ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೃತ್ತಿಪರ ಕ್ಯಾಮೆರಾಗಳಿಗೆ ಬೇಡಿಕೆ

Last Updated 11 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಗುಣಮಟ್ಟದ ಕ್ಯಾಮೆರಾ ಇರುವ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆ ಪ್ರವೇಶಿಸುತ್ತಿವೆ. ಇದರಿಂದ ಕಾಂಪ್ಯಾಕ್ಟ್‌ ಕ್ಯಾಮೆರಾ ಮಾರುಕಟ್ಟೆ ಕುಸಿತ ಕಾಣುತ್ತಿದೆ. ಆದರೆ, ಮಧುರವಾದ ಕ್ಷಣಗಳನ್ನು ಸೆರೆಹಿಡಿಯಲು ಡಿಎಸ್‌ಎಲ್‌ಆರ್‌ ಕ್ಯಾಮೆರಾಗಳೇ ಹೆಚ್ಚು ಸೂಕ್ತ ಎನ್ನುವುದು  ಕ್ಯಾನನ್‌ ಇಂಡಿಯಾದ ಉಪಾಧ್ಯಕ್ಷ ಎಡ್ಡಿ ಉಡಗವ ಅವರ ಅಭಿಮತ.
ಬೆಂಗಳೂರಿನಲ್ಲಿ ಕ್ಯಾನನ್‌ ಇಮೇಜ್ ಸ್ಟೋರ್‌ನ (ಸಿಐಎಸ್‌) 11 ನೇ ಮಳಿಗೆ ಉದ್ಘಾಟನೆ ಸಂದರ್ಭದಲ್ಲಿ ಅವರು ಭಾರತದಲ್ಲಿ ಕ್ಯಾನನ್‌ ಇಂಡಿಯಾದ ವಹಿವಾಟಿನ ಪ್ರಗತಿಯ ಜತೆಗೆ ಚಿಲ್ಲರೆ ಮಾರುಕಟ್ಟೆಯ ಮಹತ್ವವನ್ನು ‘ಪ್ರಜಾವಾಣಿ’ ಜತೆ ಹಂಚಿಕೊಂಡಿದ್ದಾರೆ.

‘ಸ್ಮಾರ್ಟ್‌ಫೋನ್‌ನಲ್ಲಿ ಚಿತ್ರ ತೆಗೆಯುವುದು ನನಗೂ ಇಷ್ಟ. ಸ್ಮಾರ್ಟ್‌ಫೋನ್‌ ಸದಾ ನಮ್ಮೊಂದಿಗೇ ಇರುವುದರಿಂದ ಎಲ್ಲಿ, ಯಾವಾಗ ಬೇಕಿದ್ದರೂ ಫೋಟೊ ತೆಗೆಯಬಹುದು. ಆದರೆ, ಸ್ಮಾರ್ಟ್‌ಫೋನ್‌ ಕ್ಯಾಮೆರಾದಿಂದ ಸೆರೆ ಹಿಡಿಯಲು ಆಗದೇ ಇರುವಂತಹ  ಮತ್ತು ಉತ್ತಮ ಗುಣಮಟ್ಟದ ಫೋಟೊಗಳನ್ನು ಡಿಎಸ್‌ಎಲ್‌ಆರ್‌ ಕ್ಯಾಮೆರಾಗಳಲ್ಲಿ ತೆಗೆಯಬಹುದು.

‘ಫೋಟೊಗ್ರಫಿ ಕಲಿಯುತ್ತಿರುವ ಮತ್ತು ವೃತ್ತಿಪರರಿಗೆ ಸೂಕ್ತವಾದ ಕ್ಯಾಮೆರಾ ತಯಾರಿಸುವಲ್ಲಿ ಕ್ಯಾನನ್‌ ಮುಂಚೂಣಿಯಲ್ಲಿದೆ’ ಎಂದೂ ಅವರು ಹೇಳುತ್ತಾರೆ.

ದಕ್ಷಿಣ ಭಾರತ ದೊಡ್ಡ ಮಾರುಕಟ್ಟೆ ‘ಕ್ಯಾನನ್‌ಗೆ ಭಾರತ ಬಹಳ ಮುಖ್ಯ ಮಾರುಕಟ್ಟೆಯಾಗಿದೆ. ಆಕ್ರಮಣಕಾರಿ ಮಾರುಕಟ್ಟೆ ವಿಸ್ತರಣೆ ಯೋಜನೆಯಲ್ಲಿ ಭಾರತದಲ್ಲಿ ನಮ್ಮ ವಹಿವಾಟು ಹೆಚ್ಚಿಸುವ ಉದ್ದೇಶ ಹೊಂದಿದ್ದೇವೆ’ ಎಂದರು.

‘ದಕ್ಷಿಣ ಭಾರತ ಅತಿ ದೊಡ್ಡ ಮಾರುಕಟ್ಟೆಯಾಗಿದೆ. ಹೆಚ್ಚಿನ ವರಮಾನ ಈ ಭಾಗದಿಂದಲೇ ಬರುತ್ತಿದೆ. ವೃತ್ತಿಪರ ಕ್ಯಾಮೆರಾಗಳಿಗೆ ಬೆಂಗಳೂರಿನಲ್ಲಿ ಬೇಡಿಕೆ ಗರಿಷ್ಠ ಮಟ್ಟದಲ್ಲಿದೆ. ಹೊಸ ತಾಂತ್ರಿಕತೆ ಅಳವಡಿಸಿಕೊಳ್ಳುವುದರಲ್ಲಿ ಬೆಂಗಳೂರು ಮುಂಚೂಣಿಯಲ್ಲಿದೆ. ಹೀಗಾಗಿ ಬೆಂಗಳೂರು ಮಾರುಕಟ್ಟೆ ನಮ್ಮ ಮೊದಲ ಆದ್ಯತೆ ಎನ್ನುತ್ತಾರೆ’ ಎಡ್ಡಿ.

ಮಾರುಕಟ್ಟೆ ವಿಸ್ತರಣೆ

ಆನ್‌ಲೈನ್‌  ಮಾರುಕಟ್ಟೆ ಜನಪ್ರಿಯವಾಗುತ್ತಿದೆ ಎನ್ನುವುದು ನಿಜ. ಆದರೆ, ವಸ್ತುಗಳ ಖರೀದಿ ಪ್ರಮಾಣ ಗಮನಿಸಿದರೆ, ಚಿಲ್ಲರೆ ಮಾರುಕಟ್ಟೆಯೇ ಈಗಲೂ ಆಧಿಪತ್ಯ ಹೊಂದಿದೆ ಎನ್ನುವುದನ್ನು ಎಡ್ಡಿ ಒಪ್ಪುತ್ತಾರೆ.

‘ಭಾರತದ ಗ್ರಾಹಕರು ಸಂಪೂರ್ಣವಾಗಿ ಆನ್‌ಲೈನ್‌ ಜಗತ್ತಿಗೆ ಹೊಂದಿಕೊಳ್ಳುವುದು ಅಷ್ಟು ಸುಲಭಕ್ಕೆ ಸಾಧ್ಯವಿಲ್ಲ. ಅದಕ್ಕೆ ದಶಕ ಅಥವಾ ಅದಕ್ಕಿಂತಲೂ ಹೆಚ್ಚು ಸಮಯ ಹಿಡಿಯಬಹುದು’ ಎಂದು ಹೇಳುತ್ತಾರೆ ಅವರು.

‘ನಾವು ಇರುವಲ್ಲಿಗೇ ಆನ್‌ಲೈನ್‌ ಮೂಲಕ ವಸ್ತುಗಳನ್ನು ತರಿಸಿಕೊಳ್ಳುವ ಕಾಲ ಇದು. ಹೀಗಿದ್ದರೂ, ಈಗಲೂ ಶೇ 90ರಷ್ಟು ಜನರು ಚಿಲ್ಲರೆ ಮಳಿಗೆಗಳ ಮೂಲಕ ಖರೀದಿಸುವುದನ್ನೇ ಹೆಚ್ಚು ಇಷ್ಟಪಡುತ್ತಾರೆ.  ವಸ್ತುವನ್ನು ಮುಟ್ಟಿ ನೋಡಿ ಅದರ ಗುಣಮಟ್ಟವನ್ನು ಸೂಕ್ಷ್ಮವಾಗಿ ಅರಿತುಕೊಂಡು ಖರೀದಿಸಿದರೇ ಮನಸ್ಸಿಗೆ ನೆಮ್ಮದಿ.
‘ನಿರ್ದಿಷ್ಟವಾಗಿ ಕ್ಯಾನನ್‌ ಕ್ಯಾಮೆರಾ ಬಗ್ಗೆ ಹೇಳುವುದಾದರೆ, ಕ್ಯಾನನ್‌ ಕೂಡಾ ಆನ್‌ಲೈನ್‌ ಮಳಿಗೆ ಹೊಂದಿದೆ. ಆದರೆ, ಗರಿಷ್ಠ ಪ್ರಮಾಣದ ವಹಿವಾಟು ನಡೆಯುತ್ತಿರುವುದು ‘ಕ್ಯಾನನ್‌ ಇಮೇಜ್‌ ಸ್ಕ್ವೇರ್‌’ (ಸಿಐಎಸ್‌) ಮಳಿಗೆಗಳಲ್ಲಿಯೇ’ ಎಂದು ಅವರು ಹೇಳುತ್ತಾರೆ.

ಗ್ರಾಹಕರ ಬೇಡಿಕೆ ಮತ್ತು ಅಗತ್ಯಗಳನ್ನು ಅರ್ಥ ಮಾಡಿಕೊಳ್ಳಲು ಭೌತಿಕ ರೂಪದ ಮಳಿಗೆಗಳು ಅಗತ್ಯ ಎನ್ನುವುದು ಅವರ ಅಭಿಮತ.

ಸಿಐಎಸ್‌ ದೇಶದಲ್ಲೇ ಮೊದಲು:

ಕ್ಯಾಮೆರಾ ಖರೀದಿಸುವುದಕ್ಕೂ ಮುನ್ನವೇ  ಅದರ ಗುಣಮಟ್ಟ (ಚಿತ್ರ ಮತ್ತು ಪ್ರಿಂಟ್‌) ಪರೀಕ್ಷಿಸುವ ಅವಕಾಶ ಕ್ಯಾನನ್‌ ಇಮೇಜ್‌ ಸ್ಕ್ವೇರ್‌ (ಸಿಐಎಸ್‌) ಮಳಿಗೆಗಳಲ್ಲಿ ಕಲ್ಪಿಸಲಾಗಿದೆ. ಬೇರೆ ಯಾವ ಕಂಪೆನಿಗಳ ಮಳಿಗೆಗಳಲ್ಲಿಯೂ ಇಂತಹ ಅನುಭವ ಸಿಗುವುದಿಲ್ಲ.

‘ವೃತ್ತಿಪರರಿಗಷ್ಟೇ ಅಲ್ಲದೆ ಫೋಟೊಗ್ರಫಿ ಕಲಿಯುತ್ತಿರುವರಿಗೂ ಅಗತ್ಯವಾದ ಕ್ಯಾಮೆರಾ ಮತ್ತು ಪರಿಕರಗಳು ಇಲ್ಲಿ ಲಭ್ಯವಿವೆ. ಫೋಟೊ ಪ್ರಿಂಟಿಂಗ್‌ ಸೌಲಭ್ಯ ಸಹ ಒದಗಿಸಲಾಗುವುದು.

‘ಯಾವ ಕ್ಯಾಮೆರಾ ಖರೀದಿಸುವುದು ಎನ್ನುವ ಗೊಂದಲ ಇರುವವರಿಗೆ ಸೂಕ್ತ  ಮಾರ್ಗದರ್ಶನ ನೀಡಲು ತರಬೇತಿ ಪಡೆದ ಸಿಬ್ಬಂದಿ ನೆರವಾಗುತ್ತಾರೆ. ಡಿಎಸ್‌ಎಲ್‌ಆರ್‌ ಕ್ಯಾಮೆರಾ ಖರೀದಿಸುವವರಿಗೆ ಮಳಿಗೆಯಲ್ಲಿ ನಿಯಮಿತವಾಗಿ ತರಬೇತಿಗಳನ್ನು ಆಯೋಜಿಸಲಾಗುತ್ತದೆ.

‘ಈ ಎಲ್ಲಾ ಕ್ರಮಗಳಿಂದ ಭಾರತದಲ್ಲಿ ಕ್ಯಾನನ್‌ ಮಳಿಗೆಗಳು ಗ್ರಾಹಕರಿಗೆ ಹೆಚ್ಚು ಹತ್ತಿರವಾಗುತ್ತಿವೆ’ ಎಂದು ಅವರು ಅಭಿಪ್ರಾಯಪಡುತ್ತಾರೆ.

ಎಡ್ಡಿ ಉಡಗವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT