ಬಾಗಲಕೋಟೆ

ತಿಮ್ಮಾಪುರ ಕೆರೆ ತುಂಬುವ ಯೋಜನೆಗೆ ಚಾಲನೆ

ಈ ಭಾಗದಲ್ಲಿ ನೀರಿನ ಸಮಸ್ಯೆಗೆ ಮುಂಬರುವ ದಿನಗಳಲ್ಲಿ ಸ್ಪಲ್ಪಮಟ್ಟಿಗೆ ಸುಧಾರಿಸಲಿದೆ ನೀರನ್ನು ಜನರು ಸರಿಯಾದ ರೀತಿಯಲ್ಲಿ ಸಮರ್ಪಕವಾಗಿ ಬಳಸುವಂತೆ ತಿಳಿಸಿದರು.

ಬಾಗಲಕೋಟೆ: ತಾಲ್ಲೂಕಿನ ತಿಮ್ಮಾಪುರ ಗ್ರಾಮದಲ್ಲಿ ಶಾಸಕ ಎಚ್.ವೈ.ಮೇಟಿ ಸೋಮವಾರ ಕೆರೆ ತುಂಬುವ ಕಾಮಗಾರಿಗೆ ಭೂಮಿಪೂಜೆ ನೆರವೇರಿ­ಸುವ ಮೂಲಕ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಮಾತನಾಡಿ₹ 48 ಲಕ್ಷ ವೆಚ್ಚದಲ್ಲಿ ಈ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಬಸವನಗರ, ರಾಂಪೂರ, ಬಿಲಕೇರಿ, ತಿಮ್ಮಾಪೂರ, ಬೋಡನಾಯಕದಿನ್ನಿ, ಸಂಗಾಪುರ, ಜಡ್ರಾಮಕುಂಟಿ ಲಂಬಾಣಿ ತಾಂಡಾ ಭಾಗದ ಜನತೆಗೆ, ಜನ-ಜಾನುವಾರು­ಗಳಿಗೆ ಈ ಕೆರೆ ಪುನರುಜ್ಜೀವನದಿಂದ ಸಹಕಾರಿಯಾಗಲಿದೆ

ಈ ಭಾಗದಲ್ಲಿ ನೀರಿನ ಸಮಸ್ಯೆಗೆ ಮುಂಬರುವ ದಿನಗಳಲ್ಲಿ ಸ್ಪಲ್ಪಮಟ್ಟಿಗೆ ಸುಧಾರಿಸಲಿದೆ ನೀರನ್ನು ಜನರು ಸರಿಯಾದ ರೀತಿಯಲ್ಲಿ ಸಮರ್ಪಕವಾಗಿ ಬಳಸುವಂತೆ ತಿಳಿಸಿದರು.ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರಕಾರ ಅಸ್ತಿತ್ವಕ್ಕೆ ಬಂದಾಗಿನಿಂದ ಅನೇಕ ಅಭಿವೃದ್ಧಿ ಪರ ಕಾಮಗಾರಿ­ಗಳನ್ನು ಕೈಗೊಳ್ಳಲಾಗಿದೆ. ಅವುಗಳನ್ನು ಕಾರ್ಯಕರ್ತರು ಸೂಕ್ತ ರೀತಿಯಲ್ಲಿ ಸಾರ್ವಜನಿಕರಿಗೆ ತಲುಪಿಸುವ ಕಾರ್ಯ­ವನ್ನು ಮಾಡಬೇಕು ಎಂದು ತಿಳಿಸಿದರು.

ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಬಸವಂತಪ್ಪ ಮೇಟಿ, ಜಿಲ್ಲಾ ಪಂಚಾಯ್ತಿ ಸದಸ್ಯೆ ಹನಮವ್ವ ಕರಿಹೊಳಿ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಸಿ.ಆರ್.ಪರನ­ಗೌಡರ, ಮುತ್ತಪ್ಪ ಹುಗ್ಗಿ, ತಾಲ್ಲೂಕು ಪಂಚಾಯ್ತಿ ಸದಸ್ಯ ಬಸವರಾಜ ಕೆಂಜೋಡಿ ಹಾಜರಿದ್ದರು.

Comments
ಈ ವಿಭಾಗದಿಂದ ಇನ್ನಷ್ಟು
ಅನಾಥ ಮಕ್ಕಳ ತಾಯಿ ಬಸವ ಕೃಪಾಲಯ

ಕೂಡಲಸಂಗಮ
ಅನಾಥ ಮಕ್ಕಳ ತಾಯಿ ಬಸವ ಕೃಪಾಲಯ

26 May, 2017

ರಾಂಪುರ
ಹೊರಗುತ್ತಿಗೆ ಪದ್ಧತಿ ರದ್ದುಗೊಳಿಸಿ: ಪ್ರತಿಭಟನೆ

ಕೆಲಸದ ಸ್ಥಳದಲ್ಲಿ ಹ್ಯಾಂಡ್ ಗ್ಲೌಸ್, ಶೂ, ಟಾರ್ಚ್, ರಬ್ಬರ್ ಮ್ಯಾಟ್ ಹಾಗೂ ಜಾಕ್‌ವೆಲ್‌ಗಳಲ್ಲಿ ಸ್ವಚ್ಛವಾದ ಗಾಳಿ ಬೆಳಕು ಒಳಗೊಂಡ ಕೋಣೆ ಒದಗಿಸಬೇಕು. ಕೆಲಸದ ಸಮಯವನ್ನು...

26 May, 2017

ಬೀಳಗಿ
‘ಮರಳು ಲೂಟಿ ಶ್ರೇಯ ಬಿಜೆಪಿ ಸರ್ಕಾರದ್ದು’

ಸರ್ಕಾರದ ಮಟ್ಟದಲ್ಲಿ ಭೂಮಿ ಬೆಲೆ ಹೆಚ್ಚಿಸಲು ಕಳೆದ ಮೂರು ವರ್ಷಗಳಿಂದ ಅವಿರತ ಶ್ರಮವಹಿಸಿ ಇಂದು ಪ್ರತಿ ಎಕರೆಗೆ ₹ 25 ಲಕ್ಷ ಕೊಡಿಸಲು ಮುಂದಾಗಿದ್ದೇನೆ....

26 May, 2017

 ಬಾಗಲಕೋಟೆ
ಮದ್ಯದಂಗಡಿ ಸ್ಥಳಾಂತರ: ಜೂ.30ರ ಗಡುವು

ಸುಪ್ರೀಂಕೋರ್ಟ್ ಹೆದ್ದಾರಿಯಿಂದ 500 ಮೀಟರ್ ದೂರಕ್ಕೆ ಮದ್ಯದಂಗಡಿಗಳನ್ನು ಸ್ಥಳಾಂತರಿಸಲು ಈ ಮೊದಲು ಆದೇಶಿ­ಸಿತ್ತು. ಅದಕ್ಕೆ 2017 ಮಾರ್ಚ್ 31ರವರೆಗೆ ಗಡುವು ನೀಡಿತ್ತು.

26 May, 2017

ಕಮತಗಿ
ಸಂಭ್ರಮದ ಚೌಡೇಶ್ವರಿ ಜಾತ್ರೆ

ಭಕ್ತರು ಬೆಳಿಗ್ಗೆಯಿಂದ ಮಧ್ಯಾಹ್ನದ ವರೆಗೆ ಹೋಳಿಗೆ ಶೀಕರಣಿ, ಕಾಯಿ ಕರ್ಪೂರ, ನೈವೇದ್ಯ ಅರ್ಪಿಸಿ ದರ್ಶನ ಪಡೆದು ಕೃತಾರ್ಥರಾದರು.

26 May, 2017