ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌಂದರ್ಯ, ಆರೋಗ್ಯಕ್ಕೆ ಬೇಕು ಹುಣಸೆ

Last Updated 11 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಹುಣಸೆಹಣ್ಣು, ಅದರ ಬೀಜ,  ಎಲೆ ಎಲ್ಲವುಗಳಲ್ಲೂ ಔಷಧೀಯ ಗುಣಗಳು ಇವೆ. ಅಂಥ ಕೆಲವು ಗುಣಗಳ ಕುರಿತಾಗಿ ಇಲ್ಲಿ ಉಲ್ಲೇಖಿಸಲಾಗಿದೆ.

* ಹುಣಸೆಹಣ್ಣಿನ ತಿರುಳು ಚರ್ಮದ ಕಾಂತಿ ಹೆಚ್ಚಿಸಲು ಸಹಾಯಕ. ಸ್ವಲ್ಪ ಬಿಸಿನೀರಿನಲ್ಲಿ ಮುಳುಗುವಷ್ಟು ಹುಣಸೆ ಹುಳಿಯನ್ನು ನೆನೆಸಬೇಕು. ಸ್ವಲ್ಪ ಹೊತ್ತಿನ ಬಳಿಕ ನೀರು ತಣ್ಣಗಾದ ಮೇಲೆ ಈ ಹುಳಿಯನ್ನು ಚೆನ್ನಾಗಿ ಕಿವುಚಿ ತಿರುಳು ಹೊರಬರುವಂತೆ ಮಾಡಬೇಕು. ಇದಕ್ಕೆ ಕೊಂಚ ಅರಿಶಿಣದ ಪುಡಿ ಮಿಶ್ರಣ ಮಾಡಿ. ಚೆನ್ನಾಗಿ ಮುಖ ತೊಳೆದು ಈ ಲೇಪನವನ್ನು ಮುಖ, ಕುತ್ತಿಗೆ ಕೈ ಮತ್ತು ಕಾಲುಗಳಿಗೆ ತೆಳುವಾಗಿ ಸವರಿ ಒಣಗಲು ಬಿಡಿ. ಸುಮಾರು ಹತ್ತು ನಿಮಿಷಗಳ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಈ ವಿಧಾನವನ್ನು ವಾರಕ್ಕೆರಡು ಬಾರಿ ಮಾಡಿದರೆ ಚರ್ಮಕ್ಕೆ ಹೊಳಪು ಬರುತ್ತದೆ. 

* ಹುಣಸೆ ಹಣ್ಣಿನಲ್ಲಿ ವಿಟಮಿನ್ ಬಿ ಹೇರಳವಾಗಿದ್ದು, ಕ್ಯಾಲ್ಸಿಯಂ ಅಧಿಕವಾಗಿದೆ. ವಿಪರೀತ ತಲೆನೋವು ಕಂಡುಬಂದ ಸಂದರ್ಭದಲ್ಲಿ ಇದರ ರಸವನ್ನು ಹಿಂಡಿ ನೆತ್ತಿಗೆ ಹಾಕಿದರೆ ಕೆಲ ಹೊತ್ತಿನ ಬಳಿಕ ನೋವು ಉಪಶಮನವಾಗುತ್ತದೆ.

* ಹೆಂಗಸರಲ್ಲಿ  ಬಿಳಿಸೆರಗು ಸಮಸ್ಯೆ ಇದ್ದಲ್ಲಿ ಹುಣಸೆ ಬೀಜವನ್ನು ಎರಡು ದಿನಗಳ ಕಾಲ ನೀರಿನಲ್ಲಿ ನೆನೆಸಿಟ್ಟು ಹಾಲಿನ ಜೊತೆ ಅರೆದು ಕುಡಿಯಬೇಕು.

* ಚರ್ಮದಲ್ಲಿ ತುರಿಕೆ, ನಂಜು, ನವೆಯುಂಟಾಗಿದ್ದರೆ ಹುಣಸೆ ರಸವನ್ನು ಆ ಜಾಗದಲ್ಲಿ ಉಜ್ಜಿದರೆ ತುರಿಕೆ ವಾಸಿಯಾಗುತ್ತದೆ.

* ಹುಣಸೆ ಹಣ್ಣಿನ ರಸ ಉತ್ತಮ ಜೀರ್ಣಕಾರಿ. ತಿಂದ ವಸ್ತು ಸರಿಯಾಗಿ ಜೀರ್ಣವಾಗದಿದ್ದರೆ ಹುಣಸೆ ಹಣ್ಣಿನ ರಸವನ್ನು ನೀರಿನ ಜೊತೆ ಕಲಸಿ ಕುಡಿದರೆ ಚೆನ್ನಾಗಿ ಜೀರ್ಣವಾಗುತ್ತದೆ.

* ದೇಹದ ಸಂದುಗಳಲ್ಲಿ ನೋವಾಗುತ್ತಿದ್ದರೆ, ಕೈ-ಕಾಲು, ಮಂಡಿ ನೋವಿನ ಸಂದರ್ಭದಲ್ಲಿ ಹುಣಸೆ ಮರದ ಎಲೆ, ಹೂವುಗಳನ್ನು ಬೆಂಕಿಯಲ್ಲಿ ಬಾಡಿಸಿಕೊಂಡು ನೋವು ಇರುವ ಜಾಗಗಳಿಗೆ ಹಚ್ಚಬೇಕು.

* ಗಂಟಲು ನೋವಿಗೆ ಹುಣಸೆ ಹಣ್ಣಿನ ರಸವನ್ನು ಉಪ್ಪಿನ ಜೊತೆ ಚೆನ್ನಾಗಿ ಅರೆದು ಗಂಟಲಿನ ಬಳಿ ಹಚ್ಚಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT