ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಫ್ಘಾನಿಸ್ತಾನದಲ್ಲಿ ಸ್ಥಿರತೆ ತರಲು ಒಂದಾದ ಚೀನಾ, ರಷ್ಯಾ, ಪಾಕ್

Last Updated 3 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಇಸ್ಲಾಮಾಬಾದ್: ಯುದ್ಧಪೀಡಿತ ಅಫ್ಘಾನಿಸ್ತಾನದಲ್ಲಿ ಸ್ಥಿರತೆ ತರುವ ನಿಟ್ಟಿನಲ್ಲಿ ರಷ್ಯಾ, ಚೀನಾ ಹಾಗೂ ಪಾಕಿಸ್ತಾನ ಮೈತ್ರಿಕೂಟ ರಚಿಸಿಕೊಳ್ಳಲು ಸಿದ್ಧತೆ ನಡೆಸಿವೆ. ಐಎಸ್‌ ಉಗ್ರ ಸಂಘಟನೆ  ಬೆದರಿಕೆಯನ್ನು ಈ ಮೂರು ದೇಶಗಳು ಎದುರಿಸುತ್ತಿರುವುದೇ ಇದಕ್ಕೆ ಕಾರಣ ಎಂದು ಮಾಧ್ಯಮ  ವರದಿ ಮಾಡಿವೆ.

ತನ್ನ ಹಿತಾಸಕ್ತಿ ಕಾಯ್ದುಕೊಳ್ಳುವ ಸಲುವಾಗಿ ಆಫ್ಘಾನಿಸ್ತಾನದಲ್ಲಿ ಸ್ಥಿರತೆ ತರಲು ಅಮೆರಿಕ ಆಸಕ್ತಿ ತೋರುತ್ತಿಲ್ಲ ಎಂಬ ಸಂಶಯವೂ ರಷ್ಯಾ ಹಾಗೂ ಪಾಕಿಸ್ತಾನ ಈ ಮೈತ್ರಿಕೂಟ ಸೇರಲು ಬಲವಾದ ಕಾರಣ ಎಂದು ಎಕ್ಸ್‌ಪ್ರೆಸ್ ಟ್ರಿಬ್ಯೂನ್ ವರದಿ ಮಾಡಿದೆ.

ಆಫ್ಘನ್ ಸಮಸ್ಯೆಯನ್ನು ದೀರ್ಘಕಾಲ ಬೆಳೆಸಲು ಅಮೆರಿಕ ಉದ್ದೇಶಿಸಿದೆ ಎಂಬ ಕಾರಣಕ್ಕೆ ಮೂರು ದೇಶಗಳು ಈ ತೀರ್ಮಾನಕ್ಕೆ ಬಂದಿವೆ ಎನ್ನಲಾಗಿದೆ.

ಆಫ್ಘಾನಿಸ್ತಾನ ಸಮಸ್ಯೆ ಕುರಿತು ರಷ್ಯಾವು ಪಾಕ್ ಹಾಗೂ ಚೀನಾ ಅಧಿಕಾರಿಗಳ ಜತೆ ಈಗಾಗಲೇ ಎರಡು ಸುತ್ತಿನ ಮಾತುಕತೆಯನ್ನೂ ನಡೆಸಿದೆ.

ಆಫ್ಘಾನಿಸ್ತಾನದಲ್ಲಿ ಐಎಸ್‌ ಚಟುವಟಿಕೆ ಹೆಚ್ಚುತ್ತಿದ್ದು, ಪ್ರಾದೇಶಿಕವಾಗಿ ನೆರೆ ದೇಶಗಳಾದ ರಷ್ಯಾ, ಚೀನಾಕ್ಕೆ  ಭೀತಿ ಮೂಡಿದೆ.  ಈಗಾಗಲೇ ಸಾವಿರಾರು ಉಗ್ರರು ಸಿರಿಯಾ ಮೂಲಕ ಆಫ್ಘನ್ ಗಡಿ ಪ್ರವೇಶಿಸಿರುವ ಬಗ್ಗೆ ವರದಿಗಳಿದ್ದು, ಇದು ಆ ದೇಶವನ್ನು ಇನ್ನಷ್ಟು ಅಸ್ಥಿರಗೊಳಿಸುವ ಅಪಾಯವಿದೆ. ಚೀನಾ, ರಷ್ಯಾಗಳನ್ನು ಹತ್ತಿಕ್ಕುವುದು ಹಾಗೂ ತನ್ನ ಹಿತಾಸಕ್ತಿ ಕಾಯ್ದುಕೊಳ್ಳುವ ಉದ್ದೇಶದಿಂದ ಐಎಸ್‌ ಅನ್ನು ಅಮೆರಿಕವು ಗುರಾಣಿ ರೀತಿ ಬಳಸಿಕೊಳ್ಳುತ್ತಿದೆ ಎಂಬ ಸಂಶಯವೂ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT