ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷಿಣ ಕೊರಿಯಾ ಮಾಜಿ ಅಧ್ಯಕ್ಷೆ ಪಾರ್ಕ್ ಬಂಧನ

Last Updated 31 ಮಾರ್ಚ್ 2017, 19:16 IST
ಅಕ್ಷರ ಗಾತ್ರ

ಸೋಲ್‌: ಭ್ರಷ್ಟಾಚಾರ ಆರೋಪದಲ್ಲಿ  ಪದಚ್ಯುತಗೊಂಡಿರುವ ದಕ್ಷಿಣ ಕೊರಿಯಾ ಮಾಜಿ ಅಧ್ಯಕ್ಷೆ ಪಾರ್ಕ್ ಜಿಯುನ್ ಹೈ ಅವರನ್ನು ಶುಕ್ರವಾರ ಬಂಧಿಸಲಾಗಿದೆ.
ಈ ಬಂಧನವು, ಪಾರ್ಕ್‌ ಶಿಕ್ಷೆಯನ್ನು ಖಚಿತಪಡಿಸಿಲ್ಲ. ಆದರೆ ಅದರ ಸಾಧ್ಯತೆಯನ್ನು ಹೆಚ್ಚಿಸಿದೆ.

ಪಾರ್ಕ್‌ ವಿರುದ್ಧದ ಅಪರಾಧ ಆರೋಪಗಳು ಪ್ರಬಲವಾಗಿವೆ. ಅವರು ಸಾಕ್ಷ್ಯಗಳನ್ನು ನಾಶಪಡಿಸುವ ಸಾಧ್ಯತೆ ಇದೆ ಎಂದು ಸೋಲ್‌ನ ಕೇಂದ್ರ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರು ಅಭಿಪ್ರಾಯಪಟ್ಟರು.

ಪಾರ್ಕ್‌ ಅವರು 20 ದಿನ ಬಂಧನದಲ್ಲಿ ಇರಲಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ಎದುರಿಸಲಿದ್ದಾರೆ.

ಪಾರ್ಕ್‌ ಅವರ ವಿರುದ್ಧದ ಆರೋಪಕ್ಕೆ ಸಂಬಂಧಿಸಿದಂತೆ ಗುರುವಾರ 9 ಗಂಟೆ ವಿಚಾರಣೆ ನಡೆಯಿತು.  ಪಾರ್ಕ್‌ ಅವರು ಸೋಲ್‌ ಕೇಂದ್ರ ಜಿಲ್ಲಾ ಪ್ರಾಸಿಕ್ಯೂಟರ್‌ ಕಚೇರಿಯಲ್ಲಿ ರಾತ್ರಿಯಿಡೀ ಕುಳಿತು ಆದೇಶಕ್ಕಾಗಿ ಕಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT