ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾಧವ್‌ಗೆ ಗಲ್ಲು ಶಿಕ್ಷೆ ವಿಧಿಸಿದ ಪಾಕ್‌ ಕ್ರಮಕ್ಕೆ ಸಂಸತ್‌ನಲ್ಲಿ ತೀವ್ರ ಖಂಡನೆ

Last Updated 11 ಏಪ್ರಿಲ್ 2017, 6:23 IST
ಅಕ್ಷರ ಗಾತ್ರ

ನವದೆಹಲಿ: ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿ, ಪಾಕಿಸ್ತಾನದಲ್ಲಿ ಸೆರೆಯಲ್ಲಿರುವ ಕುಲಭೂಷಣ್‌ ಜಾಧವ್‌ ಅವರಿಗೆ ಅಲ್ಲಿನ ಸೇನಾ ನ್ಯಾಯಾಲಯ ಮರಣದಂಡನೆ ವಿಧಿಸಿರುವುದನ್ನು ಲೋಕಸಭೆಯಲ್ಲಿ ಮಂಗಳವಾರ ಸಂಸದರು ಒಕ್ಕೊರಲ ಧ್ವನಿಯಿಂದ ಖಂಡಿಸಿದರು.

ಲೋಕಸಭೆಯಲ್ಲಿ ಕಲಾಪ ಆರಂಭವಾಗುತ್ತಿದ್ದಂತೆ, ವಿಷಯದ ಮೇಲೆ ಚರ್ಚೆ ನಡೆದು, ಸರ್ವ ಸದಸ್ಯರು ಪಕ್ಷಭೇದ ಮರೆತು ಪಾಕ್‌ ಕ್ರಮವನ್ನು ವಿರೋಧಿಸಿದರು. ಇಡೀ ಸದನ ಕುಲಭೂಷಣ್‌ ಪರ ನಿಂತು ಧ್ವನಿ ಎತ್ತಿತು.

ಪಕ್ಷ ಭೇದ ಮರೆತು ಖಂಡನೆ ವ್ಯಕ್ತಪಡಿಸಿದ ಸದಸ್ಯರು, ಕುಲಭೂಷಣ್‌ ಅವರ ಜತೆ ಇಡೀ ಭಾರತವೇ ನಿಂತಿದೆ. ಕುಲಭೂಷಣ್‌ ಅವರ ಪ್ರಾಣ ಉಳಿಸುವುದು ಸರ್ಕಾರದ ಜವಾಬ್ದಾರಿ ಎಂದು ಹೇಳಿದರು.

‘ಪಾಕಿಸ್ತಾನ ಸರ್ಕಾರ ನಿರಪರಾಧಿ ಭಾರತೀಯ ಪ್ರಜೆಯ ಶಿಕ್ಷೆಗೆ ಮುಂದಾಗಿರುವುದು ಖಂಡನೀಯ. ಆತಂಕವಾದಿ ಪಾಕಿಸ್ತಾನದ ಕ್ರಮವನ್ನು ಭಾರತ ಸಹಿಸಬಾರದು.

‘ಭಾರತ ಅಂತರ ರಾಷ್ಟ್ರೀಯಮಟ್ಟದಲ್ಲಿ ಹೋರಾಟ ಮಾಡಿಯಾದರೂ ಕುಲಭೂಷಣ್‌ ಅವರನ್ನು ಸುರಕ್ಷಿತವಾಗಿ ಕರೆತರಬೇಕು ಎಂಬ ಅಭಿಪ್ರಾಯ ಸದನದಲ್ಲಿ ವ್ಯಕ್ತವಾಯಿತು.

ಇದನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT