3–4 ತಿಂಗಳಿನಲ್ಲಿ ಸಸಿ ಬೆಳೆದ ಮೇಲೆ ಒಂದು ಕುಂಡವನ್ನು ತೆಗೆದುಕೊಳ್ಳಿ. ಅದರಲ್ಲಿ ಗೊಬ್ಬರ ಮಿಶ್ರಿತ ಮಣ್ಣನ್ನು ಮುಕ್ಕಾಲು ಭಾಗ ತುಂಬಿ. ಸಸಿ ಬಿಟ್ಟ ಪ್ಲಾಸ್ಟಿಕ್ ಕುಂಡವನ್ನು ಕತ್ತರಿಸಿ, ಸಸಿಯನ್ನು ಹೊರಕ್ಕೆ ತೆಗೆಯಿರಿ. ನಿಧಾನವಾಗಿ ಬೇರು ಸಹಿತ ಕಿತ್ತು ಕುಂಡದಲ್ಲಿ ಹಾಕಿ ಮಣ್ಣನ್ನು ಸೇರಿಸಿ. ಚೆನ್ನಾಗಿ ನೀರು ಹಾಕಿ. ಮಣ್ಣು ಒಂದೂವರೆ ಇಂಚು ಒಳಗೆ ಹೋಗುವಷ್ಟು ನೀರು ಹಾಕಿ. ಸಸಿ ನಿಧಾನವಾಗಿ ಗಿಡವಾಗಿ ಹಣ್ಣು ನೀಡಲು ಆರಂಭಿಸುತ್ತವೆ.