯನ್ನು ಅನುಸರಿಸದ ಕಾರಣ ವಿಮಾನ ಪ್ರಯಾಣ ನಿರಾಕರಿಸಲಾಗಿದೆ ಎಂದು ಏರ್‌ಲೈನ್ಸ್‌ನ ಜೋನಾಥನ್ ಗೌರಿನ್ ತಿಳಿಸಿದ್ದಾರೆ. ಲೆಗ್ಗಿನ್ಸ್ ಧರಿಸಿದ್ದ ಮತ್ತೊಬ್ಬ ಯುವತಿ ಸಂಸ್ಥೆಯ ನೀತಿಗೆ ಅನುಗುಣವಾದ ಬಟ್ಟೆ ಧರಿಸಿದ ಬಳಿಕ ಆಕೆಗೆ ಪ್ರಯಾಣಿಸಲು ಅನುಮತಿ ನೀಡಲಾಯಿತು.