ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಚೆ ಕಚೇರಿಗಳಲ್ಲಿ 1048 ಗ್ರಾಮೀಣ ಡಾಕ್‌ ಸೇವಕ್‌ ಹುದ್ದೆ

Last Updated 11 ಏಪ್ರಿಲ್ 2017, 11:11 IST
ಅಕ್ಷರ ಗಾತ್ರ

ಬೆಂಗಳೂರು: ಭಾರತೀಯ ಅಂಚೆ ಕಚೇರಿಯು ರಾಜ್ಯ ವಲಯದಲ್ಲಿ ಗ್ರಾಮೀಣ ಡಾಕ್‌ ಸೇವಕ್‌ ಹುದ್ದೆಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

ಒಟ್ಟು ಹುದ್ದೆ: 1048
(ಸಾಮಾನ್ಯ:579, ಒಬಿಸಿ: 240, ಎಸ್‌ಸಿ: 150, ಎಸ್‌ಟಿ: 79)

ಅರ್ಜಿ ಸಲ್ಲಿಕೆ ಕೊನೇ ದಿನ: ಮೇ 8
ವೇತನ: ₹4,220–6,470 (ನಗರದ ವಲಯ)
ವೆಬ್‌ಸೈಟ್‌: indiapost.gov.in ; appost.in/gdsonline

ವಯೋಮಿತಿ:
ಕನಿಷ್ಠ 18 ಹಾಗೂ ಗರಿಷ್ಠ 40 ವರ್ಷ. ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5, ಒಬಿಸಿ ಅಭ್ಯರ್ಥಿಗಳಿಗೆ 3 ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷ ಸಡಿಲಿಕೆಯಿದೆ.

ವಿದ್ಯಾರ್ಹತೆ:
ರಾಜ್ಯ ಅಂಗೀಕೃತ ಶಿಕ್ಷಣ ಮಂಡಳಿಯಿಂದ 10ನೇ ತರಗತಿ ಪೂರೈಸಿರಬೇಕು. ಕಂಪ್ಯೂಟರ್‌ ಜ್ಞಾನ ಅಗತ್ಯವಿದ್ದು, ಅಂಗೀಕೃತ ಸಂಸ್ಥೆಯಿಂದ ಕನಿಷ್ಠ 2 ತಿಂಗಳ ಕಂಪ್ಯೂಟರ್‌ ಕೋರ್ಸ್‌ ಮಾಡಿರಬೇಕು. ಸರ್ಟಿಫಿಕೆಟ್‌ ಪಡೆದಿರಬೇಕು.

ಕಚೇರಿ ಸಮೀಪ ಮನೆ:
ಹುದ್ದೆಗೆ ಆಯ್ಕೆಯಾಗುವ ಅಭ್ಯರ್ಥಿಗಳು ಸ್ಥಳೀಯ ಅಂಚೆ ಕಚೇರಿ ಇರುವ ವಲಯದಲ್ಲಿಯೇ ಉಳಿದುಕೊಳ್ಳುವ ವ್ಯವಸ್ಥೆ ಮಾಡಿಕೊಳ್ಳಬೇಕು.

ಅರ್ಜಿ ಸಲ್ಲಿಕೆ ಮತ್ತು ಶುಲ್ಕ:
ಅಂಚೆ ಕಚೇರಿ ಅಧಿಕೃತ ವೆಬ್‌ಸೈಟ್‌ ಮೂಲಕ ಆನ್‌ಲೈನ್‌ ಅರ್ಜಿ ಸಲ್ಲಿಸಬಹುದು.  ಅಂಕಪಟ್ಟಿ ಸೇರಿದಂತೆ ಕೇಳಿರುವ ದಾಖಲೆಗಳನ್ನು ಅಪ್‌ಲೋಡ್‌ಬೇಕು.

ಅರ್ಜಿ ಭರ್ತಿ ಬಳಿಕ ನೋಂದಣಿ ಸಂಖ್ಯೆ ಬಳಸಿ ಯಾವುದೇ ಮುಖ್ಯ ಅಂಚೆ ಕಚೇರಿಯಲ್ಲಿ ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳು ₹100 ಶುಲ್ಕ ಪಾವತಿಸಬೇಕು. ಎಸ್‌ಸಿ/ಎಸ್‌ಟಿ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕ ಪಾವತಿಯಿಂದ ವಿನಾಯಿತಿ ಇದೆ.

ಆಯ್ಕೆ ಪ್ರಕ್ರಿಯೆ:

ಸಲ್ಲಿಕೆಯಾದ ಅರ್ಜಿಗಳ ಪೈಕಿ ನಿಗದಿತ ವಿದ್ಯಾರ್ಹತೆಯಲ್ಲಿ ಪಡೆದಿರುವ ಅಂಕಗಳನ್ನು ಪರಿಗಣಿಸಿ ಅರ್ಹತಾ ಪಟ್ಟಿ ಸಿದ್ಧಪಡಿಸಿ ಮುಂದಿನ ಪ್ರಕ್ರಿಯೆಗೆ ಆಹ್ವಾನಿಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT