ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾನಕ್ಕೆ ಅಗತ್ಯ ಸಿದ್ಧತೆ ಪೂರ್ಣ

Last Updated 8 ಏಪ್ರಿಲ್ 2017, 5:58 IST
ಅಕ್ಷರ ಗಾತ್ರ

ಚಾಮರಾಜನಗರ: ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯು ಏ. 9ರಂದು ನಡೆಯಲಿದ್ದು, ನ್ಯಾಯಯುತ ಹಾಗೂ ಪಾರದರ್ಶಕವಾಗಿ ಚುನಾವಣೆ ನಡೆಸಲು ಜಿಲ್ಲಾ ಚುನಾವಣಾ ಆಯೋಗ ಅಗತ್ಯ ಸಿದ್ಧತೆಕೈಗೊಂಡಿದೆ.

ಅಂದು ಬೆಳಿಗ್ಗೆ 7ಗಂಟೆಯಿಂದ ಮತದಾನ ಆರಂಭವಾಗಲಿದ್ದು, ಸಂಜೆ 5ಗಂಟೆಗೆ ಮುಕ್ತಾಯವಾಗಲಿದೆ. ಗುಂಡ್ಲುಪೇಟೆ ಪಟ್ಟಣದ ಸೇಂಟ್‌ಜಾನ್‌ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಸ್ಟರಿಂಗ್‌ ಮತ್ತು ಡಿಮಸ್ಟರಿಂಗ್ ಕೇಂದ್ರ ತೆರೆಯಲಾಗಿದೆ. ವೆಬ್‌ಕ್ಯಾಸ್ಟಿಂಗ್‌ ಕೂಡ ಮಾಡಲಾಗುತ್ತದೆ.

ಪ್ರತಿ ಮತಗಟ್ಟೆಗೆ ಒಬ್ಬ ಪ್ರಿಸೈಡಿಂಗ್‌ ಅಧಿಕಾರಿ, ಒಬ್ಬ ಮೊದಲನೇ ಮತಗಟ್ಟೆ ಅಧಿಕಾರಿ, ಇಬ್ಬರು ಮತದಾನ ಅಧಿಕಾರಿ ಸೇರಿದಂತೆ ಮತ ಖಾತರಿ ಯಂತ್ರಗಳ(ವಿವಿ ಪ್ಯಾಟ್‌) ಕಾರ್ಯ ನಿರ್ವಹಣೆಗೂ ಅಧಿಕಾರಿಯನ್ನು ನಿಯೋ ಜಿಸಲಾಗಿದೆ. ಒಟ್ಟು 250 ಮತಗಟ್ಟೆಗಳಿಗೆ 1,375 ಚುನಾ ವಣಾ ಸಿಬ್ಬಂದಿ ನಿಯೋಜಿಸ ಲಾಗಿದೆ. ಪ್ರತಿ ಮತಗಟ್ಟೆ ಯಲ್ಲೂ ಕೇಂದ್ರ ಸರ್ಕಾರದ ಒಬ್ಬ ಸೂಕ್ಷ್ಮ ವೀಕ್ಷಕರು ಹಾಜರಿರಲಿದ್ದಾರೆ. ಒಟ್ಟು 270 ವೀಕ್ಷಕರು ನಿಯೋಜನೆ ಗೊಂಡಿದ್ದಾರೆ.

‘ಏ. 13ರಂದು ಮತ ಎಣಿಕೆ ನಡೆಯಲಿದೆ. ಕ್ಷೇತ್ರದ ವ್ಯಾಪ್ತಿಯ ಎಲ್ಲ ಮತಗಟ್ಟೆಗಳ ಮತ ದಾರರ ಪಟ್ಟಿಯನ್ನು ರಾಜಕೀಯ ಪಕ್ಷಗಳಿಗೆ ಉಚಿತವಾಗಿ ನೀಡಲಾಗಿದೆ. ಚುನಾವಣಾ ಸಾಮಾನ್ಯ ವೀಕ್ಷಕರು, ವಿಶೇಷ ವೀಕ್ಷಕರು, ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳ ಸಮ್ಮುಖದಲ್ಲಿ ವಿದ್ಯುನ್ಮಾನ ಮತಯಂತ್ರ ಗಳ(ಇವಿಎಂ) ರ್‌್ಯಾಂಡಮೈಸೇಷನ್‌ ಪ್ರಕ್ರಿಯೆ ನಡೆಸ ಲಾಗಿದೆ’ ಎಂದು ಜಿಲ್ಲಾ ಚುನಾವಣಾಧಿಕಾರಿ ಬಿ. ರಾಮು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಇವಿಎಂಗಳಲ್ಲಿ ತಾಂತ್ರಿಕ ದೋಷ ಕಂಡುಬಂದರೆ ಸರಿಪಡಿಸಲು ಬಿಇಎಲ್‌ನ 19 ಮಂದಿ ವಿದ್ಯುನ್ಮಾನ ಮತ ಯಂತ್ರ ತಂತ್ರಜ್ಞರು ಚುನಾವಣಾಧಿಕಾರಿ ಕಚೇರಿಗೆ ಆಗಮಿಸಲಿದ್ದಾರೆ ಎಂದು ಹೇಳಿದರು.

ಇವಿಎಂ ಮತ್ತು ವಿವಿ ಪ್ಯಾಟ್‌ಗಳ ಕಾರ್ಯ ವೈಖರಿ ಬಗ್ಗೆ ಅಭ್ಯರ್ಥಿಗಳ ಏಜೆಂಟರ ಸಮ್ಮುಖ ದಲ್ಲಿ ಅಣಕು ಮತದಾನ ಮಾಡುವ ಮೂಲಕ ಪರೀಕ್ಷಿಸಲಾಗಿದೆ. ಅಭ್ಯರ್ಥಿಗಳು ಮತ್ತು ರಾಜಕೀಯ ಪಕ್ಷಗಳ ಸಭೆ ನಡೆಸಿ ವಿವಿ ಪ್ಯಾಟ್ ಬಗ್ಗೆ ಇರುವ ಸಂಶಯ ನಿವಾರಿಸಲಾಗಿದೆ ಎಂದರು.

ಪ್ರತಿ ಮತಗಟ್ಟೆಗಳಲ್ಲಿ ಮತದಾನಕ್ಕೂ ಮೊದಲು ಅಣಕು ಮತದಾನ ನಡೆಸಲಾಗುತ್ತದೆ. ಆ ವೇಳೆ ಅಭ್ಯರ್ಥಿ ಗಳು, ಮತಗಟ್ಟೆ ಏಜೆಂಟರು ಹಾಜರಿರಬೇಕು. ಇವಿಎಂ ಮತ್ತು ವಿವಿ ಪ್ಯಾಟ್‌ ಯಂತ್ರಗಳ ಕಾರ್ಯ ನಿರ್ವಹಣೆ ಬಗ್ಗೆ ಖಚಿತ ಪಡಿಸಿಕೊಳ್ಳಲು ಸೂಚಿಸಲಾಗಿದೆ ಎಂದು ತಿಳಿಸಿದರು.

ಮತದಾನದ ದಿನ ಮತಗಟ್ಟೆಗಳ 100 ಮೀ. ವ್ಯಾಪ್ತಿ ಯಲ್ಲಿ ಯಾವುದೇ ವ್ಯಕ್ತಿಯು ಮತದಾರರನ್ನು ಓಲೈಕೆ ಮಾಡುವಂತಿಲ್ಲ. ಪ್ರಚಾರ ಕೂಡ ಮಾಡುವಂತಿಲ್ಲ. ಮತದಾನ ವ್ಯವಸ್ಥೆ ಯನ್ನು ವಿಡಿಯೊ ಚಿತ್ರೀಕರಣ ಮಾಡ ಲಾಗುತ್ತದೆ. ಕ್ಷೇತ್ರದ ವ್ಯಾಪ್ತಿಯಲ್ಲಿ ತಾಂತ್ರಿಕ ಸೌಲಭ್ಯ ಹೊಂದಿರುವ 10 ಮತಗಟ್ಟೆ ಗುರುತಿಸಿ ಮತದಾನ ಪ್ರಕ್ರಿಯೆ ಯನ್ನು ವೆಬ್‌ಕ್ಯಾಸ್ಟಿಂಗ್ ನಡೆಸಲು ಬಿಎಸ್‌ ಎನ್‌ಎಲ್‌ ಮೂಲಕ ಕ್ರಮವಹಿಸಲಾಗಿದೆ ಎಂದು ವಿವರಿಸಿದರು.

ಸ್ಟ್ರಾಂಗ್‌ ರೂಂನಲ್ಲಿ ಮೆಟಲ್‌ ಡಿಟೆಕ್ಟರ್‌ ಮತ್ತು ಸಿಸಿ ಟಿವಿ ಅಳವಡಿಸಲಾಗಿದೆ. ಮತದಾನದ ಬಳಿಕ ಮತಯಂತ್ರಗಳನ್ನು ಸೆಂಟ್‌ ಜಾನ್ಸ್ ಆಂಗ್ಲ ಮಾಧ್ಯಮ ಶಾಲೆಯ ಕಟ್ಟಡದಲ್ಲಿ ಸ್ಥಾಪಿಸಿ ರುವ ಭದ್ರತಾ ಕೊಠಡಿಯಲ್ಲಿ ಬಿಗಿ ಬಂದೋಬಸ್ತ್‌ನಲ್ಲಿ ಇಡ ಲಾಗುವುದು. ಭದ್ರತೆಗಾಗಿ 24*7 ಅವಧಿಯಲ್ಲಿ ಕರ್ತವ್ಯ ನಿರ್ವಹಿಸಲು ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದರು. ಏ. 13ರಂದು ಬೆಳಿಗ್ಗೆ 8ಗಂಟೆಗೆ ಮತಎಣಿಕೆ ಪ್ರಕ್ರಿಯೆ ಆರಂಭವಾಗಲಿದೆ. 4 ಕೊಠಡಿಗಳಿಂದ ಒಟ್ಟು 16 ಟೇಬಲ್‌ ಗಳಲ್ಲಿ ಎಣಿಕೆ ಪ್ರಕ್ರಿಯೆ ನಡೆಯಲಿದೆ. ಎಣಿಕೆ ಕಾರ್ಯಕ್ಕಾಗಿ ಪ್ರತಿ ಟೇಬಲ್‌ಗೆ ಇಬ್ಬರು ಮೇಲ್ವಿಚಾರಕರು, ಒಬ್ಬ ಸಹಾಯಕ ಅಧಿಕಾರಿ ಮತ್ತು ಸೂಕ್ಷ್ಮ ವೀಕ್ಷಕರನ್ನು ನೇಮಕ ಮಾಡಲಾಗುವುದು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ. ಗಾಯತ್ರಿ, ಜಿಲ್ಲಾ ಅಬಕಾರಿ ಉಪ ಆಯುಕ್ತ ಕೆ.ಎನ್. ನಾಗೇಶ್‌ ಹಾಜರಿದ್ದರು.

**

ಮತಗಟ್ಟೆಗಳಿಗೆ ಭದ್ರತೆ

ಚುನಾವಣೆಯಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ಬಿಗಿ ಬಂದೋಬಸ್ತ್‌ ಕೈಗೊಳ್ಳಲಾಗಿದೆ. 55 ಸಹಾಯಕ ಸಬ್‌ಇನ್‌ಸ್ಪೆಕ್ಟರ್‌, 128 ಹೆಡ್‌ಕಾನ್‌ಸ್ಟೆಬಲ್‌, 250 ಕಾನ್‌ಸ್ಟೆಬಲ್‌, 194 ಗೃಹರಕ್ಷಕ ಸಿಬ್ಬಂದಿ, 365 ಸಿಪಿಎಂಎಫ್‌ ಸಿಬ್ಬಂದಿ ನಿಯೋಜಿಸಲಾಗಿದೆ.

ಮತಗಟ್ಟೆ ಅಧಿಕಾರಿಗಳನ್ನು ಮತಗಟ್ಟೆಗೆ ತಲುಪಿಸಲು 60 ಕೆಎಸ್‌ಆರ್‌ಟಿಸಿ ಮತ್ತು 20 ಸರ್ಕಾರಿ ಜೀಪ್‌ ಬಳಸಿ ಕೊಳ್ಳಲಾಗುತ್ತಿದೆ. ಮಾರ್ಟಳ್ಳಿ, ರಾಮಾಪುರ, ಹನೂರು, ಕೊಳ್ಳೇಗಾಲ, ಯಳಂದೂರು, ಚಾಮರಾಜನಗರ ಭಾಗದಿಂದ ನೇಮಕವಾಗಿರುವ ಮತಗಟ್ಟೆ ಅಧಿಕಾರಿಗಳು ಮಸ್ಟರಿಂಗ್‌ ಕೇಂದ್ರ ತಲುಪಲು ಬಸ್‌ ವ್ಯವಸ್ಥೆ ಕಲ್ಪಿಸಲಾಗಿದೆ. ಆಯಾ ಹೋಬಳಿ ಮತ್ತು ಗ್ರಾಮ ಕೇಂದ್ರಗಳಿಂದ ಬೆಳಿಗ್ಗೆ 5ಗಂಟೆಗೆ ಬಸ್‌ ಸೇವೆ ಒದಗಿಸಲಾಗಿದೆ.

**

ಚುನಾವಣಾ ಅಕ್ರಮ: ದೂರು ಸಲ್ಲಿಸಲು ಅವಕಾಶ

ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ಅಕ್ರಮ ಕಂಡುಬಂದರೆ ಅಧಿಕಾರಿಗಳು ಹಾಗೂ ವೀಕ್ಷಕರ ದೂರವಾಣಿ ಮೂಲಕ ಅಥವಾ ಖುದ್ದಾಗಿ ಸಾರ್ವಜನಿಕರು ದೂರು ಸಲ್ಲಿಸಬಹುದಾಗಿದೆ.

ದೂರವಾಣಿ ವಿವರ:  ಜಿಲ್ಲಾ ಚುನಾವಣಾಧಿಕಾರಿ ಬಿ. ರಾಮು (ಮೊಬೈಲ್‌ 94800 10123), ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕುಲದೀಪ್‌ಕುಮಾರ್ ಆರ್. ಜೈನ್ (ಮೊಬೈಲ್ 94808 04601), ಕ್ಷೇತ್ರ ಚುನಾವಣಾ ಧಿಕಾರಿ ನಳಿನ್‌ ಅತುಲ್ (ಮೊಬೈಲ್‌ 96509 91218), ಸಹಾಯಕ ಕ್ಷೇತ್ರ ಚುನಾವಣಾಧಿಕಾರಿ ಕೆ. ಸಿದ್ದು (ಮೊಬೈಲ್‌ 94486 42666), ಅಬಕಾರಿ ಉಪ ಆಯುಕ್ತ ಎ.ಎಲ್. ನಾಗೇಶ್ (ಮೊಬೈಲ್ 94495 97179), ಕಂಟ್ರೋಲ್ ರೂಂ. ದೂರವಾಣಿ ಸಂಖ್ಯೆ 08226-223160.
ಚುನಾವಣಾ ವೀಕ್ಷಕರ ದೂರವಾಣಿ ಸಂಖ್ಯೆ: ವಿದ್ಯಾ ಸಾಗರ್, ಸಾಮಾನ್ಯ ಚುನಾವಣಾ ವೀಕ್ಷಕ (ಮೊಬೈಲ್ 82770 27322), ಕೆ. ಸುಭೇಂದ್ರ, ಚುನಾವಣಾ ವೆಚ್ಚ ವೀಕ್ಷಕ(ಮೊಬೈಲ್ 94055 12345), ಎಸ್. ಕರುಣ ರಾಜು, ವಿಶೇಷ ಚುನಾವಣಾ ವೀಕ್ಷಕ (ಮೊಬೈಲ್ 97799 43700), ಜಾಕೋಬ್ ಜಾಬ್, ಪೊಲೀಸ್ ಚುನಾವಣಾ ವೀಕ್ಷಕ (ಮೊಬೈಲ್ 94979 96949).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT