ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶುಕ್ರವಾರ, 7–4–1967

Last Updated 6 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಪಾರ್ಲಿಮೆಂಟರಿ ಸಮಿತಿಯಿಂದ ಭೂಸ್ವಾಧೀನ ಶಾಸನ ಪರಿಶೀಲನೆ
ನವದೆಹಲಿ, ಏ. 6–
ಭೂಸ್ವಾಧೀನ ಶಾಸನದ ‘ಇಡೀ ಯೋಜನೆ’ಯನ್ನು ಪರಿಶೀಲಿಸಲು ಶೀರ್ಘದಲ್ಲೇ ಪಾರ್ಲಿಮೆಂಟರಿ ಸಮಿತಿಯೊಂದನ್ನು ರಚಿಸಲಾಗುವುದು.

ಕೇಂದ್ರದ ಆಹಾರ ಹಾಗೂ ವ್ಯವಸಾಯ ಸಚಿವ ಶಾಖೆಯ ಸ್ಟೇಟ್‌ ಸಚಿವ ಶ್ರೀ ಅಣ್ಣಾ ಸಾಹಿದ್‌ ಶಿಂದೆ ಅವರು ಈ ವಿಷಯವನ್ನು ಇಂದು ಲೋಕಸಭೆಯಲ್ಲಿ ಪ್ರಕಟಿಸಿದರು.

ಸಮಿತಿಯ ವರದಿ ಬಂದ ಬಳಿಕ ಹೊಸ ಶಾಸನವನ್ನು ಮುಂದೆ ತರಲಾಗುವುದು  ಎಂದು ಸಚಿವರು ಈ ಪ್ರಕಟಣೆ ಮಾಡಿದರು.

ಪುಣೆಯಲ್ಲಿ ಮಹಾಜನ್‌ ಆಯೋಗ ಸಾಕ್ಷ್ಯ ಸಂಗ್ರಹ
ಪುಣೆ, ಏ. 6–
ಮಹಾರಾಷ್ಟ್ರ– ಮೈಸೂರು ಗಡಿ ವಿವಾದ ಇತ್ಯರ್ಥಕ್ಕೆ ನೇಮಕಗೊಂಡಿರುವ ಏಕಸದಸ್ಯ ಮಹಾಜನ್‌ ಮಂಡಲಿಯು ಪುಣೆಯಲ್ಲಿ ತನ್ನ ಅಧಿವೇಶನದ ಎರಡನೆಯ ದಿನವಾದ ಇಂದು 13 ಜನ ಮಹನೀಯರನ್ನು ಸಂದರ್ಶಿಸಿತು.

ಇಂದು ಸಾಕ್ಷ್ಯ ನೀಡಿದವರಲ್ಲಿ ಪುಣೆ ವಿಶ್ವವಿದ್ಯಾನಿಲಯದ ಭಾಷಾಶಾಸ್ತ್ರ ಪ್ರಾಧ್ಯಾಪಕರಾದ ಡಾ. ಎ.ಎಂ. ಘಟಗೆ, ಪ್ರೊ. ಅರವಿಂದ ಮಂಗ್ರೂಲ್ಕರ್‌, ಖ್ಯಾತ ಮರಾಠಿ ನಾಟಕಕಾರ ಪದ್ಮಶ್ರೀ ಪು.ಲ. ದೇಶಪಾಂಡೆ, ಖ್ಯಾತ ಮರಾಠಿ ಸಾಹಿತಿ  ರಣಜಿತ್‌ ದೇಸಾಯಿ ಮೊದಲಾದ ಪ್ರತಿಭಾವಂತರಿದ್ದರು.

ಬಿರ್ಲಾ ಗುಂಪಿಗೆ 10 ವರ್ಷದಲ್ಲಿ 375 ಲೈಸನ್ಸ್‌
ನವದೆಹಲಿ. ಏ. 6–
ಬಿರ್ಲಾ ಗುಂಪಿನ ಉದ್ಯಮ ಸಂಸ್ಥೆಗಳಿಗೆ ಕಳೆದ ಹತ್ತು ವರ್ಷಗಳಲ್ಲಿ 375 ಕೈಗಾರಿಕಾ ಲೈಸನ್‌್ಸಗಳನ್ನು ನೀಡಲಾಗಿದೆಯೆಂಬ ವರದಿಯು ರಾಜ್ಯಸಭೆಯಲ್ಲಿ ಚರ್ಚೆಗೊಳಗಾಯಿತು.

ಸರಕಾರದ ಲೈಸನ್ಸ್‌ ನೀಡಿಕೆ ನೀತಿ ಬಗ್ಗೆ ಪ್ರೊ. ಹಜಾರೆ ಅವರು ನಡೆಸುತ್ತಿರುವ ಪರಿಶೀಲನೆಯ ತಾತ್ಕಾಲಿಕ ವರದಿಯನ್ನು ಕಾಂಗ್ರೆಸ್‌ ಸದಸ್ಯ ಚಂದ್ರಶೇಖರ್‌ ಅವರು ಉಲ್ಲೇಖಿಸಿ ಮೇಲಿನ ಅಂಶಗಳನ್ನು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT