ಹುಬ್ಬಳ್ಳಿ

ಸರಳ ಏರ್ ಕೂಲರ್‌; ಮಡಚಬಲ್ಲ ಸೈಕಲ್‌!

ಧಾರವಾಡ ಎನ್‌ಟಿಟಿಎಫ್‌ನ ಉಜ್ವಲ ದೇಶಪಾಂಡೆ ನಿರ್ಮಿಸಿದ ಏರ್‌ ಕೂಲರ್‌ ಬಿಸಿಲಿಗೆ ತತ್ತರಿಸಿರುವ ಜನರಿಗೆ ತಂಪು ಅನುಭವ ನೀಡಿತು

ಸರಳ ಏರ್ ಕೂಲರ್‌; ಮಡಚಬಲ್ಲ ಸೈಕಲ್‌!

ಹುಬ್ಬಳ್ಳಿ: ಬಕೆಟ್‌, ಫ್ಯಾನ್‌ ಮತ್ತು ಪಿವಿಸಿ ಪೈಪ್‌ಗಳನ್ನು ಬಳಸಿ ಸಿದ್ಧಪಡಿಸಿದ ಏರ್‌ಕೂಲರ್‌; ಮೂರು ಭಾಗಗಳಾಗಿ ಮಡಚಿ ಸೂಟ್‌ಕೇಸ್‌ನಲ್ಲಿ ಇರಿಸಿಕೊಂಡು ಹೋಗಬಹುದಾದ ಸೈಕಲ್‌, ಎತ್ತಿನ ಗಾಡಿಯಲ್ಲಿ ಅಳವಡಿಸಿ ವಿದ್ಯುತ್ ತಯಾರಿಸಬಲ್ಲ ಮೋಟಾರ್‌...ಇಲ್ಲಿನ ದೇಶಪಾಂಡೆ ಫೌಂಡೇಷನ್‌ನ ಲೀಡ್ ಯೋಜನೆಯ ವಾರ್ಷಿಕ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ವಿದ್ಯಾರ್ಥಿಗಳು ಪ್ರದರ್ಶಿಸಿದ ಈ ಮಾದರಿಗಳು ಜನರ ಗಮನ ಸೆಳೆದವು.

ಧಾರವಾಡ ಎನ್‌ಟಿಟಿಎಫ್‌ನ ಉಜ್ವಲ ದೇಶಪಾಂಡೆ ನಿರ್ಮಿಸಿದ ಏರ್‌ ಕೂಲರ್‌ ಬಿಸಿಲಿಗೆ ತತ್ತರಿಸಿರುವ ಜನರಿಗೆ ತಂಪು ಅನುಭವ ನೀಡಿತು. ಸಣ್ಣ ಡಬ್ಬದಲ್ಲಿ ನೀರು ಹಾಕಿ ಅದರ ಮುಚ್ಚಳಕ್ಕೆ ಫ್ಯಾನ್‌ ಅಳವಡಿಸಲಾಗಿದೆ. ಡಬ್ಬದ ಒಂದು ಭಾಗಕ್ಕೆ ಎರಡು ನಳಿಕೆ ಅಳವಡಿಸಿದ್ದು ಫ್ಯಾನ್ ತಿರುಗುವಾಗ ಗಾಳಿ ನೀರನ್ನು ಸೋಕಿ ನಳಿಕೆ ಮೂಲಕ ತಂಪಾಗಿ ಹೊರಸೂಸುತ್ತದೆ. ಈ ಮಾದರಿಯನ್ನು ದೊಡ್ಡ ಪ್ರಮಾಣದಲ್ಲಿ ಮಾಡಿ ಇಡೀ ಕೊಠಡಿಯನ್ನು ತಣ್ಣಗೆ ಇರಿಸಬಹುದು ಎಂದು ಉಜ್ವಲ್ ಅಭಿಪ್ರಾಯಪಟ್ಟರು.

ಕೆ.ಎಲ್‌.ಇ. ಸಂಸ್ಥೆಯ ಸಿ.ಐ.ಮುನವಳ್ಳಿ ಪಾಲಿಟೆಕ್ನಿಕ್‌ನ ಶಶಿಕುಮಾರ, ಸಲ್ಮಾನ್‌ ಹಾಗೂ ಪವನ ಹೆಬಸೂರ ನಿರ್ಮಿಸಿದ ಮಡಚಬಹುದಾದ ಸೈಕಲ್‌ನಲ್ಲಿ ಬ್ಯಾಟರಿ ಕೂಡ ಅಳವಡಿಸಲಾಗಿದ್ದು ಮೋಟಾರ್ ಸೈಕಲ್ ಮಾದರಿಯಲ್ಲೂ ಬಳಸಬಹುದಾಗಿದೆ.  ಸಂಸ್ಥೆಯ ಮೆಕ್ಯಾನಿಕಲ್ ವಿಭಾಗದ ಶಿವಕುಮಾರ ಅವರ ಮಾರ್ಗದರ್ಶನದಲ್ಲಿ ಈ ಮಾದರಿ ತಯಾರಿಸಲಾಗಿದೆ.

ಅವರದೇ ಮಾರ್ಗದರ್ಶನದಲ್ಲಿ ಸಿದ್ಧಪಡಿಸಿದ ಎತ್ತಿನ ಗಾಡಿಯಿಂದ ವಿದ್ಯುತ್ ಉತ್ಪಾದಿಸುವ ಮಾದರಿಯು ರೈತರನ್ನು ಇಂಧನ ಸ್ವಾವಲಂಬಿಗಳನ್ನಾಗಿ ಮಾಡುವ ಆಶಯ ಹೊಂದಿದೆ. ಆರ್‌.ಸಿ.ಪ್ರಮೋದ, ಶ್ರೀಧರ ಕಾಟವೆ ಹಾಗೂ ಸೊಹೈಲ್‌ ಇದನ್ನು ಸಿದ್ಧಪಡಿಸಿದ್ದರು.

ಅಭಿಲಾಷ ಮತ್ತು ತಂಡದವರು ನಿರ್ಮಿಸಿದ ತಂಪು ಅನಿಲ ಒದಗಿಸುವ ಬಯೋಗ್ಯಾಸ್‌ ಮಾದರಿ, ಪರಿಸರ ಸಂರಕ್ಷಣೆಯ ಕಾಳಜಿ ಹೊಂದಿದೆ. ಅನಿಲ ಸಾಗುವ ಕೊಳವೆಯನ್ನು ಬಾಗಿಸಿ ತಣ್ಣೀರಿನ ಮೂಲಕ ಸಾಗಿಸಿ ತಂಪು ಮಾಡಲಾಗುತ್ತದೆ. ‘ಬಿಸಿ ಅನಿಲ ವಾಯು ಮಾಲಿನ್ಯಕ್ಕೆ ಕಾರಣವಾಗುತ್ತದೆ. ಇದನ್ನು ತಡೆಯುವ ಉದ್ದೇಶದಿಂದ ಈ ಮಾದರಿ ತಯಾರಿಸಲಾಗಿದೆ’ ಎಂದು ಅಭಿಲಾಷ ಹೇಳಿದರು.

ಗಣೇಶ ಬಳ್ಳಾರಿ ಮತ್ತು ತಂಡ ತಯಾರಿಸಿದ್ದು ಎಲ್ಲ ಕಡೆಗೆ ವಾಲಿಸಿ ಸಾಮಗ್ರಿಗಳನ್ನು ನೆಲಕ್ಕೆ ಸುರಿಯಬಹುದಾದ ಟ್ರಾಲಿ ಮಾದರಿ. ಗಣಿ ಮತ್ತಿತರ ಕಡೆಗಳಲ್ಲಿ ವಸ್ತುಗಳನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ತೆಗೆದುಕೊಂಡು ಹೋಗಿ ಸುರಿಯುವಾಗ ಇಡೀ ಟ್ರಾಲಿಯನ್ನೇ ತಿರುಗಿಸ ಬೇಕಾಗುತ್ತದೆ. ಈ ಮಾದರಿಯನ್ನು ಬಳಸಿದರೆ ಸಮಯ ಉಳಿತಾಯ ಆಗಬಹುದು ಎಂಬುದು ಗಣೇಶ ಅವರ ಅಭಿಪ್ರಾಯ.ಸಮಾರೋಪ ಸಮಾರಂಭದಲ್ಲಿ ಲೀಡ್‌ನಲ್ಲಿ ಉತ್ತಮ ನಾಯಕತ್ವ ಪ್ರದರ್ಶಿಸಿದವರಿಗೆ ಪ್ರಶಸ್ತಿ ನೀಡಲಾಯಿತು.

Comments
ಈ ವಿಭಾಗದಿಂದ ಇನ್ನಷ್ಟು
ಬೆಳಕಿನಲ್ಲಿ ಮಿಂದೆದ್ದ ಮೂರುಸಾವಿರ ಮಠ

ಹುಬ್ಬಳ್ಳಿ
ಬೆಳಕಿನಲ್ಲಿ ಮಿಂದೆದ್ದ ಮೂರುಸಾವಿರ ಮಠ

21 Nov, 2017

ಧಾರವಾಡ
ಗೋ.ಮಧುಸೂದನ್ ವಿರುದ್ಧ ಕ್ರಮಕ್ಕೆ ಆಗ್ರಹ

‘ದಲಿತ ಪದ ಬಳಸಿ ವಿವಾದಾತ್ಮಕ ಹೇಳಿಕೆ ನೀಡಿ ಶಾಂತಿ ಹಾಗೂ ಸೌಹಾರ್ದತೆಗೆ ಭಂಗ ತಂದ ಅವರನ್ನು ದೇಶದ್ರೋಹ,  ಜಾತಿ ನಿಂದನೆ, ಮಾನನಷ್ಟ ಮೊಕದ್ದಮೆಗಳನ್ನು ದಾಖಲಿಸಿ...

21 Nov, 2017

ಧಾರವಾಡ
ಪಾರಂಪರಿಕ ಸ್ಮಾರಕಗಳ ನೆಲಸಮ: ಬೇಸರ

‘ಭಾರತದಷ್ಟು ಸಾವಿರಾರು ವರ್ಷಗಳ ಇತಿಹಾಸವಿಲ್ಲದ ಇಂಗ್ಲೆಂಡ್‌ನಲ್ಲಿ ಗುರುತಿಸಿರುವ ಪಾರಂಪರಿಕ ಸ್ಮಾರಕಗಳ ಸಂಖ್ಯೆ ಆರು ಲಕ್ಷ ಎಂಬುದನ್ನು ಗಮನಿಸಿದರೆ ಶ್ರೀಮಂತ ಪರಂಪರೆ ಹೊಂದಿರುವ ಭಾರತ ಎಷ್ಟು...

21 Nov, 2017
ಧಾರವಾಡ: ಧಾರಾಕಾರ ಮಳೆ

ಧಾರವಾಡ
ಧಾರವಾಡ: ಧಾರಾಕಾರ ಮಳೆ

20 Nov, 2017
ನಿರ್ಲಕ್ಷ್ಯಕ್ಕೀಡಾದ ಗಂಗಜ್ಜಿಯ ‘ಗಂಗೋತ್ರಿ’

ಧಾರವಾಡ
ನಿರ್ಲಕ್ಷ್ಯಕ್ಕೀಡಾದ ಗಂಗಜ್ಜಿಯ ‘ಗಂಗೋತ್ರಿ’

20 Nov, 2017