ದಿನದ ವಹಿವಾಟಿನಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ (ಆರ್‌ಐಎಲ್) ಷೇರುಗಳು ಶೇ 3 ರಷ್ಟು ಕುಸಿತ ಕಂಡಿವೆ.
ಪರಿಣಾಮ ಮಾರುಕಟ್ಟೆ ಮೌಲ್ಯದಲ್ಲಿ ₹12,488 ಕೋಟಿಗಳಷ್ಟು ನಷ್ಟವಾಗಿದ್ದು, ಒಟ್ಟು ಮಾರುಕಟ್ಟೆ ಮೌಲ್ಯ ₹4.04 ಲಕ್ಷ ಕೋಟಿಗಳಿಗೆ ಇಳಿಕೆ ಕಂಡಿದೆ.
ರೂಪಾಯಿ 17 ತಿಂಗಳ ಗರಿಷ್ಠ: ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯ ಒಂದೂವರೆ ವರ್ಷದ ಗರಿಷ್ಠ ಮಟ್ಟಕ್ಕೆ ಏರಿಕೆ ಕಂಡಿದೆ. ದಿನದ ವಹಿವಾಟಿನಲ್ಲಿ 37 ಪೈಸೆಗಳಷ್ಟು ಹೆಚ್ಚಾಗಿ, ಒಂದು ಡಾಲರ್‌ಗೆ ₹65.04 ರಂತೆ ವಿನಿಮಯಗೊಂಡಿತು. ಈ ವರ್ಷದಲ್ಲಿ ಎರಡನೇ ಗರಿಷ್ಠ ಮಟ್ಟದ ಏರಿಕೆ ಇದಾಗಿದೆ. 2015ರ ಅಕ್ಟೋಬರ್ 28 ರಂದು ಒಂದು ಡಾಲರ್‌ಗೆ ₹64.93 ರಕ್ಕೆ ತಲುಪಿತ್ತು.