ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ಕ್ವಿಜ್‌

Last Updated 9 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

1) ಏಪ್ರಿಲ್ 6 ರಂದು ನಿಧನರಾದ ಹಿರಿಯ ಗಾಂಧಿವಾದಿ ಹೊ. ಶ್ರೀನಿವಾಸಯ್ಯ ಅವರು ಬರೆದ ಖ್ಯಾತ ಪ್ರವಾಸ ಕಥನ ಯಾವುದು?

a)  ಭಾರತ ದರ್ಶನ

b) ಅಮೆರಿಕದಲ್ಲಿ ಗೊರೂರು

c) ನಾ ಕಂಡ ಜರ್ಮನಿ

d) ರಷ್ಯಾ ದಿನಗಳು

***

2)  ಭಾರತದ ವಾಯುಗುಣ ಮಾನ್ಸೂನ್ ಮಾರುತಗಳ ಪ್ರಭಾವಕ್ಕೆ ಒಳಗಾಗಿದೆ. ಈ ಮಾನ್ಸೂನ್ ಪದವು ಮೌಸಿಮ್ ಎಂಬ ಪದದಿಂದ ಉತ್ಪತ್ತಿಯಾಗಿದೆ. ಮೌಸಿಮ್ ಯಾವ ಭಾಷೆಯ ಪದ?

a) ಪರ್ಷಿಯನ್ ಭಾಷೆ

b) ಗ್ರೀಕ್ ಭಾಷೆ

c) ಅರೇಬಿಕ್ ಭಾಷೆ

d) ರೋಮನ್ ಭಾಷೆ

***

3) ರಾಜ್ಯದಲ್ಲಿ ಮೊಟ್ಟ ಮೊದಲಿಗೆ ಕೈಗಾರಿಕ ನೀತಿಯನ್ನು ರೂಪಿಸಿ, ‘ಕೈಗಾರಿಕರಣ ಇಲ್ಲವೇ ವಿನಾಶ’ ಎಂದು ಹೇಳಿದವರು ಯಾರು?

a) ಜಯಚಾಮರಾಜೇಂದ್ರ ಒಡೆಯರ್

b) ಸರ್.ಎಂ.ವಿಶ್ವೇಶ್ವರಯ್ಯ

c) ಲಾರ್ಡ್ ಕರ್ಜನ್

d) ಶ್ರೀಕಂಠದತ್ತ ನರಸಿಂಹರಾಜ ಒಡೆಯರ್

***

4) ತಮಿಳುನಾಡು ಭಾಗವನ್ನು ಆಳಿದ ಚೇರರು, ಪಾಂಡ್ಯರು ಹಾಗೂ ಚೋಳ ರಾಜ ಮನೆತನದವರು ಯಾವ ಸಾಹಿತ್ಯವನ್ನು ಪೋಷಣೆ ಮಾಡಿದರು?

a) ಸಂಗಂ ಸಾಹಿತ್ಯ

b) ಜೈನ ಸಾಹಿತ್ಯ

c) ಬೌದ್ಧ ಸಾಹಿತ್ಯ

d) ಆರ್ಯ ಸಾಹಿತ್ಯ

***
5) ಯಶೋಧರ ಚರಿತೆ ಕೃತಿಯನ್ನು ರಚಿಸಿದ ಜನ್ನ ಕವಿಯು ಹೊಯ್ಸಳರ ಯಾವ ರಾಜನ ಆಸ್ಥಾನ ಕವಿಯಾಗಿದ್ದರು?

a) ವೀರ ಬಲ್ಲಾಳ

b) ವಿಷ್ಣುವರ್ಧನ

c) ಒಂದನೇ ನರಸಿಂಹ

d) ಒಂದನೇ ಬಲ್ಲಾಳ

***

6) ರಸಾಯನಶಾಸ್ತ್ರ ಕ್ಷೇತ್ರಕ್ಕೆ ಸಂಬಂಧಿಸಿದಂತೆ 1896ರಲ್ಲಿ ‘ವಿಕಿರಣ ಪಟುತ್ವ’ವನ್ನು ಕಂಡುಹಿಡಿದ ಫ್ರಾನ್ಸ್ ವಿಜ್ಞಾನಿ ಯಾರು?

a) ರುದರ್ ಫೋರ್ಡ್

b) ಹೆನ್ರಿ ಬೆಕೆರಲ್

c) ಮೇಡಂ ಕ್ಯೂರಿ

d) ಹೆನ್ಸಿ ಕ್ವಾಂಟಂ

***

7) ಭೌತಶಾಸ್ತ್ರದಲ್ಲಿ ಬರುವ ಸರಳ ಲೋಲಕ ನಿಯಮಗಳನ್ನು ಆವಿಷ್ಕರಿಸಿದ ಇಟಲಿಯ ಭೌತ ವಿಜ್ಞಾನಿ ಯಾರು?

a) ಐನ್‌ಸ್ಟೀನ್              

b) ಮಾರ್ಕೋನಿ

c) ಗೆಲಿಲಿಯೊ            

d) ಕೋಪರ್ನಿಕಸ್

***

8) ಕಶೇರುಕಗಳ ದೇಹದ ಬೆನ್ನಿನ ಭಾಗದಲ್ಲಿ ಈ ಕೆಳಕಂಡ ಯಾವ ಘನವಾದ ರಚನೆ ಇರುತ್ತದೆ?

a) ಕಾರ್ಡೇಟಾ  

b) ಆರ್ಟಿಕ್ ಕಾರ್ಡ್

c) ಮ್ಯಾನೋಟಿಕ್ ಕಾರ್ಡ್

d) ನೋಟೋಕಾರ್ಡ್

***

9) ಈ ಕೆಳಕಂಡ ಭಾಷೆಗಳಲ್ಲಿ ಕಂಪ್ಯೂಟರ್ ಭಾಷೆಯನ್ನು ನಿಖರವಾಗಿ ಗುರುತಿಸಿ?

a) ಮೆಷಿನ್ ಭಾಷೆ

b) ಅಸೆಂಬ್ಲಿ ಲೆವೆಲ್ ಭಾಷೆ

c) ಹೈ ಲೆವೆಲ್ ಭಾಷೆ  

d) ಮೇಲಿನ ಎಲ್ಲವೂ

***

10) ರಕ್ತದಲ್ಲಿ ಕೆಂಪುರಕ್ತ ಕಣಗಳ ಕೊರತೆ ಉಂಟಾದರೆ ‘ಅನೀಮಿಯ’ ಕಾಯಿಲೆ ಕಾಣಿಸಿ ಕೊಳ್ಳುತ್ತದೆ. ಇದು ಯಾವ ವಿಟಮಿನ್ ಕೊರತೆಯಿಂದ ಬರುತ್ತದೆ?

a) ವಿಟಮಿನ್ ಬಿ12

b) ವಿಟಮಿನ್ ಕೆ1 

c) ವಿಟಮಿನ್ ಸಿ3     

d) ವಿಟಮಿನ್ ಇ 

***

ಉತ್ತರಗಳು: 1-c, 2-c, 3-b, 4-a, 5-a, 6-b, 7- c, 8-d, 9-d, 10-a.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT