ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಡಾಕ್‌ನಲ್ಲಿ ಹಿಮಕುಸಿತ; ಹಿಮದಡಿ ಸಿಲುಕಿರುವ ಐವರು ಯೋಧರು, ಇಬ್ಬರ ರಕ್ಷಣೆ

Last Updated 6 ಏಪ್ರಿಲ್ 2017, 17:07 IST
ಅಕ್ಷರ ಗಾತ್ರ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಲಡಾಕ್‌ ಪ್ರದೇಶದ ಸೇನಾ ವಲಯದಲ್ಲಿ ಹಿಮಪಾತವಾಗಿದ್ದು ಐವರು ಯೋಧರು ಹಿಮದಡಿ ಸಿಲುಕಿದ್ದಾರೆ.

ಇಲ್ಲಿನ ಬಟಾಲಿಕ್‌ ವಲಯದಲ್ಲಿ ಹಲವು ಬಾರಿ ಹಿಮಕುಸಿತವಾಗಿದೆ. ಹಿಮದ ಅಡಿಯಲ್ಲಿ ಭಾರತೀಯ ಸೇನೆಯ ಐವರು ಯೋಧರು ಸಿಲುಕಿದ್ದರು. ವಿಶೇಷವಾಗಿ ತರಬೇತಿ ಪಡೆದಿರುವ ಹಿಮಪಾತದಲ್ಲಿ ರಕ್ಷಣಾ ಕಾರ್ಯ ನಡೆಸುವ ತಂಡವು ಇಬ್ಬರು ಸೈನಿಕರನ್ನು ರಕ್ಷಿಸಿದ್ದು, ಉಳಿದವರ ರಕ್ಷಣೆಗಾಗಿ ಪ್ರಯತ್ನಿಸಲಾಗುತ್ತಿದೆ.

ಬುಧವಾರದಿಂದ ಶ್ರೀನಗರದಲ್ಲಿ 83.9 ಮಿ.ಮೀ. ಮಳೆ ಹಾಗೂ ಹಿಮ ಸುರಿದಿದೆ. ದಕ್ಷಿಣ ಕಾಶ್ಮೀರದಲ್ಲಿ 69.9 ಮಿ.ಮೀ. ಮಳೆಯಾಗಿದೆ.

ಈ ವರ್ಷದ ಜನವರಿಯಲ್ಲಿ ದೇಶದ ಬೇರೆ ಬೇರೆ ವಲಯಗಳಲ್ಲಿ ಆಗಿರುವ ಹಿಮಪಾತದಲ್ಲಿ ಮೇಜರ್‌ ಮತ್ತು ಜೂ.ಕಮಿಷನ್ಡ್‌ ಆಫೀಸರ್‌ ಸೇರಿದಂತೆ 20 ಯೋಧರು ಸಾವಿಗೀಡಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT