ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀಸಲು ಸೌಲಭ್ಯ ಕಸಿಯಲು ಹುನ್ನಾರ

Last Updated 11 ಏಪ್ರಿಲ್ 2017, 9:43 IST
ಅಕ್ಷರ ಗಾತ್ರ

ಚಾಮರಾಜನಗರ: ‘ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸಂವಿಧಾನದಡಿ ಕಲ್ಪಿಸಿ ರುವ ಮೀಸಲಾತಿ ಸೌಲಭ್ಯ ಕಸಿದು ಕೊಳ್ಳಲು ಷಡ್ಯಂತ್ರ ನಡೆಯುತ್ತಿದೆ. ಯುವ ಜನರು ಈ ಬಗ್ಗೆ ಜಾಗೃತರಾಗ ಬೇಕಿದೆ’ ಎಂದು ಬಹುಜನ ವಿದ್ಯಾರ್ಥಿ ಸಂಘದ ಜಿಲ್ಲಾ ಸಂಚಾಲಕ ಪರ್ವತ್‌ ರಾಜ್ ಹೇಳಿದರು.

ನಗರದ ಸಿದ್ಧಾರ್ಥ ಪ್ರಥಮದರ್ಜೆ ಕಾಲೇಜಿನ ಸಭಾಂಗಣದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಮ್ಮೇಳನ ಆಯೋ ಜನಾ ಸಮಿತಿ, ಮೈಸೂರಿನ ಡಾ.ಬಿ.ಆರ್. ಅಂಬೇಡ್ಕರ್ ಸಂಶೋಧನಾ ಹಾಗೂ ವಿಸ್ತರಣಾ ಕೇಂದ್ರ, ಸಿದ್ಧಾರ್ಥ ಕಾಲೇಜಿ ನಿಂದ ಅಂಬೇಡ್ಕರ್‌ ಜಯಂತಿ ಅಂಗ ವಾಗಿ ಅಂಬೇಡ್ಕರ್ ಜ್ಞಾನದರ್ಶನ ಅಭಿ ಯಾನದಡಿ ಕಾಲೇಜು ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಹಾಗೂ ಸಂವಾದ ಉದ್ಘಾಟಿಸಿ ಮಾತನಾಡಿದರು.

ಎಂದು ಟೀಕಿಸಿದರು.

ಮನುವಾದಿ ಸರ್ಕಾರಗಳು ಮತ ದಾನ, ಉದ್ಯೋಗ, ಶಿಕ್ಷಣದ ಹಕ್ಕು ಕಸಿದುಕೊಳ್ಳುವ ಸಾಧ್ಯತೆಯೂ ಇದೆ. ಹಾಗಾಗಿ, ವಿದ್ಯಾರ್ಥಿಗಳು ಜಾಗೃತರಾಗ ಬೇಕು ಎಂದರು. ಅಂಬೇಡ್ಕರ್ ಅವರು ಯಾವುದೇ ಸಮುದಾಯಕ್ಕೆ ಸೀಮಿತ ರಾಗಿಲ್ಲ. ಅವರು ವಿಶ್ವಮಾನವರು. ಸಂವಿಧಾನದ ಮೂಲಕ ಪ್ರತಿಯೊಬ್ಬ ರಿಗೂ ಮತದಾನ, ಉದ್ಯೋಗ, ಶಿಕ್ಷಣದ ಹಕ್ಕು ನೀಡಿದ್ದಾರೆ ಎಂದು ಹೇಳಿದರು.

ಮೈಸೂರಿನ ಅಂಬೇಡ್ಕರ್ ಸಂಶೋ ಧನಾ ಹಾಗೂ ವಿಸ್ತರಣಾ ಕೇಂದ್ರದ ಉಪನ್ಯಾಸಕ ರಾಜಪ್ಪಾಜಿ ಅಂಬೇಡ್ಕರ್‌ ಅವರ ಜಾತಿವಿನಾಶ, ಹಿಂದೂ ಕೊಡ್ ಬಿಲ್, ಕ್ರಾಂತಿ ಪ್ರತಿಕ್ರಾಂತಿ ಕುರಿತು ಉಪನ್ಯಾಸ ನೀಡಿದರು.

ಕೇಂದ್ರದ ಸಂಪನ್ಮೂಲ ವ್ಯಕ್ತಿ ಪುಟ್ಟಗೌರಿ ಪ್ರಾಸ್ತಾವಿಕ ಮಾತನಾಡಿದರು. ಸಿದ್ಧಾರ್ಥ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲ ಎನ್. ಮಹದೇವಸ್ವಾಮಿ ಅಧ್ಯಕ್ಷತೆವಹಿಸಿದ್ದರು. ಅಂಬೇಡ್ಕರ್ ಜ್ಞಾನದರ್ಶನ ಅಭಿಯಾನದ ಮೈಸೂರು ವಲಯ ಸಂಯೋಜಕ ಆರ್. ಸಿದ್ದರಾಜು, ಜಿಲ್ಲಾ ಸಂಯೋಜಕಿ ಪುಟ್ಟಕೆಂಪಮ್ಮ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT