ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪರಿಷತ್ತಿನಲ್ಲಿ ಅಂಗವಿಕಲರ ಪ್ರತಿನಿಧಿ ಬೇಕು’

Last Updated 27 ಮಾರ್ಚ್ 2017, 20:36 IST
ಅಕ್ಷರ ಗಾತ್ರ

ಬೆಂಗಳೂರು: ‘ಅಂಗವಿಕಲರ  ಪ್ರತಿ ನಿಧಿಯೊಬ್ಬರನ್ನು ವಿಧಾನ ಪರಿ ಷತ್‌ಗೆ ನಾಮನಿರ್ದೇಶನ ಮಾಡ ಬೇಕು’ ಎಂದು ಅಂಗವಿಕಲ ನೌಕರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಬೀರಪ್ಪ ಅಂಡಗಿ ಚಿಲವಾಡಗಿ ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು,‘ರಾಜ್ಯದಲ್ಲಿ 30 ಲಕ್ಷ ಅಂಗವಿಕಲರಿದ್ದಾರೆ. ಅವರ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರಲು ಪರಿಷತ್‌ನಲ್ಲಿ ಪ್ರತಿನಿಧಿಯನ್ನು ನಾಮನಿರ್ದೇಶನ ಮಾಡಬೇಕು. ಸರ್ಕಾರಿ ಸೇವೆಯಲ್ಲಿನ ಅಂಗವಿಕಲರಿಗೆ ಸುಪ್ರೀಂಕೋರ್ಟ್‌ನ  ಆದೇಶದಂತೆ ಶೇ 3ರಷ್ಟು ಬಡ್ತಿ ಮೀಸಲಾತಿ ನೀಡಬೇಕು’ ಎಂದರು.

‘ಅಂಗವಿಕಲರಿಗೆ   ಎ ಮತ್ತು ಬಿ ದರ್ಜೆಯ ಹುದ್ದೆಗಳ ನೇಮಕಾತಿಯಲ್ಲಿ ಶೇ 3 ರಷ್ಟು ಹಾಗೂ ಸಿ ಮತ್ತು ಡಿ ದರ್ಜೆಯ ಹುದ್ದೆಗಳಲ್ಲಿ ಶೇ 5 ರಷ್ಟು ಮೀಸಲಾತಿ ನೀಡಲಾಗಿದೆ. ಅಂಗವಿಕಲರು ಅಲ್ಲದವರು ಕೂಡ ಅಂಗವಿಕಲತೆಯ ಪ್ರಮಾಣಪತ್ರ ಸೃಷ್ಟಿಸಿ ಸರ್ಕಾರಿ ನೌಕರಿ ಪಡೆಯುತ್ತಿದ್ದಾರೆ. ಅವರನ್ನು ಗುರುತಿಸಲು ಸಮಿತಿ ರಚಿಸಬೇಕು’ ಎಂದು ಹೇಳಿದರು.

‘ಅಂಗವಿಕಲರ ಅಭಿವೃದ್ದಿ ಕಾರ್ಯಕ್ರಮಗಳನ್ನು ಜಾರಿಮಾಡಲು ಪ್ರತ್ಯೇಕ ಇಲಾಖೆ ಸ್ಥಾಪಿಸಬೇಕು. ಅವರ ಕಲ್ಯಾಣಕ್ಕಾಗಿ ಪ್ರತಿ ತಾಲ್ಲೂಕುಗಳಲ್ಲಿ ಪ್ರತ್ಯೇಕ ಅಧಿಕಾರಿಯನ್ನು ನೇಮಿಸಬೇಕು’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT