ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವೀರಶೈವ ಧರ್ಮಕ್ಕೆ ಸಾಂವಿಧಾನಿಕ ಮನ್ನಣೆ ಬೇಕು’

Last Updated 11 ಏಪ್ರಿಲ್ 2017, 11:30 IST
ಅಕ್ಷರ ಗಾತ್ರ

ಮುದ್ದೇಬಿಹಾಳ: ವೀರಶೈವ ಧರ್ಮವು ರಾಷ್ಟ್ರೀಯ ಧರ್ಮವಾಗಿದೆ. ಅದು ಒಂದು ಕಾಲಕ್ಕೆ ಇಡೀ ಭಾರತವನ್ನೇ ವ್ಯಾಪಿಸಿತ್ತು, ಆದರೆ ಅದಕ್ಕೆ ಇಂದು ಸಂವಿಧಾನಿಕ ಮನ್ನಣೆ ಇಲ್ಲದಿರುವುದು ಬೇಸರದ ಸಂಗತಿ ಎಂದು ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು.

ಅವರು ಪಟ್ಟಣದ ವಿಜಯ ಮಹಾಂತೇಶ ಮಂಗಲ ಭವನದಲ್ಲಿ ವೀರಮಹೇಶ್ವರ ತರುಣ ಸಂಘದಿಂದ ಸೋಮವಾರ ಏರ್ಪಡಿಸಿದ್ದ ಜಗದ್ಗುರು ರೇಣುಕಾಚಾರ್ಯ, ಹಾನಗಲ್ಲ ಕುಮಾರೇಶ್ವರರ 150ನೇ ಜಯಂತ್ಯುತ್ಸವ, ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಠಗಳು ಕಟ್ಟಿಕೊಟ್ಟಿರುವ ಪರಂಪರೆ ಮರೆಯಲಾಗದ್ದು. ದೇಶದ ದಕ್ಷಿಣ ಭಾಗದಲ್ಲಿ 9.5 ಕೋಟಿ ವೀರಶೈವರು ಇದ್ದಾರೆ. ರಾಜಕೀಯ ವ್ಯವಸ್ಥೆಯಲ್ಲಿ ವೀರಶೈವರಿಗೆ ಹಿನ್ನಡೆ ಆಗುತ್ತಿದೆ ಎಂದು ವಿಷಾದಿಸಿದರು.

ಬಿಜೆಪಿ ಮುಖಂಡ ಶಿವಶಂಕರಗೌಡ ಹಿರೇಗೌಡ್ರ, ಶಂಕರಲಿಂಗಯ್ಯ ಹಿರೇಮಠ, ಜಿ.ಪಂ. ಮಾಜಿ ಸದಸ್ಯ ಗಂಗಾಧರ ನಾಡಗೌಡ ಮತ್ತಿತರರು ಮಾತನಾಡಿದರು.  ಸಾನ್ನಿಧ್ಯ ವಹಿಸಿದ್ದ ಶಿವಪ್ರಕಾಶ ಶಿವಾಚಾರ್ಯ, ಗುರುಶಾಂತ ವೀರ ಶಿವಾಚಾರ್ಯ ಆಶೀರ್ವಚನ ನೀಡಿದರು.  ಸಂಘದ ಅಧ್ಯಕ್ಷ ಗೌರಿಶಂಕರ ಪುರಾಣಿಕಮಠ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಪುರಸಭೆ ಅಧ್ಯಕ್ಷ ಬಸನ ಗೌಡ ಪಾಟೀಲ, ಜಂಗಮ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಚಂದ್ರಕಾಂತ ಹಿರೇಮಠ, ಸಾಹಿತಿ ಪ್ರೊ.ಬಿ.ಎಂ. ಹಿರೇಮಠ, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಶರಣಯ್ಯ ಬೂದಿಹಾಳಮಠ, ಎಸ್.ಜಿ.ಪಾಟೀಲ, ಸಂಗಣ್ಣ ಕಂಚ್ಯಾಣಿ, ವಿಜಯ ವಡವಡಗಿ, ಪವಾಡೆಪ್ಪ ಮಡಿವಾಳರ, ಮುತ್ತಣ್ಣ ಪ್ಯಾಟಿಗೌಡರ, ಕೆ.ಎಸ್.ಗೌಡರ, ಬಸವರಾಜ ಅಬ್ಬಿಹಾಳ ಇದ್ದರು.

ಉರಗತಜ್ಞ ಮಲ್ಲಯ್ಯ ಸರಗಣಾ ಚಾರಿ, ಬಿಎ ಪದವಿ ಯಲ್ಲಿ ಪ್ರಥಮ ರ್‍್ಯಾಂಕ್ ಪಡೆದ ತೇಜಶ್ವಿನಿ ಕೊಣ್ಣೂರ, ಕರಾಟೆ ತರಬೇತುದಾರ ಶಿವಕುಮಾರ ಶಾರದಳ್ಳಿ, ಪ್ರಸೂತಿ ತಜ್ಞೆ ಸರೋಜಿನಿ ಡೊಂಬರ ಅವರನ್ನು ಸನ್ಮಾನಿಸ ಲಾಯಿತು. ಪಲ್ಲವಿ ತೆಗ್ಗಿನಮಠ ಸಂಗೀತ ಸೇವೆ ನೀಡಿದರು.  ಪತ್ರಕರ್ತ ದಾನಯ್ಯ ಹಿರೇಮಠ ಹೊರತಂದಿರುವ 2017 ನೇ ಸಾಲಿನ ದಿವ್ಯದೃಷ್ಟಿ ದಿನದರ್ಶಿಕೆ ಬಿಡು ಗಡೆ ಮಾಡಲಾಯಿತು. ಮುತ್ತು ಸರಗಣಾ ಚಾರ್ಯ ಸ್ವಾಗತಿಸಿದರು. ಐ.ಬಿ. ಹಿರೇಮಠ, ಲಕ್ಷ್ಮೀ ಹಿರೇಮಠ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT