ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ ಇಳಿಕೆ

Last Updated 27 ಮಾರ್ಚ್ 2017, 19:39 IST
ಅಕ್ಷರ ಗಾತ್ರ

ಅಮೆರಿಕದ ವಿಶ್ವವಿದ್ಯಾಲಯಗಳಲ್ಲಿ ಮತ್ತು ಕಾಲೇಜುಗಳಲ್ಲಿ ಅಧ್ಯಯನ ನಡೆಸಲು ಅರ್ಜಿ ಸಲ್ಲಿಸುವ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ. ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಅಮೆರಿಕದ ಆರು ಸಂಸ್ಥೆಗಳು ನಡೆಸಿದ ಸಮೀಕ್ಷೆಯಿಂದ ಈ ವಿಷಯ ತಿಳಿದುಬಂದಿದೆ.

47%: ಅಮೆರಿಕದಲ್ಲಿ ಅಧ್ಯಯನ ನಡೆಸುತ್ತಿರುವ ಅಂತರರಾಷ್ಟ್ರೀಯ ವಿದ್ಯಾರ್ಥಿಗಳ ಪೈಕಿ ಭಾರತ ಮತ್ತು ಚೀನಾದವರ ಪ್ರಮಾಣ

40%: ವಿಶ್ವದ ವಿವಿಧ ದೇಶಗಳ ವಿದ್ಯಾರ್ಥಿಗಳ ಅರ್ಜಿ ಸಲ್ಲಿಕೆಯಲ್ಲಾದ ಇಳಿಕೆಯ ಒಟ್ಟು ಪ್ರಮಾಣ

250: ವಿಶ್ವವಿದ್ಯಾಲಯ/ಕಾಲೇಜುಗಳಲ್ಲಿ ಸಮೀಕ್ಷೆ

ಕಾರಣವೇನು?
* ಅಮೆರಿಕದ ವೀಸಾ ನೀತಿಯಲ್ಲಿ ಬದಲಾವಣೆ ಸಾಧ್ಯತೆ
* ಭಾರತೀಯರ ಮೇಲೆ ನಡೆಯುತ್ತಿರುವ ಹಲ್ಲೆಗಳು
* ವಿದ್ಯಾರ್ಥಿ ವೀಸಾ ತಿರಸ್ಕಾರದಲ್ಲಿ ಏರಿಕೆ

**

ಸಮೀಕ್ಷೆ ನಡೆಸಿದ ಸಂಸ್ಥೆಗಳು

* ಕಾಲೇಜು ನೋಂದಣಿ ಸಂಘ
* ಕಾಲೇಜು ದಾಖಲಾತಿ
ಅಧಿಕಾರಿಗಳ ಸಂಘ
* ಅಂತರರಾಷ್ಟ್ರೀಯ ಶಿಕ್ಷಣ ಸಂಸ್ಥೆ
* ಅಂತರರಾಷ್ಟ್ರೀಯ ಶಿಕ್ಷಕರ ಸಂಘ
* ಕಾಲೇಜು ದಾಖಲಾತಿ ಕೌನ್ಸೆಲಿಂಗ್‌ನ ರಾಷ್ಟ್ರೀಯ ಸಂಘಟನೆ
* ಕಾಲೇಜು ದಾಖಲಾತಿ ಕೌನ್ಸೆಲಿಂಗ್‌ನ ಅಂತರರಾಷ್ಟ್ರೀಯ ಸಂಘಟನೆ

**
ಸರ್ಕಾರದ ಕಠಿಣ ಆದೇಶಗಳು ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರಿರಬಹುದು. ನೋಟು ರದ್ದತಿ, ರೂಪಾಯಿ ಮೌಲ್ಯ ಕುಸಿತ ಸಹ ಅರ್ಜಿ ಪ್ರಮಾಣ ಇಳಿಮುಖವಾಗಲು ಕಾರಣ.

-ವಿಮ್ ವೀವೆಲ್, ಪೋರ್ಟ್‌ಲ್ಯಾಂಡ್‌ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT