ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

44 ದೂರುಗಳು– ಪರಿಹಾರಕ್ಕೆ ಕ್ರಮ

ಜಿಲ್ಲಾಧಿಕಾರಿಯಿಂದ ಫೋನ್ ಇನ್ ಕಾರ್ಯಕ್ರಮ
Last Updated 28 ಮಾರ್ಚ್ 2017, 6:17 IST
ಅಕ್ಷರ ಗಾತ್ರ
ಉಡುಪಿ: ಸಾರ್ವಜನಿಕರ ದೂರುಗಳನ್ನು ಸ್ವೀಕರಿಸಿ ಪರಿಹಾರ ನೀಡಲು ಹಾಗೂ ಅದರ ಉಸ್ತುವಾರಿಗಾಗಿ ಜಿಲ್ಲಾಡಳಿತ ವೆಬ್‌ಸೈಟ್‌ನಲ್ಲಿ ಕೊಂಡಿಯೊಂದನ್ನು (ಪಬ್ಲಿಕ್ ಗ್ರೀವಿಯೆನ್ಸ್‌) ಸೇರ್ಪಡೆ ಮಾಡ ಲಾಗಿದೆ. ಜನರ ಸಮಸ್ಯೆಗಳಿಗೆ ಪರಿಹಾರ ನೀಡಲು ಮೊದಲ ಆದ್ಯತೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಹೇಳಿದರು.
 
ಸಾರ್ವಜನಿಕರ ಕುಂದುಕೊರತೆ ನಿವಾರಿಸಲು ಸೋಮವಾರ ಆಯೋಜಿಸಿದ್ದ ನೇರ ಫೋನ್‌ ಇನ್ ಕಾರ್ಯಕ್ರಮ ದಲ್ಲಿ ಅವರು ಮಾತನಾಡಿದರು. ಜಿಲ್ಲಾಧಿಕಾರಿ ಕಚೇರಿಯಿಂದ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರುಗಳನ್ನು ಕಳುಹಿಸಲು ಪ್ರತಿಯೊಂದು ಇಲಾಖೆಗೂ ಪ್ರತ್ಯೇಕ ಯೂಸರ್ ಐಡಿ ಮತ್ತು ಪಾಸ್‌ ವರ್ಡ್‌ಗಳನ್ನು ನೀಡಲಾಗಿದೆ. ಇದಕ್ಕೆ ಉತ್ತರಿಸಲು ಸಮಯಮಿತಿಯನ್ನು ನಿಗದಿ ಗೊಳಿಸಿದೆ ಎಂದು ಅವರು ಹೇಳಿದರು.
 
ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ಜಿಲ್ಲೆಯ ಜನರು ಕುಡಿಯುವ ನೀರು, ಕಂದಾಯ ಇಲಾಖೆ ಸಮಸ್ಯೆ, ಸ್ಮಶಾನ ಭೂಮಿ, ಕ್ರಷರ್ ಸಮಸ್ಯೆ, ಬಿಎಸ್‌ಎನ್‌ಎಲ್‌ ದೂರವಾಣಿ ಸಮಸ್ಯೆ, ಬೈಂದೂರು ವ್ಯಾಪ್ತಿಯಲ್ಲಿ ದೂಳಿನಿಂ ದಾಗಿ ಆರೋಗ್ಯ ಹದಗೆಡುತ್ತಿರುವ ಬಗ್ಗೆ, ಬೈಂದೂರಿನ ಉಪ್ಪುಂದದಲ್ಲಿ ಹೊಳೆಗೆ ಕಟ್ಟಿರುವ ಅಣೆಕಟ್ಟನ್ನು ಉಳಿಸಿಕೊಡಿ ಎಂದು ಜಿಲ್ಲಾಧಿಕಾರಿಗೆ ಮನವಿ ಮಾಡಿದರು.
 
ಚಾಂತಾರಿನ ದೇವಾಲಯದ ಅರ್ಚ ಕರ ತಸ್ತೀಕ್ ಬಟವಾಡೆಯಾಗದಿರುವ ಬಗ್ಗೆ, ಕಟಪಾಡಿ ಶಾಲೆಗಳಲ್ಲಿ ಉದ್ಭವಿ ಸಿರುವ ನೀರಿನ ಸಮಸ್ಯೆ ಬಗ್ಗೆಯೂ ದೂರುಗಳು ಬಂದವು. ಕುಂದಾಪುರದ ಗ್ರಾಮಾಂತರ ವ್ಯಾಪ್ತಿಯಲ್ಲಿ ಹಳೆ ಬಸ್ಸುಗ ಳನ್ನು ಓಡಿಸುವ ಬಗ್ಗೆ, ಮಠದಕೆರೆಯ ಹೂಳೆತ್ತಲು, ಅಕ್ರಮ ಮರಳುಗಾರಿಕೆ ಸಮಸ್ಯೆ, ಹಕ್ಕುಪತ್ರ ಬೇಡಿಕೆ, ಪಾದಚಾರಿ ರಸ್ತೆ, ಹೆಣ್ಣು ಮಕ್ಕಳ ಸುರಕ್ಷತೆ ಬಗ್ಗೆ, ಜೂಜಾಟ, ಕಸ ವಿಲೆ ಬಗ್ಗೆಯೂ ಸಾರ್ವಜನಿಕರು ದೂರವಾಣಿ ಮೂಲಕ ಪರಿಹಾರ ಕೇಳಿದರು.
 
ಬೆಳಿಗ್ಗೆ 10ರಿಂದ 11 ಗಂಟೆ ವರೆಗೆ ನಡೆದ ಫೋನ್‌ ಇನ್‌ ಕಾರ್ಯಕ್ರಮಕ್ಕೆ ಒಟ್ಟು 44 ಕರೆಗಳು ಬಂದವು. ದೂರು ಗಳನ್ನು ಆಲಿಸಿ ಪರಿಹಾರಕ್ಕೆ ಸೂಚನೆ ನೀಡಲಾಯಿತು. ಜಿಲ್ಲಾ ಮಟ್ಟದ ಅಧಿಕಾ ರಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT