ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ಮೊಬೈಲ್‌ ಆ್ಯಪ್‌ಗಳು

Last Updated 4 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ
ಕೋಟಕ್‌ 811
ಡಿಜಿಟಲ್‌ ಬ್ಯಾಂಕಿಂಗ್‌ ವ್ಯವಸ್ಥೆಗೆ ಪೂರಕವಾಗುವಂತೆ ಕೋಟಕ್‌ ಮಹೀಂದ್ರ ಬ್ಯಾಂಕ್‌ ‘811’ ಅಪ್ಲಿಕೇಷನ್‌ ಬಿಡುಗಡೆ ಮಾಡಿದೆ. “ಬಳಕೆ ಅತ್ಯಂತ ಸರಳವಾಗಿದೆ. ಕೇವಲ ಐದು ನಿಮಿಷದಲ್ಲಿ ಖಾತೆ ತೆರೆಯಬಹುದು. ಶೂನ್ಯ ಮೊತ್ತದ (zero balance) ಉಳಿತಾಯ ಖಾತೆ ತೆರೆಯಬಹುದು.

ಹಣ ವರ್ಗಾವಣೆಗೆ ಯಾವುದೇ ರೀತಿಯ ಶುಲ್ಕ ಇರುವುದಿಲ್ಲ. ಉಳಿತಾಯ ಖಾತೆಗೆ ಶೇ 6 ರವರೆಗೂ ಬಡ್ಡಿದರ ಪಡೆಯಬಹುದು. ಉಚಿತವಾಗಿ ಡೆಬಿಟ್‌ ಕಾರ್ಡ್ ಸಹ ನೀಡಲಾಗುವುದು’ ಎಂದು ಕಂಪೆನಿ ಕಾರ್ಯನಿರ್ವಾಹಕ ಉಪಾಧ್ಯಕ್ಷ ಉದಯ್‌ ಕೋಟಕ್‌ ಹೇಳುತ್ತಾರೆ.
 
ಆಧಾರ್‌ ಆಧಾರಿತ ಒಟಿಪಿ ದೃಢೀಕರಣ ವ್ಯವಸ್ಥೆಯ ಮೂಲಕ ಖಾತೆ ತೆರೆಯುವ ವ್ಯವಸ್ಥೆಯನ್ನು ದೇಶದಲ್ಲಿಯೇ ಮೊದಲ ಬಾರಿಗೆ ಕೋಟಕ್‌ ಬ್ಯಾಂಕ್‌ ಪರಿಚಯಿಸಿದೆ.  ಬ್ಯಾಂಕ್‌ ಖಾತೆ ನಿರ್ವಹಿಸಲು ಆಧಾರ್‌ ಮತ್ತು ಪ್ಯಾನ್‌ ಸಂಖ್ಯೆ ಇದ್ದರೆ ಸಾಕು ಎನ್ನುತ್ತಾರೆ ಅವರು.
 
ಹಣ ವರ್ಗಾವಣೆ, ಹೂಡಿಕೆ ನಿರ್ವಹಣೆ, ಇ–ಕಾಮರ್ಸ್‌, ಟಿಕೆಟ್‌ ಬುಕಿಂಗ್‌ ಹೀಗೆ 100ಕ್ಕೂ ಹೆಚ್ಚಿನ ಆಯ್ಕೆಗಳು ಈ ಆ್ಯಪ್‌ನಲ್ಲಿ ಲಭ್ಯವಿವೆ. ಇದು ಭಾರತ್‌ ಕ್ಯೂಆರ್‌ ಕೋಡ್‌ ಜತೆ ಸಂಯೋಜನೆಗೊಂಡಿದೆ. 
 
ಬುದ್ದಿಶಕ್ತಿ ಹೆಚ್ಚಿಸುವ ಗಣಿತದ ಗೇಮ್
ಸ್ಮಾರ್ಟ್ ಫೋನ್ ನಲ್ಲಿ ಗೇಮ್ ಆಡಿ ಬೋರ್ ಆದಾಗ ಏನು ಮಾಡುವುದು ಎಂಬ ಚಿಂತೆಯೇ? ಈ ಚಿಂತೆಯ ಪರಿಹಾರಾರ್ಥವಾಗಿ ಜಪಾನ್ ದೇಶದ ‘ಸಿಲಿಕಾನ್ ಸ್ಟುಡಿಯೋ’ ಎಂಬ ವಿಡಿಯೊ ಗೇಮ್ ವಿನ್ಯಾಸ ಕಂಪೆನಿ ಹೊಸ ಗಣಿತದ ಗೇಮ್ ಅನ್ನು ವಿನ್ಯಾಸ ಮಾಡಿದೆ. ಈ ಗೇಮ್ ಆಡುವುದರಿಂದ ಬುದ್ದಿಶಕ್ತಿ ಹಾಗೂ ಸ್ಮರಣ ಶಕ್ತಿ ಹೆಚ್ಚಲಿದೆ ಎಂದು ಕಂಪೆನಿಯು ಪ್ರಕಟಣೆಯಲ್ಲಿ ತಿಳಿಸಿದೆ.
 
ಅಂಕಗಣಿತದಲ್ಲಿ ಬರುವ ದಶಮಾನ ಪದ್ಧತಿ, ಲಸಾಅ, ಮಸಾಅ, ಸರಳ ಬಡ್ಡಿ ಸೂತ್ರಗಳು, ಸಂಕಲನ, ವ್ಯವಕಲನ, ಗುಣಾಕಾರದ ಲೆಕ್ಕಗಳ ಹಾಗೂ ವಿಜ್ಞಾನ ವಿಷಯಗಳ ಮೂಲಕ ಬಳಕೆದಾರರು ರಂಜನೀಯವಾಗಿ ಆಟ ಆಡಬಹುದು ಎನ್ನುತ್ತಾರೆ ಈ ಗೇಮ್ ವಿನ್ಯಾಸಕರು.

ಈ ಗೇಮ್ ಅನ್ನು ಹತ್ತು ಹಂತಗಳಲ್ಲಿ ವಿನ್ಯಾಸ ಮಾಡಲಾಗಿದೆ. ಗಣಿತ ಜತೆಗೆ ಜೀವಶಾಸ್ತ್ರ ಸೇರಿದಂತೆ ವಿಜ್ಞಾನ ವಿಷಯವನ್ನು ಕಲಿಯಬಹುದು. ಹತ್ತು ಹಂತಗಳನ್ನು ಯಶಸ್ವಿಯಾಗಿ ಪೂರೈಸಿದವರು ಆಟದ ವಿಜಯಶಾಲಿಗಳಾಗುತ್ತಾರೆ. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣವನ್ನು ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಈ ಆ್ಯಪ್ ಬಹು ಉಪಯುಕ್ತವಾಗಿದೆ ಎಂಬುದು ವಿನ್ಯಾಸಕರ ಅಭಿಮತ.
ಗೂಗಲ್ ಫ್ಲೇಸ್ಟೋರ್: algorithm game app
 
ಮೊಬೈಲ್‌ ಪಾವತಿಗೆ ಸ್ಯಾಮ್ಸಂಗ್‌ ಪೇ
ಸ್ಯಾಮ್ಸಂಗ್‌ ಎಲೆಕ್ಟ್ರಾನಿಕ್ಸ್‌ ಕಂಪೆನಿ ಭಾರತದಲ್ಲಿ ‘ಸ್ಯಾಮ್ಸಂಗ್‌ ಪೇ’ ಎಂಬ ಮೊಬೈಲ್‌ ಪಾವತಿ ಆ್ಯಪ್‌ ಬಿಡುಗಡೆ ಮಾಡಿದೆ. ಈ ಆ್ಯಪ್‌ ಬಳಸಿ ತಕ್ಷಣಕ್ಕೆ ಸುಲಭವಾಗಿ ಹಣ ವರ್ಗಾವಣೆ ಮಾಡಬಹುದಾಗಿದೆ. ಬಳಕೆದಾರರು ಮೊದಲಿಗೆ ತಮ್ಮ ಬ್ಯಾಂಕ್‌ ಖಾತೆ ಮತ್ತು ಕಾರ್ಡನ್ನು ಆ್ಯಪ್‌ ಜತೆ ಸಂಪರ್ಕಿಸಬೇಕು. ಆ ಬಳಿಕ ಹಣ ಪಾವತಿ ಆರಂಭಿಸಬಹುದು ಎಂದು ಸ್ಯಾಮ್ಸಂಗ್‌ ಇಂಡಿಯಾ ಉಪಾಧ್ಯಕ್ಷ ಆಸಿಂ ವಾರ್ಸಿ ತಿಳಿಸಿದ್ದಾರೆ.

ಪೇಟಿಎಂ ಮತ್ತು ಯುಪಿಐ ಸೌಲಭ್ಯಗಳನ್ನೂ ಈ ಆ್ಯಪ್‌ ಒಳಗೊಂಡಿದೆ. ಇದು ಹೆಚ್ಚಿನ ಸುರಕ್ಷತೆಯಿಂದ ಕೂಡಿದೆ. ಬೆರಳಚ್ಚು (ಫಿಂಗರ್‌ಪ್ರಿಂಟ್‌) ದೃಢೀಕರಣ ಅಥವಾ ನಾಲ್ಕು ಸಂಖ್ಯೆಯ ಪಿನ್‌ ಬಳಸಿ ಹಣ ವರ್ಗಾವಣೆ ಅಥವಾ ಪಾವತಿ ಮಾಡಬಹುದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT