ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಡಿಯುವ ನೀರಿಗೆ ಕೆರೆ ನಿರ್ಮಾಣ

Last Updated 7 ಏಪ್ರಿಲ್ 2017, 9:47 IST
ಅಕ್ಷರ ಗಾತ್ರ

ಮಸ್ಕಿ: ಪಟ್ಟಣದ ತುಂಗಭದ್ರಾ ಎಡದಂಡೆ ಕಾಲುವೆ ಪಕ್ಕದಲ್ಲಿ ನಿರ್ಮಿಸಿ ರುವ ಶುದ್ಧ ಕುಡಿಯುವ ನೀರಿನ ಕೆರೆಯಲ್ಲಿ ನೀರಿನ ಪ್ರಮಾಣ ಬುಧವಾರ 5 ಅಡಿಗೆ ಕುಸಿದಿದೆ.

ಪಟ್ಟಣದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗುವ ಸಾಧ್ಯತೆ ಇದೆ. ನೀರಿನ ಸಮಸ್ಯೆಯನ್ನು ಸವಾಲಾಗಿ ಸ್ವೀಕ ರಿಸಿರುವ ಪುರಸಭೆ ಆಡಳಿತ  ನೀರಿನ ಸಮಸ್ಯೆ ಉಲ್ಬಣಗೊಳ್ಳದಂತೆ ಯೋಜನೆ ರೂಪಿಸಿದೆ.

ಈಗಿರುವ ಕೆರೆಯ ನೀರು ಇಲ್ಲಿಯ ಸಾರ್ವಜನಿಕರಿಗೆ ಸಾಕಾಗುತ್ತಿಲ್ಲ ಎಂಬ ಕಾರಣಕ್ಕೆ 14ನೇ ಹಣಕಾಸು ಯೋಜನೆ ಯಲ್ಲಿ ₹ 25 ಲಕ್ಷ ವೆಚ್ಚದಲ್ಲಿ ಕೆರೆಯ ಪಕ್ಕದಲ್ಲಿ ಮತ್ತೊಂದು ಕೆರೆ ನಿರ್ಮಿಸಿ ನೀರು ಸಂಗ್ರಹಿಸಲು ಆಡಳಿತ ಮಂಡಳಿ ಮುಂದಾಗಿದೆ.

ಹೊಸ ಕೆರೆಯ ಕಾಮಗಾರಿ ಭರದಿಂದ ಸಾಗಿದ್ದು, ಒಂದು ವಾರದಲ್ಲಿ  ಪೂರ್ಣಗೊಳ್ಳುವ ಸಾಧ್ಯತೆ ಇದೆ. ಬುಧವಾರ ಪುರಸಭೆ ಉಪಾಧ್ಯಕ್ಷ ರವಿ ಕುಮಾರ ಪಾಟೀಲ, ಸದಸ್ಯರಾದ ಎಂ. ಅಮರೇಶ, ನೀಲಕಂಠಪ್ಪ ಭಜಂತ್ರಿ, ಶರಣಯ್ಯ ಸೊಪ್ಪಿಮಠ, ಮುಖ್ಯಾಧಿಕಾರಿ ರೆಡ್ಡಿರಾಯನಗೌಡ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಏ. 10 ರಿಂದ ಕೊಪ್ಪಳ ರಾಯ ಚೂರು ಜಿಲ್ಲೆಯ ಜನರಿಗೆ ಕುಡಿಯವ ನೀರಿಗಾಗಿ ತುಂಗಭದ್ರಾ ಜಲಾಶ ಯದಿಂದ ಎಡದಂಡೆ ಕಾಲುವೆ ಮೂಲಕ ನೀರು ನೀಡು ಬಿಡುವ ಸಾಧ್ಯತೆ ಇದ್ದು, ಅಷ್ಟರೊಳಗೆ ಕಾಮಗಾರಿ ಪೂರ್ಣಗೊ ಳಿಸಿ ನೀರು ತುಂಬಿಸಿ ಕೊಂಡರೆ ಮುಂದಿನ ಎರಡು ತಿಂಗಳು ನೀರಿನ ಸಮಸ್ಯೆ ಉಂಟಾಗುವುದಿಲ್ಲ ಎಂದು ಪುರಸಭೆ ಮುಖ್ಯಾಧಿಕಾರಿ ರೆಡ್ಡಿ ರಾಯನ ಗೌಡ ತಿಳಿಸಿದ್ದಾರೆ.

ಹಳೆಯ ಹಾಗೂ ಹೊಸ ಕೆರೆ ಭರ್ತಿ ಮಾಡಿಕೊಳ್ಳಲು 5 ಕ್ಕೂ ಹೆಚ್ಚು ಪಂಪ್‌ ಸೆಟ್‌ಗಳನ್ನು ಅಳ ವಡಿ ಸಿಲಾಗುವುದು ಎಂದರು.

20 ಅಡಿ ನೀರು ಸಂಗ್ರಹ ಸಾಮರ್ಥ್ಯ ಇರುವ ಹಳೆಯ ಕೆರೆಯಲ್ಲಿ ನೀರಿನ ಪ್ರಮಾಣ ಗಣನೀಯವಾಗಿ ಕುಸಿದಿದೆ. ಲಭ್ಯ ಮಾಹಿತಿ ಪ್ರಕಾರ ಒಂದು ವಾರಕ್ಕೆ ಮಾತ್ರ ಈ ನೀರು ಸಾಕಾಗುತ್ತದೆ. ಅಷ್ಟರೊ ಳಗೆ ಎಡದಂಡೆ ಕಾಲುವೆಗೆ ನೀರು ಬಂದರೆ ನೀರಿನ ಸಮಸ್ಯೆ ಇಲ್ಲ. ಒಂದು ವೇಳೆ ನೀರು ಬಿಡುವುದು ತಡ ವಾದರೆ ಪಟ್ಟಣದಲ್ಲಿ ನೀರಿಗೆ ಹಾಹಾ ಕಾರ ಉಂಟಾಗುವ ಸಾಧ್ಯತೆ ಇದೆ. ಬೇಸಿಗೆ ಯಲ್ಲಿ ನೀರಿನ ಸಮಸ್ಯೆ ಉಂಟಾ ಗದಂತೆ  ಪುರಸಭೆ ಆಡಳಿತ ಮಂಡಳಿ ಖಾಸಗಿ ವ್ಯಕ್ತಿಗಳ ಕೊಳವೆ ಬಾವಿಗಳ ಸಹಕಾರ ಪಡೆದುಕೊಂಡಿದೆ. ವಡ್ಡರ್ ಓಣಿ, ಪಿಂಜಾರ ಓಣಿ ಸೇರಿದಂತೆ ಕೆಲ ಓಣಿಗಳಿಗೆ ನೀರು ಪೂರೈಸಲು ಮುನಿ ಯಪ್ಪ ಕರ್ಲಿ ಅವರ ಕೊಳವೆ ಬಾವಿ ಬಳಸಿ ಕೊಳ್ಳಲಾಗಿದೆ.

1ನೇ ವಾರ್ಡ್‌ಗೆ ನೀರು ಪೂರೈಸಲು ಬಸವೇಶ್ವರ ನಗರದ ಕೆಲ ಖಾಸಗಿ ವ್ಯಕ್ತಿಗಳ  ಕೊಳವೆ ಬಾವಿ ಗಳನ್ನು ಪುರಸಭೆ ಬಳಸಿಕೊಳ್ಳಲಾಗಿದೆ. ಇದರ ಜತೆಗೆ ಕುಡಯುವ ನೀರಿನ ಸಮಸ್ಯೆ ಉಂಟಾಗದಂತೆ ನೋಡಕೊಳ್ಳಲು ಟ್ಯಾಂಕರ್‌ ಮೂಲಕವೂ ನೀರು ಪೂರೈಸಲು ಕ್ರಮ ಕೈಗೊಳ್ಳಲಾಗಿದೆ.

***

ಪಟ್ಟಣದ ಕುಡಿವ ನೀರಿನ  ಕೆರೆಯ ಪಕ್ಕದಲ್ಲಿ 14ನೇ ಹಣಕಾಸು ಯೋಜನೆಯಲ್ಲಿ ಮತ್ತೊಂದು ಕೆರೆ ನಿರ್ಮಾಣ ಮಾಡ ಲಾಗುತ್ತಿದೆ
-ಮೌನೇಶ ಮುರಾರಿ, ಪುರಸಭೆ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT