ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಸಿಸಿಐನಿಂದ ಆಟಗಾರರಿಗೆ ನಗದು

Last Updated 28 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ಪ್ರಶಸ್ತಿ ಗೆದ್ದ ಭಾರತ ತಂಡದ ಆಟಗಾರರು ಮತ್ತು ಸಹಾಯಕ ಸಿಬ್ಬಂದಿಗೆ ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ ನಗದು ಬಹುಮಾನ ಪ್ರಕಟಿಸಿದೆ.

ಪ್ರೊ ರೋಟಾ ನಿಯಮದ ಅನ್ವಯ ಸರಣಿಯಲ್ಲಿ ಒಂದು ಪಂದ್ಯ ಆಡಿದ ಆಟಗಾರನಿಗೆ ₹ 12.5 ಲಕ್ಷ ಮೊತ್ತ ಸಿಗಲಿದ್ದು, ನಾಲ್ಕೂ ಪಂದ್ಯಗಳಲ್ಲೂ ಕಣಕ್ಕಿಳಿದವರಿಗೆ ₹ 50 ಲಕ್ಷ ಸಿಗಲಿದೆ.

ತಂಡದ ಮುಖ್ಯ ಕೋಚ್‌ ಅನಿಲ್‌ ಕುಂಬ್ಳೆ ಅವರಿಗೆ ₹ 25 ಲಕ್ಷ ಸಿಗಲಿದ್ದು, ಸಹಾಯ ಸಿಬ್ಬಂದಿಗಳು ತಲಾ ₹ 15 ಲಕ್ಷ ಬಹುಮಾನ ಪಡೆಯಲಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧ ಸರಣಿ ಗೆದ್ದ ಮತ್ತು ಐಸಿಸಿ ಟೆಸ್ಟ್‌ ಚಾಂಪಿಯನ್‌ಷಿಪ್‌ ಜಯಿಸಿರುವ ತಂಡವನ್ನು ಬಿಸಿಸಿಐ ಅಭಿನಂದಿಸಿದೆ.

*

ಅಜಿಂಕ್ಯ ರಹಾನೆ ಅವರಂತಹ ಹಂಗಾಮಿ ನಾಯಕನನ್ನು ಹೊಂದಿರುವ ಭಾರತ ತಂಡ ನಿಜಕ್ಕೂ ಅದೃಷ್ಟಶಾಲಿ. ಚೊಚ್ಚಲ ಪಂದ್ಯದಲ್ಲೇ ಅವರು ತಂಡ  ಮುನ್ನಡೆಸಿದ ರೀತಿ ಮೆಚ್ಚುವಂತಹದ್ದು.
-ಇಯಾನ್‌ ಚಾಪೆಲ್‌, ಆಸ್ಟ್ರೇಲಿಯಾದ ಮಾಜಿ ಆಟಗಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT