ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ನಿಂದ ಮತ್ತೊಮ್ಮೆ ಶಕ್ತಿ ಪ್ರದರ್ಶನ

Last Updated 3 ಏಪ್ರಿಲ್ 2017, 8:57 IST
ಅಕ್ಷರ ಗಾತ್ರ

ನಂಜನಗೂಡು: ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾನುವಾರ ಗ್ರಾಮೀಣ ಪ್ರದೇಶದಲ್ಲಿ ಬಿರುಸಿನ ಪ್ರಚಾರ ನಡೆಸಿದರು. ಕ್ಷೇತ್ರದಲ್ಲಿ ಮೂರು ದಿನಗಳ ಅಂತರದಲ್ಲಿ ಅವರು ನಡೆಸಿದ ಎರಡನೇ ರೋಡ್‌ ಷೋ ಇದು. ಅವರೊಂದಿಗೆ ಸಚಿವರ ದಂಡು ಪ್ರಚಾರದಲ್ಲಿ ಪಾಲ್ಗೊಂಡಿತು.

‘ನನ್ನ ಜೀವಮಾನದಲ್ಲಿ ಜಾತಿ ಆಧಾರದ ಮೇಲೆ ರಾಜಕೀಯ ಮಾಡಿಲ್ಲ. ಬಸವಣ್ಣನವರ ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬ ತತ್ವದಲ್ಲಿ ನಂಬಿಕೆಯಿಟ್ಟವನು ನಾನು’ ಎಂದು ಸಿದ್ದರಾಮಯ್ಯ ತಿಳಿಸಿದರು.

ತಾಲ್ಲೂಕಿನ ಹಲ್ಲರೆ ಗ್ರಾಮದಲ್ಲಿ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಯಾಗಿ ಉಪಚುನಾವಣೆಯನ್ನು ಗಂಭೀರ ವಾಗಿ ಪರಿಗಣಿಸಿದ್ದೇನೆ. ಈ ಭಾಗದ ಅಭಿವೃದ್ಧಿಗಾಗಿ ₹ 600 ಕೋಟಿ ಅನುದಾನ ನೀಡಿ ಕಾಮಗಾರಿ ಆರಂಭಿಸಲಾಗಿದೆ ಎಂದರು.

ಸಚಿವ ಡಾ.ಎಚ್.ಸಿ.ಮಹದೇವಪ್ಪ, ಸಂಸದ ಆರ್.ಧ್ರುವನಾರಾಯಣ, ಮುಖಂಡ ಸಿ.ಎಂ.ಇಬ್ರಾಹಿಂ ಇದ್ದರು.

ದಲಿತರ ಕಲ್ಯಾಣಕ್ಕೆ ಹೆಚ್ಚು ಹಣ: ನಗರದ ರಾಷ್ಟ್ರಪತಿ ರಸ್ತೆಯ ಶ್ರೀಕಂಠಪುರಿ ಬಡಾ ವಣೆಯಲ್ಲಿ ಆರ್.ಧ್ರುವನಾರಾಯಣ, ಸಚಿವರಾದ ಎ.ಕೃಷ್ಣಪ್ಪ, ತನ್ವೀರ್ ಸೇಠ್, ರೋಷನ್‍ ಬೇಗ್, ಶಾಸಕರಾದ ವೆಂಕಟೇಶ್, ಪುಟ್ಟರಂಗ ಶೆಟ್ಟಿ ಅವರು ಸಾವಿರಾರು ಕಾರ್ಯಕರ್ತರೊಂದಿಗೆ ಮನೆಮನೆಗೆ  ಪರ ಮತಯಾಚಿಸಿದರು.

ಧ್ರುವನಾರಾಯಣ ಮಾತನಾಡಿ, ಶ್ರೀನಿವಾಸಪ್ರಸಾದ್‍ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ದಲಿತ ವಿರೋಧಿ ಎಂದಿರುವುದು ಸತ್ಯಕ್ಕೆ ದೂರವಾದ ಆರೋಪ. ಅಧಿಕಾರದಲ್ಲಿ ದ್ದಾಗ ಹೊಗಳುತ್ತಿದ್ದವರು, ಸಂಪುಟ ದಿಂದ ಕೈಬಿಟ್ಟ ತಕ್ಷಣ ಆರೋಪದಲ್ಲಿ ತೊಡಗಿರುವುದು ಅವರಿಗೆ ಶೋಭೆ ತರುವುದಿಲ್ಲ ಎಂದರು.

ಯಡಿಯೂರಪ್ಪ ಆಡಳಿತದ ಅವಧಿಯಲ್ಲಿ ದಲಿತರ ಕಲ್ಯಾಣಕ್ಕೆ ಮೀಸಲಿಟ್ಟ ಹಣಕ್ಕಿಂತ 4 ಪಟ್ಟು ಹೆಚ್ಚು ಹಣವನ್ನು ಸಿದ್ದರಾಮಯ್ಯ ನೀಡಿದ್ದಾರೆ. ಸಂಪುಟದಲ್ಲಿ ದಲಿತರಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡಿದ್ದಾರೆ. ಲೋಕೋಪ ಯೋಗಿ, ಗೃಹ, ಸಮಾಜ ಕಲ್ಯಾಣ ಸೇರಿ ದಂತೆ ಪ್ರಮುಖ ಖಾತೆಗಳಲ್ಲಿ ದಲಿತರು ಸ್ವತಂತ್ರವಾಗಿ ಕಾರ್ಯ ನಿರ್ವಹಿಸುತ್ತಿ ದ್ದಾರೆ ಎಂದು ತಿಳಿಸಿದರು.

‘ಮುಡಾ’ ಅಧ್ಯಕ್ಷ ಧ್ರುವಕುಮಾರ್, ನಗರಸಭಾ ಸದಸ್ಯರಾದ ಚಂದ್ರಶೇಖರ್, ಚಲುವರಾಜು, ಸುಂದರರಾಜ್, ಎನ್.ಎಂ.ಮಂಜುನಾಥ್, ರಾಜೇಶ್, ಅಹಮದ್, ಕೆಪಿಸಿಸಿ ಸದಸ್ಯ ಮಹಮದ್ ಅಕ್ಬರ್ ಅಲೀಂ ಇದ್ದರು.

ಒಡೆದು ಆಳುತ್ತಿರುವ ಬಿಜೆಪಿ: ‘ವ್ಯಕ್ತಿಗಳ ಪ್ರತಿಷ್ಠೆಗಾಗಿ ನಡೆಯುತ್ತಿರುವ ಉಪ ಚುನಾವಣೆ ಇದಲ್ಲ. ದಲಿತರ ಪರವಾಗಿ ಕೆಲಸ ಮಾಡುತ್ತಿರುವ ಕಾಂಗ್ರೆಸ್ ಹಾಗೂ  ಜಾತಿ, ಧರ್ಮದ ಹೆಸರಿನಲ್ಲಿ ಸಮಾಜ ಒಡೆದು ಆಳುತ್ತಿರುವ ಬಿಜೆಪಿ ನಡುವೆ ನಡೆಯುತ್ತಿರುವ ಉಪಚುನಾವಣೆ’ ಎಂದು ಕಾಂಗ್ರೆಸ್ ಮುಖಂಡ ಬಿ.ಕೆ.ಹರಿಪ್ರಸಾದ್ ತಿಳಿಸಿದರು.

‘ಉತ್ತರಪ್ರದೇಶದಲ್ಲಿ ಮುಖ್ಯಮಂತ್ರಿಯಾದ 24 ಗಂಟೆಯೊಳಗೆ ಯೋಗಿ ಆದಿತ್ಯನಾಥ್ ಆ್ಯಂಟಿ ರೋಮಿಯೊ ಸ್ಕ್ವಾಡ್, ಘರ್ ವಾಪಸಿಗೆ ಮುಂದಾಗಿದ್ದಾರೆ. ಮಾಂಸದ ಅಂಗಡಿ ಮುಚ್ಚಿಸಿ ಭಯದ ವಾತಾವರಣ ನಿರ್ಮಿಸುತ್ತಿದ್ದಾರೆ. ಆದರೆ, ಸಿದ್ದರಾಮಯ್ಯ ಅಧಿಕಾರ ಸ್ವೀಕರಿಸಿದ ಬಳಿಕ ಅನ್ನಭಾಗ್ಯ, ಹಿಂದುಳಿದ ವರ್ಗಗಳ ಅಭಿವೃದ್ಧಿ ಮಂಡಳಿ, ಅಲ್ಪ ಸಂಖ್ಯಾತರ ಮಂಡಳಿಯಲ್ಲಿದ್ದ ಬಡವರ ಸಾಲಮನ್ನಾ, ಕ್ಷೀರಭಾಗ್ಯದಂಥ ಜನಪರ ಕಲ್ಯಾಣ ಕಾರ್ಯಕ್ರಮ ಆರಂಭಿಸಿದರು’ ಎಂದು ವಿವರಿಸಿದರು.

**

₹ 29 ಲಕ್ಷ ನಗದು, 13 ವಾಹನ ವಶ

ಮೈಸೂರು: ಉಪಚುನಾವಣೆ ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿ ದಂತೆ ವಿವಿಧ ಪ್ರಕರಣಗಳಲ್ಲಿ ಇದುವರೆಗೆ ₹ 29.45 ಲಕ್ಷ ನಗದು ಹಾಗೂ 13 ವಾಹನಗಳನ್ನು ಚುನಾವಣಾಧಿಕಾರಿಗಳು ಜಪ್ತಿ ಮಾಡಿದ್ದಾರೆ.

ಹಲವಾರು ಪ್ರಕರಣಗಳಲ್ಲಿ ಎಫ್‌ಐಆರ್‌ ದಾಖಲಿಸಲಾಗಿದೆ. ಅಬಕಾರಿ ಇಲಾಖೆಯಿಂದ 173 ದಾಳಿ ನಡೆಸಿ, 108 ಲೀಟರ್‌ ಮದ್ಯ ವಶಕ್ಕೆ ಪಡೆಯಲಾಗಿದೆ  ಎಂದು ಜಿಲ್ಲಾ ಚುನಾವಣಾಧಿಕಾರಿ ತಿಳಿಸಿದ್ದಾರೆ.

**

ಜಿ.ಪಂ ಸದಸ್ಯೆ  ಕಾರು ವಶ

ಮೈಸೂರು: ಅನುಮತಿ ಪಡೆಯದೆ ಪ್ರಚಾರಕ್ಕೆ ವಾಹನ ಬಳಕೆ ಆರೋಪದ ಮೇಲೆ ಗುಂಡ್ಲುಪೇಟೆ ತಾಲ್ಲೂಕಿನ ಬೇಗೂರು ಜಿ.ಪಂ ಸದಸ್ಯೆ ರತ್ನಮ್ಮ ಕಾರನ್ನು ಚುನಾವಣಾಧಿ ಕಾರಿಗಳು ವಶಕ್ಕೆ ಪಡೆದಿದ್ದಾರೆ.

ನಂಜನಗೂಡು ತಾಲ್ಲೂಕಿನ ಮುಳ್ಳೂರಿನಲ್ಲಿ ಕೇಂದ್ರ ಸಚಿವ ಅನಂತಕುಮಾರ್ ಅವರು ನಡೆಸಿದ ಪ್ರಚಾರ ಸಭೆ ವೇಳೆ ವಶಕ್ಕೆ ಪಡೆಯ ಲಾಗಿದೆ. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತ ರಿಂದ ವಿರೋಧ ವ್ಯಕ್ತವಾಯಿತು.

**

ಬಿಎಸ್‌ವೈ, ಇಬ್ರಾಹಿಂ ವಿರುದ್ಧ ದೂರು

ಮೈಸೂರು:  ಬಿ.ಎಸ್‌.ಯಡಿಯೂರಪ್ಪ ಹಾಗೂ ಕಾಂಗ್ರೆಸ್‌ ಮುಖಂಡ ಸಿ.ಎಂ. ಇಬ್ರಾಹಿಂ ವಿರುದ್ಧ  ನೀತಿ ಸಂಹಿತೆ ಉಲ್ಲಂಘನೆಯಡಿ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಚುನಾವಣಾಧಿಕಾರಿಗಳು ದೂರು ದಾಖಲಿಸಿದ್ದಾರೆ.

ಪ್ರಚಾರಕ್ಕೆ ತೆರಳುತ್ತಿದ್ದಾಗ ತಮ್ಮ ವಾಹನಗಳನ್ನು ತಪಾಸಣೆ ನಡೆಸಲು ಪೊಲೀಸರಿಗೆ ಅವಕಾಶ ನೀಡದೆ ಇರುವುದು ಇದಕ್ಕೆ ಕಾರಣ ಎಂಬುದು ಗೊತ್ತಾಗಿದೆ. ಕತ್ವಾಡಿಪುರ ಚೆಕ್‌ ಪೋಸ್ಟ್‌ನಲ್ಲಿ ಈ ಘಟನೆ ನಡೆದಿದೆ.

**

ಪೊಲೀಸರು ನನ್ನ ವಾಹನ ವನ್ನೂ ತಪಾಸಣೆ ಮಾಡಿದ್ದಾರೆ. ಇನ್ನು ಪೊಲೀಸ್ ವಾಹನಗಳಲ್ಲಿ ಹಣ ಸಾಗಿಸಲು ಸಾಧ್ಯವಿಲ್ಲ. ಅದೇನಿದ್ದರೂ ಬಿಜೆಪಿಯವರ ಕೆಲಸ
-ಸಿದ್ದರಾಮಯ್ಯ, ಮುಖ್ಯಮಂತ್ರಿ

**

ಶ್ರೀನಿವಾಸಪ್ರಸಾದ್ ಅವರು ಸಿದ್ಧಾಂತಗಳನ್ನು ಬದಿಗೊತ್ತಿ ಕೋಮುವಾದಿಗಳ ಜೊತೆ ಸೇರಿರುವುದು ದುರಂತ. ಮತದಾರರು ಪಕ್ಷಗಳ ಕಾರ್ಯ ವೈಖರಿ ಗಮನಿಸಲಿ
-ಬಿ.ಕೆ.ಹರಿಪ್ರಸಾದ್‌, ಕಾಂಗ್ರೆಸ್‌ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT