ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದು ಸುರಂಗ ಮಾರ್ಗ ಉದ್ಘಾಟನೆ

Last Updated 1 ಏಪ್ರಿಲ್ 2017, 19:15 IST
ಅಕ್ಷರ ಗಾತ್ರ
ADVERTISEMENT

ಶ್ರೀನಗರ: ಜಮ್ಮು– ಶ್ರೀನಗರ ರಾಷ್ಟ್ರೀಯ ಹೆದ್ದಾರಿ 44ರಲ್ಲಿ ಚೆನಾನಿ– ನಶ್ರಿ  ಸಂಪರ್ಕಿಸುವ 9.2 ಕಿ.ಮೀ. ಉದ್ದದ ಸುರಂಗ ಮಾರ್ಗವನ್ನು ಪ್ರಧಾನಿ ನರೇಂದ್ರ ಮೋದಿ ಭಾನುವಾರ (ಏ.2) ಉದ್ಘಾಟಿಸುವರು.

ಇದು ದೇಶದ ಅತಿ ಉದ್ದದ ಸುರಂಗ ರಸ್ತೆ ಮಾರ್ಗವಾಗಿದೆ. ಇದಕ್ಕೆ ಸುಮಾರು ₹ 3,720 ಕೋಟಿ ವೆಚ್ಚವಾಗಿದೆ.

ಈ ಮಾರ್ಗದಿಂದ ಜಮ್ಮು– ಶ್ರೀನಗರ ಅಂತರವು 30 ಕಿ.ಮೀ ಕಡಿಮೆಯಾಗುತ್ತದೆ. ಪ್ರಯಾಣದ ಅವಧಿಯಲ್ಲಿ ಸುಮಾರು 2 ಗಂಟೆ ಉಳಿಯುತ್ತದೆ. ಹಿಮಪಾತ, ಮಳೆಯಿಂದ ವಾಹನ ಸಂಚಾರಕ್ಕೆ ಆಗಾಗ ತೊಂದರೆಯಾಗುವ  ಸ್ಥಳಗಳಾದ ಪಟ್ನಿಟಾಪ್, ಕುಡ್ ಮತ್ತು ಬಟೋಟೆ ಪ್ರದೇಶಗಳಿಗೆ ಬೈಪಾಸ್ ರಸ್ತೆಯಾಗಿ ಸುಗಮ ಸಂಚಾರಕ್ಕೆ ಅನುಕೂಲವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT