ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತೀಯ ಸಿನಿಮಾಗಳನ್ನು ಭಾಷೆಯ ಆಧಾರದಲ್ಲಿ ವಿಭಾಗಿಸಬೇಡಿ: ಪ್ರಿಯಾಂಕಾ ಚೋಪ್ರಾ

Last Updated 11 ಏಪ್ರಿಲ್ 2017, 14:14 IST
ಅಕ್ಷರ ಗಾತ್ರ

ನವದೆಹಲಿ: ಪ್ರತಿವರ್ಷವೂ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟವಾಗುವ ಸಂದರ್ಭಗಳಲ್ಲಿ ಯಾವ ಭಾಷೆಯ ಸಿನಿಮಾಗಳು ಎಷ್ಟು ಪ್ರಶಸ್ತಿ ಪಡೆದಿವೆ ಎಂದು ವಿಭಾಗಿಸಲಾಗುತ್ತದೆ. ಹಾಗೆ ಮಾಡುವುದು ಬೇಡ ಎಂದು  ನಟಿ, ನಿರ್ಮಾಪಕಿ ಪ್ರಿಯಾಂಕಾ ಚೋಪ್ರಾ ಹೇಳಿದ್ದಾರೆ.

‘ನಾನು ನಮ್ಮ ಸಿನಿಮಾಗಳ ನಡುವೆ ಹೋಲಿಕೆ ಮಾಡಲು ಹೋಗುವುದಿಲ್ಲ. ಅಂತಿಮವಾಗಿ ನಾವೆಲ್ಲರೂ ಭಾರತೀಯರು. ಇಲ್ಲಿ ನಿರ್ಮಾಣವಾಗುವುದೆಲ್ಲಾ ಭಾರತೀಯ ಸಿನಿಮಾಗಳು’ ಎಂದು ಪ್ರಿಯಾಂಕಾ ಅಭಿಪ್ರಾಯ ಪಟ್ಟಿದ್ದಾರೆ.

‘ಸಿನಿಮಾ ಪ್ರಾದೇಶಿಕವಾದದ್ದಾಗಿರಲಿ ಅಥವಾ ಹಿಂದಿ ಭಾಷೆಯದ್ದೇ ಆಗಿರಲಿ ಒಟ್ಟಾರೆಯಾಗಿ ನಾನು ಅದನ್ನು ಕಣ್ತುಂಬಿಕೊಳ್ಳಲು ಕಾತರಳಾಗಿರುತ್ತೇನೆಯೇ ಹೊರತು ಅವುಗಳನ್ನು ವಿಭಾಗಿಸುವ ಗೋಜಿಗೆ ಹೋಗುವುದಿಲ್ಲ’

‘ನಾನು ನಕಾರಾತ್ಮಕವಾಗಿ ಚಿಂತಿಸುವುದಿಲ್ಲ. ಪ್ರಾದೇಶಿಕ ಭಾಷೆಯಲ್ಲಿಯೂ ಹಲವು ಮಂದಿ ಅತ್ಯುತ್ತಮ ನಿರ್ದೇಶಕರು ಹಾಗೂ ನಿರ್ಮಾಪಕರಿದ್ದಾರೆ. ಪ್ರಾದೇಶಿಕ ಸಿನಿಮಾಗಳೂ ಹೆಚ್ಚಿನ ಮಾನ್ಯತೆ ಪಡೆಯಲಿ ಹಾಗೂ ಮತ್ತಷ್ಟು ಉತ್ತಮ ಸಿನಿಮಾಗಳನ್ನು ರೂಪಿಸಲಿ’ ಎಂದು ಅವರು ಹೇಳೀದ್ದಾರೆ.

ಪ್ರಿಯಾಂಕಾ ಅವರು ಹಣ ಹೂಡಿದ್ದ ಮರಾಠಿ ಸಿನಿಮಾ ವೆಂಟಿಲೇಟರ್‌ 64ನೇ ರಾಷ್ಟ್ರ ಪ್ರಶಸ್ತಿ ಪ್ರದಾನ ಸಂದರ್ಭದಲ್ಲಿ ಮೂರು ಪ್ರಶಸ್ತಿಗಳನ್ನು ಬಾಚಿಕೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT