ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಮರಾವತಿ’ ಅತ್ಯುತ್ತಮ ಚಿತ್ರ, ಅಚ್ಯುತ್ ಕುಮಾರ್ ಶ್ರೇಷ್ಠ ನಟ,ಶ್ರುತಿ ಹರಿಹರನ್‍ಗೆ ಶ್ರೇಷ್ಠ ನಟಿ ಪ್ರಶಸ್ತಿ

Last Updated 11 ಏಪ್ರಿಲ್ 2017, 14:31 IST
ಅಕ್ಷರ ಗಾತ್ರ

ಬೆಂಗಳೂರು: 2016ನೇ ವರ್ಷದ ಕರ್ನಾಟಕ ಚಲನ ಚಿತ್ರ ವಾರ್ಷಿಕ ಪ್ರಶಸ್ತಿಗಳು ಘೋಷಣೆಯಾಗಿವೆ. ಪೌರ ಕಾರ್ಮಿಕನೊಬ್ಬನ  ಜೀವನದ ಕಥಾವಸ್ತುವಿರುವ ಬಿ.ಎಂ.ಗಿರಿರಾಜ್ ನಿರ್ದೇಶನದ ‘ಅಮರಾವತಿ’ ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ಭಾಜನವಾಗಿದೆ.  ಇದೇ ಚಿತ್ರದ ನಟನೆಗಾಗಿ ಅಚ್ಯುತ್ ಕುಮಾರ್ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದಿದ್ದಾರೆ. ಬ್ಯೂಟಿಫುಲ್ ಚಿತ್ರದ ನಟನೆಗಾಗಿ ಶ್ರುತಿ ಹರಿಹರನ್‍ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ಲಭಿಸಿದೆ.

[related]

2016 ನೇ ವರ್ಷದ ರಾಜ್ಯ ವಾರ್ಷಿಕ ಚಲನಚಿತ್ರ ಪ್ರಶಸ್ತಿ

ಮೊದಲನೆ ಅತ್ಯುತ್ತಮ ಚಿತ್ರ : ಅಮರಾವತಿ (ನಿರ್ದೇಶಕ: ಬಿ.ಎಂ. ಗಿರಿರಾಜ್)
ಎರಡನೇ ಅತ್ಯುತ್ತಮ ಚಿತ್ರ : ರೈಲ್ವೇ ಚಿಲ್ಡ್ರನ್
ಮೂರನೇ ಅತ್ಯುತ್ತಮ ಚಿತ್ರ : ಅಂತರ್ಜಲ
ವಿಶೇಷ ಸಾಮಾಜಿಕ ಕಾಳಜಿಯ ಚಿತ್ರ : ಮೂಡ್ಲ ಸೀಮೆಯಲಿ
ಅತ್ಯುತ್ತಮ ಜನಪ್ರಿಯ ಮನರಂಜನಾ ಚಿತ್ರ : ಕಿರಿಕ್ ಪಾರ್ಟಿ
ಅತ್ಯುತ್ತಮ ಮಕ್ಕಳ ಚಿತ್ರ : ಜೀರ್ ಜಿಂಬೆ
ಅತ್ಯುತ್ತಮ ಕರ್ನಾಟಕ ಪ್ರಾದೇಶಿಕ ಭಾಷಾ ಚಿತ್ರ : ಮದಿಪು (ತುಳು ಭಾಷೆ)


ಚೊಚ್ಚಲ ನಿರ್ದೇಶನದ ಅತ್ಯುತ್ತಮ ಚಿತ್ರ: ರಾಮ ರಾಮಾ ರೇ

ಪ್ರಶಸ್ತಿ ವಿಜೇತರ ಪಟ್ಟಿ
ಅತ್ಯುತ್ತಮ ನಟ - ಅಚ್ಯುತ್ ಕುಮಾರ್ - ಅಮರಾವತಿ
ಅತ್ಯುತ್ತಮ ನಟಿ - ಶ್ರುತಿ ಹರಿಹರನ್‍  -ಬ್ಯೂಟಿಪುಲ್ ಮನಸುಗಳು
ಅತ್ಯುತ್ತಮ ಪೋಷಕ ನಟ - ನವೀನ್ ಡಿ ಪಡೀಲ್ -ಕುಡ್ಲ ಕೆಫೆ (ತುಳು)
ಅತ್ಯುತ್ತಮ ಪೋಷಕ ನಟಿ - ಅಕ್ಷತಾ ಪಾಂಡವಪುರ (ಪಲ್ಲಟ)
ಅತ್ಯುತ್ತಮ ಕತೆ - ನಂದಿತಾ ಯಾದವ್
ಅತ್ಯುತ್ತಮ ಚಿತ್ರಕತೆ -ಅರವಿಂದ ಶಾಸ್ತ್ರಿ (ಚಿತ್ರ -ಕಹಿ)

ಅತ್ಯುತ್ತಮ ಸಂಭಾಷಣೆ - ಬಿ.ಎಂ.ಗಿರಿರಾಜ್ (ಚಿತ್ರ: ಅಮರಾವತಿ)

ಅತ್ಯುತ್ತಮ ಛಾಯಾಗ್ರಹಣ -ಶೇಖರ್ ಚಂದ್ರ -(ಚಿತ್ರ: ಮುಂಗಾರು ಮಳೆ-2)
ಅತ್ಯುತ್ತಮ ಸಂಗೀತ ನಿರ್ದೇಶನ ಎಂ.ಆರ್.ಚರಣ್ ರಾಜ್ - (ಚಿತ್ರ: ಜೀರ್ ಜಿಂಬೆ)
ಅತ್ಯುತ್ತಮ ಸಂಕಲನ ಸಿ.ರವಿಚಂದ್ರನ್ - (ಚಿತ್ರ: ಮಮ್ಮಿ)
ಅತ್ಯುತ್ತಮ ಬಾಲ ನಟ -ಮಾಸ್ಟರ್ ಮನೋಹರ್ ಕೆ. -(ಚಿತ್ರ: ರೈಲ್ವೇ ಚಿಲ್ಡ್ರನ್)
ಅತ್ಯುತ್ತಮ ಬಾಲ ನಟಿ- ಬೇಬಿ ಸಿರಿವಾನಳ್ಳಿ (ಚಿತ್ರ: ಜೀರ್ ಜಿಂಬೆ)
ಅತ್ಯುತ್ತಮ ಕಲಾ ನಿರ್ದೇಶನ - ಶಶಿಧರ ಅಡಪ (ಚಿತ್ರ: ಉಪ್ಪಿನ ಕಾಗದ)
ಅತ್ಯುತ್ತಮ ಗೀತ ರಚನೆ -ಕಾರ್ತಿಕ್ ಸರಗೂರು (ಚಿತ್ರ: ಜೀರ್ ಜಿಂಬೆ)
ಅತ್ಯುತ್ತಮ ಹಿನ್ನೆಲೆ ಗಾಯಕ -ವಿಜಯ್ ಪ್ರಕಾಶ್ (ಚಿತ್ರ: ಬ್ಯೂಟಿಪುಲ್ ಮನಸುಗಳು)
ಅತ್ಯುತ್ತಮ ಹಿನ್ನೆಲೆ ಗಾಯಕಿ ಸಂಗೀತಾ ರವೀಂದ್ರನಾಥ್ (ಚಿತ್ರ: ಜಲ್ಸ)

ತೀರ್ಪುಗಾರರ ವಿಶೇಷ ಪ್ರಶಸ್ತಿ -ಚಿನ್ಮಯ್ -(ಚಿತ್ರ: ಸಂತೆಯಲ್ಲಿ ನಿಂತ ಕಬೀರ)
ಅತ್ಯುತ್ತಮ ನಿರ್ಮಾಣ ನಿರ್ವಾಹಕ ಕೆ.ವಿ.ಮಂಜಯ್ಯ -(ಚಿತ್ರ: ಮುಂಗಾರು ಮಳೆ-2)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT