ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಕಾಗುತ್ತಿರುವ ಧಾರ್ಮಿಕ ಆಚರಣೆಗಳು

Last Updated 11 ಏಪ್ರಿಲ್ 2017, 10:11 IST
ಅಕ್ಷರ ಗಾತ್ರ

ಗುಬ್ಬಿ: ಆಧುನಿಕತೆ ಬೆಳೆದಂತೆ ಧರ್ಮ ಮತ್ತು ಧಾರ್ಮಿಕ ಆಚರಣೆಗಳು ಮಸುಕಾಗುತ್ತಿವೆ ಎಂದು ತುಮಕೂರು ಹಿರೇಮಠದ ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿ  ತಿಳಿಸಿದರು.ತಾಲ್ಲೂಕಿನ ಸಿ.ಎಸ್.ಪುರ ಹೋಬಳಿ ಮಾವಿನಹಳ್ಳಿ ಗ್ರಾಮದಲ್ಲಿ ಭಾನುವಾರ ವೀರಣ್ಣನಗುಡಿಯ ಶ್ರೀಭದ್ರಕಾಳಿ ವೀರಭದ್ರಸ್ವಾಮಿ ಮಹಾದ್ವಾರದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ಆದಿಚುಂಚನಗಿರಿ ಮಾಹಾ ಸಂಸ್ಥಾನ ಮಾಯಸಂದ್ರ ಶಾಖಾ ಮಠದ ಮಂಗಳನಾಥ ಸ್ವಾಮೀಜಿ ಮಾತನಾಡಿ, ‘ಧರ್ಮ ಮತ್ತು ಧಾರ್ಮಿಕ ಆಚರಣೆಗಳಿಂದ ಮಾತ್ರ ಮಾನವನ ಬದುಕು ಶಾಂತಿಯಿಂದಿರುತ್ತದೆ’ ಎಂದರು.ಭದ್ರಕಾಳಿ ವೀರಭದ್ರಸ್ವಾಮಿ ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಎಂ.ವಿ.ಬಸವರಾಜು ಮಾತನಾಡಿದರು. ಸಮಿತಿಯ ಕಾರ್ಯದರ್ಶಿ ಟಿ.ಎನ್.ಶಿವರುದ್ರಯ್ಯ ಮಾತನಾಡಿದರು.

ಕಾರ್ಯಕ್ರಮದಲ್ಲಿ ಶ್ರೀವೀರಭದ್ರಸ್ವಾಮಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ವಿ.ಪುಟ್ಟಸ್ವಾಮಿ, ಖಜಾಂಚಿ ವಿ.ಎನ್.ನಂಜುಂಡಯ್ಯ, ಲೆಕ್ಕಪರಿಶೋಧಕ ಫಣೀಂದ್ರ, ಸದಸ್ಯರಾದ ಶಿವರುದ್ರಶೆಟ್ಟರು, ಶಿವಶಂಕರ್, ಶ್ರೀಧರ ದೀಕ್ಷಿತ್, ಅರ್ಚಕ ಗಿರಿಧರಮೂರ್ತಿ, ರಂಗರಾಮು, ಆನಂದ್, ವಿಶ್ವನಾಥ್, ಲೋಕೇಶ್, ದಾನಿಗಳಾದ ಶಿವರುದ್ರಯ್ಯ, ನರಸಿಂಹಮೂರ್ತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT