ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಟ್ಟಣ ಸೌಂದರ್ಯ ಇಮ್ಮಡಿಗೆ ಟ್ರೀಸ್ ಪಾರ್ಕ್

ಬಂಗಾರಪೇಟೆ–ಕೋಲಾರ ಮುಖ್ಯ ರಸ್ತೆ: ಏಪ್ರಿಲ್ ಅಂತ್ಯಕ್ಕೆ ಮೊದಲನೇ ಹಂತದ ಕಾಮಗಾರಿ
Last Updated 10 ಏಪ್ರಿಲ್ 2017, 4:42 IST
ಅಕ್ಷರ ಗಾತ್ರ

ಬಂಗಾರಪೇಟೆ: ಪಟ್ಟಣದಲ್ಲಿ  ಮೊದಲ ಬಾರಿಗೆ 60 ಎಕರೆ ಪ್ರದೇಶದಲ್ಲಿ ಟ್ರೀಸ್‌ ಪಾರ್ಕ್‌ ಅಭಿವೃದ್ಧಿ ಮಾಡುತ್ತಿದ್ದು, ಪಟ್ಟ ಣದ ಸೌಂದರ್ಯ ಇಮ್ಮಡಿ ಯಾಗಲಿದೆ.

₹60 ಲಕ್ಷ ಅಂದಾಜು ವೆಚ್ಚದ ಪೈಕಿ ₹30 ಲಕ್ಷ ಬಿಡುಗಡೆಯಾಗಿದ್ದು, ತಿಂಗಳ ಅಂತ್ಯಕ್ಕೆ ಮೊದಲನೇ ಹಂತದ ಕಾಮ ಗಾರಿ ಪೂರ್ಣಗೊಳ್ಳುವ ಸಾಧ್ಯತೆ ಇದೆ.
ಬಂಗಾರಪೇಟೆ–ಕೋಲಾರ ಮುಖ್ಯ ರಸ್ತೆಯ ಎಸ್.ಎನ್.ರೆಸಾರ್ಟ್ ಎದುರಿನ ಮೀಸಲು ಅರಣ್ಯದಲ್ಲಿ ಮೈದಳೆಯುತ್ತಿ ರುವ ಉದ್ಯಾನದಲ್ಲಿ  ಶ್ರೀಗಂಧ, ಬೇವು, ಹೊಂಗೆ, ಹುಣಸೆ, ಕಾಡುನಿಂಬೆ, ಅಂಟು ವಾಳ, ಮಹಾಗನಿ, ಬಿದಿರು, ಹೊನ್ನೆ, ತೇಗದ ಮರಗಳು ಬೆಳೆ ದು ನಿಂತಿವೆ.

ಉದ್ಯಾನದಲ್ಲಿ ಮಕ್ಕಳಿಗೆ ಉಯ್ಯಾಲೆ, ಜಾರುವ ಬಂಡೆ, ಆಡುಮಣೆ, ಮೇರಿ ಗೋ ರೌಂಡ್‌, ನೆಟ್‌ ಕ್ಲೈಂಬರ್‌, ರಾಕ್‌ ಕ್ಲೈಂಬರ್ ನಂಥ  ಆಟಿಕೆಗಳನ್ನು ಅಳವಡಿಸಲಾಗಿದೆ. ದೊಡ್ಡವರಿಗಾಗಿ ರೋಪ್‌ವೇ ನಿರ್ಮಿಸಲಾಗುವುದು ಎಂದು ವಲಯ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ್‌ ಕುಮಾರ್‌ ತಿಳಿಸಿದರು.

ರೋಪ್‌ವೇ ಎಂದರೆ ಒಂದು ಮರದಿಂದ ಮತ್ತೊಂದು ಮರಕ್ಕೆ ಕಬ್ಬಿಣದ ಸೇತುವೆ ನಿರ್ಮಿಸಿ, ಮಕ್ಕಳೊಂದಿಗೆ ದೊಡ್ಡವರಿಗೂ ವಿಶೇಷ ಅನುಭವ ಕಲ್ಪಿ ಸುವ ಪ್ರಯತ್ನ. ಜಿಲ್ಲೆಯಲ್ಲಿ ಮೊದಲ ಬಾರಿಗೆ ಇಲ್ಲಿ ರೋಪ್‌ವೇ ನಿರ್ಮಿಸುತ್ತಿರು ವುದು ವಿಶೇಷ.

ಉದ್ಯಾನದಲ್ಲಿ ಮೂರು ಲತಾ ಗೃಹ(ಪರ್ಗೋಲ) ನಿರ್ಮಿಸ ಲಾಗಿದೆ. ಲತಾಗೃಹದ ಮೇಲ್ಛಾವಣಿ ಮೂರು ಪದರಗಳನ್ನು ಒಳಗೊಂಡಿದೆ. ಕೆಳ ಭಾಗ ದಲ್ಲಿ ಕೇರಳದ ವಿಶೇಷ ಅಂಟು ಹಲಿಗೆ (ಪ್ಲೈವುಡ್‌), ಅದರ ಮೇಲೆ ಹೆಂಚು ಮಧ್ಯದಲ್ಲಿ ಟಾರ್‌ಪಾಲ್‌ ಅಳವಡಿಸಿದೆ. ಉರಿ ಬಿಸಿಲಿನಲ್ಲೂ ತಂಪಾದ ವಾತಾವ ರಣ ಒದಗಿಸುವುದು ಇದರ ವೈಶಿಷ್ಟ್ಯ.

ಉದ್ಯಾನದಲ್ಲಿ ಈಗಿರುವ ಮರಗಳ ಜತೆಗೆ ಅಲ್ಲಲ್ಲಿ ವಿವಿಧ ತಳಿಯ 1 ಸಾವಿರ ಗಿಡ ನೆಡುವ ಯೋಜನೆ ರೂಪಿಸಿದ್ದು, ಈಗಾಗಲೆ 200 ಗಿಡ ನೆಡಲಾಗಿದೆ. ಕೂರ ಲು ಕಲ್ಲಿನ ಆಸನ ಅಳವಡಿಸಿದೆ. ಪಾರ್ಕ್‌ ಸುತ್ತ ಸುಮಾರು 12 ಕಿ.ಮೀ. ಉದ್ದದ ಜಾಗಿಂಗ್‌ ಪಾತ್‌ ಸಿದ್ದಗೊಳ್ಳುತ್ತಿದೆ. 

ಅರಣ್ಯ ವಲಯದ 250 ಎಕರೆ ಪ್ರದೇಶದಲ್ಲಿ ಜಿಂಕೆ, ನವಿಲು, ಕೃಷ್ಣಮೃಗ ಗಳು ನೆಲೆಸಿವೆ. ಆ ಪೈಕಿ 60 ಎಕರೆ ಉದ್ಯಾ ನಕ್ಕೆ ಚೈನ್‌ಲಿಂಕ್‌ ಬೇಲಿ ಅಳವಡಿಸುವ ವ್ಯವಸ್ಥೆ ನಡೆದಿದೆ. ಹಾಗಾಗಿ ಉದ್ಯಾನ ದಲ್ಲಿ ವಿಹರಿಸುವವರಿಗೆ ಆಗಾಗ ಜಿಂಕೆ, ನವಿಲು  ದರ್ಶನ ಆಗಲಿದೆ. ಉದ್ಯಾನ ದಲ್ಲಿ ನಿರ್ಮಿಸಿರುವ ಕಲ್ಲಿನ ಕಮಾನುಗಳು ಉದ್ಯಾನಕ್ಕೆ ಮೆರಗು ನೀಡಲಿದೆ.

ಅರಣ್ಯ ಪ್ರದೇಶದಲ್ಲಿ ಅತಿಥಿಗೃಹ ಸೇರಿದಂತೆ ಅಲ್ಲಲ್ಲಿ ನೀರಿನ ಕುಂಡಗಳನ್ನು ನಿರ್ಮಿಸಿ, ಪ್ರಾಣಿಗಳಿಗೆ ನೀರು ಪೂರೈಕೆ ಮಾಡುವ ಕೆಲಸ ಮಾಡಲಾಗುವುದು ಎಂದು ಶಾಸಕ ಎಸ್.ಎನ್. ನಾರಾಯಣ ಸ್ವಾಮಿ ತಿಳಿಸಿದ್ದಾರೆ. ‘ಶಾಸಕರ ಕಾಳಜಿ, ಪ್ರಯತ್ನದಿಂದ   ಉದ್ಯಾನ ನಿರ್ಮಿಸಲಾಗುತ್ತಿದೆ’ ಎನ್ನುವು ದು ಸಂತೋಷ್‌ ಕುಮಾರ್‌ ಅವರ ನುಡಿ.
–ಕಾಂತರಾಜ್‌

*
ರಾಜ್ಯದಲ್ಲಿ ಪಟ್ಟಣ ವ್ಯಾಪ್ತಿಗೆ ಸೇರಿರುವ 250 ಎಕರೆಯ ಏಕೈಕ ಮೀಸಲು ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಟ್ರೀಸ್‌ ಪಾರ್ಕ್‌ ಯೋಜನೆ ರೂಪಿಸಲಾಗಿದೆ. ₹2 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು.
–ಎಸ್.ಎನ್.ನಾರಾಯಣಸ್ವಾಮಿ ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT