ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹ್ಯಾಪಿ ನ್ಯೂ ಇಯರ್’ ಸೆನ್ಸಾರ್ ಮನೆಗೆ

Last Updated 6 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ
ಪನ್ನಗಭರಣ ನಿರ್ದೇಶನದ ‘ಹ್ಯಾಪಿ ನ್ಯೂ ಇಯರ್’ ಈಗಲೇ ವಿದೇಶದಲ್ಲಿ ಬಿಡುಗಡೆಯಾಗಲು ಸಿದ್ಧತೆ ನಡೆಸುತ್ತಿದೆ. ಈ ಚಿತ್ರದಲ್ಲಿ ಐವರು ವ್ಯಕ್ತಿಗಳ ಭಿನ್ನ ಕಥೆಯನ್ನು ಸಂಗಮವಾಗಿಸಿದ್ದಾರಂತೆ ನಿರ್ದೇಶಕ ಪನ್ನಗಭರಣ ಅವರು. 
 
ಸ್ಲಮ್ ರೌಡಿಯಾಗಿ ಬಿ.ಸಿ. ಪಾಟೀಲ್ ಅವರೇ ಪಾತ್ರ ಮಾಡಿದ್ದಾರೆ, ಸಾಫ್ಟ್‌ವೇರ್‌ ಉದ್ಯೋಗಿ ಆಗಿ ದಿಗಂತ್ ಪಾತ್ರವಿದೆ. ಐದು ಹಾಡುಗಳಿಗೆ ರಘು ದೀಕ್ಷಿತ್‌ ಸಂಗೀತ ಸಂಯೋಜಿಸಿದ್ದಾರೆ. ಸದಕ್ಕೆ ‘ಹ್ಯಾಪಿ ನ್ಯೂ ಇಯರ್’ ರೀರೆಕಾರ್ಡಿಂಗ್ ಹಂತದಲ್ಲಿದೆ. 
 
ವಿಜಯ ರಾಘವೇಂದ್ರ, ದಿಗಂತ್, ಧನಂಜಯ್, ಬಿ. ಸಿ. ಪಾಟೀಲ್, ಸಾಯಿಕುಮಾರ್, ಶ್ರುತಿ ಹರಿಹರನ್, ಸೋನು ಗೌಡ, ಸುಧಾರಾಣಿ, ಸೃಷ್ಟಿ ಪಾಟೀಲ್, ಮಾಳವಿಕಾ ಅವಿನಾಶ್, ರಾಕ್‌ಲೈನ್ ವೆಂಕಟೇಶ್, ಕಡ್ಡಿಪುಡಿ ಚಂದ್ರು, ತಬಲಾ ನಾಣಿ, ರಾಜು ತಾಳಿಕೋಟೆ, ರಾಜಶ್ರೀ ಪೊನ್ನಪ್ಪ,ಮಾರ್ಗರೀಟ ತಾರಾಗಣದಲ್ಲಿದ್ದಾರೆ.
 
ಅಂಚೆ ಚೀಟಿಯಲ್ಲಿ ‘ಹಳ್ಳಿ ಸೊಗಡು’
ಕಳೆದ 28 ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಸುಮಾರು 95ಕ್ಕೂ ಹೆಚ್ಚು ಚಲನಚಿತ್ರಗಳ ಹಾಡುಗಳಿಗೆ ನೃತ್ಯನಿರ್ದೇಶನ ಮಾಡುವುದರ ಮೂಲಕ ಹಾಡುಗಳಿಗೆ ಹೊಸ ರೂಪ ತುಂಬಿರುವ, ಇತ್ತೀಚೆಗೆ ಚಿತ್ರರಂಗದಲ್ಲಿ ನಿರ್ದೇಶಕನಾಗಿ ಇಂಡಸ್ಟ್ರಿಯಲ್ಲಿ ಹೊಸ ಹೆಜ್ಜೆಯನ್ನು ಇಟ್ಟಿದ್ದರು. ಅವರ ನಿರ್ದೇಶನ ಸಾರಥ್ಯದಲ್ಲಿ ಮೂಡಿಬಂದಿರುವ ವಿಭಿನ್ನ ಶೈಲಿಯ ಚಿತ್ರ ಹಳ್ಳಿ ಸೊಗಡು.
 
ಹಿರಿಯ ಸಾಹಿತಿ ದೊಡ್ಡರಂಗೇಗೌಡ ಅವರ ಅಪ್ಪಟ ಅಭಿಮಾನಿಯೊಬ್ಬನ ಜೀವನದ ಕಥಾಹಂದರವನ್ನು ಹೊಂದಿರುವ ‘ಹಳ್ಳಿ ಸೊಗಡು’ ಚಿತ್ರ ಬಿಡುಗಡೆಯ ಹಂತ ತಲುಪಿದೆ. ಎಂ.ಆರ್. ಕಪಿಲ್ ಈ ಚಿತ್ರವನ್ನು ನಿರ್ದೆಶಿಸಿದ್ದಾರೆ.
 
ಚಿತ್ರದ ಪ್ರಚಾರಕ್ಕಾಗಿ ಭಾಗವಾಗಿ ಸಿನಿಮಾದ ಪ್ರಚಾರದ ಪೋಸ್ಟರ್‌ಗಳು ಹಾಗೂ ದೊಡ್ಡರಂಗೇಗೌಡರ ಚಿತ್ರವನ್ನೊಳಗೊಂಡ ಮೈ ಸ್ಟಾಂಪ್ ಎಂಬ ವಿಶೇಷ ಅಂಚೆ ಚೀಟಿಯ ಬಿಡುಗಡೆ ಮಾಡಲಾಗಿದೆ.

ಈ ಅಂಚೆ ಚೀಟಿಯು ಭಾರತ ಸರ್ಕಾರದಿಂದ ಮಾನ್ಯತೆ ಪಡೆದಿದ್ದು, ಸಾಮಾನ್ಯ ಅಂಚೆ ಚೀಟಿಯಂತೆ ಇದನ್ನೂ ಕೂಡ ಪತ್ರ ವ್ಯವಹಾರಕ್ಕೆ ಬಳಸಬಹುದಾಗಿದೆ. ಕುಮಾರ್ ಬಂಗಾರಪ್ಪ ಮತ್ತು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಜಿ. ಸಿದ್ದರಾಮಯ್ಯ ಈ ವಿಶೇಷ ಅಂಚೆಚೀಟಿಗಳನ್ನು ಬಿಡುಗಡೆ ಮಾಡಿದರು. 
 
ಪಿ.ಸತೀಶ್‌ಕುಮಾರ್ ಮೆಹ್ತಾ ಈ ಚಿತ್ರಕ್ಕೆ ಹಣ ಹೂಡಿದ್ದಾರೆ. ಅರವ್ ಸೂರ್ಯ ಹಾಗೂ ಅಕ್ಷರಾ ನಾಯಕ-ನಾಯಕಿಯರಾಗಿ ಅಭಿನಯಿಸಿರುವ ಈ ಚಿತ್ರದಲ್ಲಿ ಸಾಹಿತಿ ದೊಡ್ಡರಂಗೇಗೌಡ ಅವರೂ ನಟಿಸಿದ್ದಾರೆ. ದೊಡ್ಡರಂಗೇಗೌಡರ ಪುತ್ರ ಭರತ್ ಕೂಡ ಈ ಚಿತ್ರಕ್ಕೆ ಸಾಹಿತ್ಯ ಬರೆದಿದ್ದಾರೆ. ರಾಗರಮಣ ಅವರು ಸಂಗೀತ ಸಂಯೋಜಿಸಿದ್ದಾರೆ.
 
ಕತಾರ್‌ನಲ್ಲಿ ‘ಮಾಸ್ ಲೀಡರ್’ ಹಾಡು
ಶಿವರಾಜಕುಮಾರ್ ನಾಯಕರಾಗಿ ನಟಿಸುತ್ತಿರುವ ‘ಮಾಸ್ ಲೀಡರ್‘ ಚಿತ್ರಕ್ಕಾಗಿ ವಿ.ನಾಗೇಂದ್ರಪ್ರಸಾದ್ ಬರೆದ ‘ಏನಿದೆ ನಿನ್ನ ಕಣ್ಣಲಿ ಹೇಳು ಪಿಸು ಮಾತಲಿ’ ಹಾಡಿನ ಚಿತ್ರೀಕರಣ ಕತಾರ್‌ನ ರಮಣೀಯ ಸ್ಥಳಗಳಲ್ಲಿ ಮೂರು ದಿನಗಳ ಕಾಲ ನಡೆದಿದೆ. ಶಿವರಾಜಕುಮಾರ್, ಪ್ರಣೀತಾ ಅಭಿನಯಿಸಿದ ಈ ಹಾಡಿಗೆ ಭೂಷಣ್ ನೃತ್ಯ ನಿರ್ದೇಶನ ಮಾಡಿದ್ದಾರೆ. 
 
ನರಸಿಂಹ(ಸಹನಾಮೂರ್ತಿ) ನಿರ್ದೇಶನದ ಈ ಚಿತ್ರಕ್ಕೆ ತರುಣ್ ಶಿವಪ್ಪ ಮತ್ತು ಹಾರ್ದಿಕ್ ಗೌಡ ನಿರ್ಮಾಣವಿದೆ. ವೀರಸಮರ್ಥ್ ಸಂಗೀತ ನಿರ್ದೇಶನ, ಗುರುಪ್ರಶಾಂತ್ ರೈ ಛಾಯಾಗ್ರಹಣ ಹಾಗೂ ಕೆ.ಎಂ. ಪ್ರಕಾಶ್ ಸಂಕಲನವಿದೆ.
 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT