ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್‌ಫ್ರಾರೆಡ್‌ ಕಿರಣಗಳಿಂದ ಇಂಟರ್‌ನೆಟ್‌!

Last Updated 11 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಇಂಟರ್‌ನೆಟ್‌ ಇಲ್ಲದೆ ಪ್ರಪಂಚದ ಸಂಪರ್ಕವೇ ಇಲ್ಲ ಎಂಬಂತಾಗಿದೆ. ಈ ಇಂಟರ್‌ನೆಟ್‌ ಸಂಪರ್ಕ ಪಡೆಯಲು ಹಲವು ಮಾರ್ಗಗಳು ಈಗಾಗಲೇ ಇವೆ. ಇನ್ನೂ ಕೆಲವು ಸಂಶೋಧನೆಯಲ್ಲಿವೆ. ಈಗ ಇದಕ್ಕೊಂದು ಹೊಸ ಸೇರ್ಪಡೆಯಾಗಿದೆ.

ಅಪಾಯಕಾರಿಯಲ್ಲದ ಇನ್‌ಫ್ರಾರೆಡ್‌ ಕಿರಣಗಳಿಂದ ಇಂಟರ್‌ನೆಟ್‌ ಪಡೆಯುವ ವಿಧಾನವೊಂದನ್ನು ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ.

ಇದು ಈಗಾಗಲೇ ಇರುವ ವೈಫೈ ಜಾಲದ ವೇಗಕ್ಕಿಂತ 100 ಪಟ್ಟು ವೇಗ ಹೊಂದಿದೆ. ಅಲ್ಲದೆ ಇನ್ನಷ್ಟು  ಡಿವೈಸ್‌ಗಳಿಗೆ ಇದರ ಸಂಪರ್ಕ ಪಡೆದಾಗಲೂ ಯಾವುದೇ ಅಡಚಣೆಯಾಗದು.

ನಿಧಾನಗತಿ ಇಂಟರ್‌ನೆಟ್‌ ಬಳಕೆ ದಾರನಿಗೆ ತೊಂದರೆ ಕೊಡುತ್ತದೆ. ಮನೆ ಬಳಕೆಯ ವೈರ್‌ಲೆಸ್‌ ಡಿವೈಸ್‌ಗಳು  ಹೆಚ್ಚಿನ ಡೇಟಾವನ್ನು ಪಡೆಯುತ್ತವೆ. ಈಗಿನ ಹೊಸ ಇಂಟರ್‌ನೆಟ್‌, ಇದಕ್ಕೊಂದು ಅತ್ಯುತ್ತಮ ಪರಿಹಾರವಾಗಿದೆ ಎಂಬುದು ಸಂಶೋಧಕರ ಆತ್ಮವಿಶ್ವಾಸವಾಗಿದೆ. ಇನ್‌ಫ್ರಾರೆಡ್‌ ಕಿರಣಗಳಿಂದ ಇಂಟರ್‌ನೆಟ್‌ ಪಡೆಯುವುದನ್ನು ನೆದರ್‌ಲೆಂಡ್‌ನ ಇಂಡ್‌ಹೊವೆನ್‌ ತಾಂತ್ರಿಕ ವಿಶ್ವವಿದ್ಯಾಲಯದ ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ. ಇದರ  ವೇಗ ಪ್ರತಿ ಸೆಕೆಂಡ್‌ಗೆ 40 ಗಿಗಾಬೈಟ್‌ಗಳು. ಅತ್ಯುತ್ತಮ ವೈಫೈ ಸಹ ಪ್ರತಿ ಸೆಕೆಂಡ್‌ಗೆ   300 ಎಂಬಿಬೈಟ್‌ ನಷ್ಟು ವೇಗ ನೀಡಲಾರದು. ಒಂದೇ ಡೇಟಾ ಡಿವೈಸ್‌ ಅನ್ನು ಹಲವರು ಷೇರ್‌ ಮಾಡಿದಾಗ ಅದರ ವೇಗ ಕಡಿಮೆಯಾಗುತ್ತದೆ.
ಈ ತಂತ್ರಜ್ಞಾನ ಅತ್ಯಂತ ಸರಳ ಮತ್ತು ಸುಲಭ. ದರವೂ ಕಡಿಮೆ. ಇದರ  ನಿರ್ವಹಣೆಯೂ ಸುಲಭ. ಇದಕ್ಕೆ ವಿದ್ಯುತ್ ಸಂಪರ್ಕ ಸಹ ಬೇಕಿಲ್ಲ. ಇದರಲ್ಲಿ ಡೇಟಾ, ಬೆಳಕಿನ ಆಂಟೆನಾಗಳಿಂದ ಬರುತ್ತದೆ. ಇದನ್ನು ಸೀಲಿಂಗ್‌ ಮೇಲೆ ಇಡಬಹುದು. ಈ ಆಂಟೇನಾಗಳು ಆಪ್ಟಿಕಲ್‌ ಫೈಬರ್‌  ಮೂಲಕ ಪೂರೈಸಿದ ಕಿರಣಗಳನ್ನು ಕಳುಹಿಸಿಕೊಡುತ್ತವೆ. ಬೆಳಕಿನ ತರಂಗಾಂತರಗಳು ಬದಲಾದಂತೆ ಬೆಳಕಿನ ಕಿರಣಗಳ ದಿಕ್ಕನ್ನು  ಬದಲಾಯಿಸುತ್ತವೆ. ಅಪಾಯಕಾರಿ ಅಲ್ಲದ  ಇನ್‌ಫ್ರಾರೆಡ್‌ ಕಿರಣಗಳನ್ನು ಬಳಸುವುದರಿಂದ ಕಣ್ಣಿನ ರೆಟಿನಾಗಳಿಗೆ ಯಾವುದೇ ಹಾನಿಯಾಗುವುದಿಲ್ಲ.  ಒಟ್ಟಾರೆ ಈ ತಂತ್ರಜ್ಞಾನ ಸಂಪೂರ್ಣ ಸುರಕ್ಷಿತ.

1,500 ನ್ಯಾನೊ ಮೀಟರ್‌ ಅಥವಾ ಅದಕ್ಕಿಂತ ಹೆಚ್ಚಿನ ತರಂಗಾಂತರದ ಇನ್‌ಫ್ರಾರೆಡ್‌ ಕಿರಣಗಳನ್ನು ಇದು ಬಳಸಿಕೊಳ್ಳುತ್ತದೆ.

**

ಇನ್‌ಫ್ರಾರೆಡ್‌ ಕಿರಣಗಳಿಂದ ಪಡೆಯುವ ಇಂಟರ್‌ನೆಟ್‌ನಿಂದ ಹೆಚ್ಚುವರಿ ಸಾಧನಗಳಿಗೆ ಸಂಪರ್ಕ ಪಡೆದುಕೊಂಡಾಗಲೂ ವೇಗ ಕಡಿಮೆಯಾಗುವುದಿಲ್ಲ. ಏಕೆಂದರೆ ಪ್ರತಿ ಡಿವೈಸ್‌ ತನ್ನದೇ ಆದ ಬೆಳಕಿನ  ಕಿರಣಗಳನ್ನು ಪಡೆದುಕೊಳ್ಳುತ್ತದೆ.

–ಜೊಯೆನ್ನೆ ಓಹ್‌, ಸಂಶೋಧಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT