ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿ–ಮೇಲ್‌ನ ಹಲವು ಉಪಯೋಗಗಳು

Last Updated 11 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಇಮೇಲ್ ಅಂದರೆ ಮೊದಲು ಮನಸ್ಸಿಗೆ ಬರುವುದು ಜಿಮೇಲ್. ಕೆಲಸ ಮಾಡುವ ಸಂಸ್ಥೆಗಳು ಒದಗಿಸುವ ಇಮೇಲ್‌ಗಳಿಗೆ ಪರ್ಯಾಯ ಇಮೇಲ್‌ ವಿಳಾಸ ಹೊಂದಲು ಇಷ್ಟಪಡುವ ಹಲವರಿಗೆ ಜಿಮೇಲ್ ಉತ್ತಮ ಆಯ್ಕೆ ಎನಿಸಿಕೊಂಡಿದೆ. ಹೆಚ್ಚು ಕ್ಲೌಡ್‌ ಸ್ಪೇಸ್, ಸೆಕ್ಯುರಿಟಿ ಆಯ್ಕೆಗಳು ಇರುವುದು ಇದಕ್ಕೆ ಕಾರಣ. ಇಮೇಲ್ ಕಳುಹಿಸುವುದೊಂದೇ ಅಲ್ಲ ಜಿಮೇಲ್‌ ಅನ್ನು ಇನ್ನೂ ಅನೇಕ ಕೆಲಸಗಳಿಗೆ ಬಳಸಿಕೊಳ್ಳಬಹುದು.

* ನೋಟ್ಸ್‌ ಬರೆದುಕೊಳ್ಳಿ

ಗೂಗಲ್‌ ಸಿದ್ಧಪಡಿಸಿರುವ ‘ಕೀಪ್‌’ ಎಂಬ ನೋಟ್ಸ್‌ ಬರೆದುಕೊಳ್ಳುವ ಆಯ್ಕೆ ಇದೆ. ಇದರಲ್ಲಿ ಕನ್ನಡ, ಇಂಗ್ಲಿಷ್‌ ಸೇರಿದಂತೆ ಇತರೆ ಭಾಷೆಗಳಲ್ಲಿನ ಬರಹ ಉಳಿಸಿಕೊಳ್ಳಬಹುದು.
ಒಂದು ಸ್ಮಾರ್ಟ್‌ ನೋಟ್‌ಬುಕ್‌ನಂತೆ ಇದು ಉಪಯುಕ್ತ. ನೆಪಿಸಿಕೊಳ್ಳಬೇಕಾದ ಕಾರ್ಯಕ್ರಮ, ಮುಖ್ಯವಾದ ಸಂಗತಿಗಳು, ಮಾಡಲೇಬೇಕಾದ ಕೆಲಸದ ಪಟ್ಟಿ ಹಾಗೂ ಹೊಸ ಯೋಜನೆಗಳು ಎಲ್ಲವನ್ನು ಇದರಲ್ಲಿ ಬರೆದು ಉಳಿಸಿಕೊಳ್ಳಬಹುದು.

ಮೊಬೈಲ್‌ ಹಾಗೂ ಡೆಸ್ಕ್‌ಟಾಪ್ ಎರಡರಲ್ಲೂ ಇದನ್ನು ಬಳಸಬಹುದು. ಒಮ್ಮೆ ಗೂಗಲ್‌ ಮೇಲ್‌ನೊಂದಿಗೆ ಸಿಂಕ್‌(ಸಂಪರ್ಕಿಸಿ) ಮಾಡಿದರೆ ಸಾಕು, ಯಾವುದೇ ಸಮಯದಲ್ಲಿ ಎಲ್ಲಿ ಬೇಕಾದರೂ ನಿಮ್ಮ ಬರಹದ ಪುಟಗಳನ್ನು ತೆರೆಯಬಹುದು.

ಡೈರಿಯಂತೆಯೂ ‘ಗೂಗಲ್‌ ಕೀಪ್‌’ ಬಳಸಬಹುದು. ಚಿತ್ರ ಜೋಡಣೆ, ನಿಗದಿತ  ಸಮಯಕ್ಕೆ ಸರಿಯಾಗಿ ನೆನಪಿಸುವುದು, ಇತರೆ ಮೇಲ್‌ಗಳೊಂದಿಗೆ ಲಿಂಕ್ ಮಾಡುವ ಆಯ್ಕೆಗಳಿವೆ.

* ಕ್ಲೌಡ್‌ಗೆ ರವಾನೆ

ನಿಮ್ಮ ಯಾವುದೇ ಮಾಹಿತಿ, ಚಿತ್ರಗಳು, ವಿಡಿಯೊ ಎಲ್ಲವನ್ನೂ ಗೂಗಲ್‌ ಡ್ರೈವ್‌ನಲ್ಲಿ ಸಂಗ್ರಹಿಸಿಡಬಹುದು.

ನಿಮ್ಮ ಮೇಲ್‌ ಅಟ್ಯಾಚ್‌ಮೆಂಟ್‌ಗಳು ಸೇರಿದಂತೆ ಮೇಲ್‌ನೊಂದಿಗೆ ಸಂಪರ್ಕಿಸಿರುವ ಎಲ್ಲವೂ ಗೂಗಲ್ ಡ್ರೈವ್‌ನಲ್ಲಿ ತನ್ನಿಂದ ತಾನೇ ಸೇವ್ ಆಗುತ್ತದೆ. ಒಮ್ಮೆ ಕ್ಲೌಡ್‌ಗೆ ಅಪ್‌ಲೋಡ್ ಆದರೆ ಯಾವುದೇ ಅಪ್ಲಿಕೇಶನ್‌ಗಳ ಹಂಗಿಲ್ಲದೆ ಅದನ್ನು ಶೇರ್ ಮಾಡಬಹುದು.

* ವೈಯಕ್ತಿಕ ಫೋಟೊ ಆಲ್ಬಂ

ಗೂಗಲ್ ಮೇಲ್‌ ಖಾತೆ ಹೊಂದಿರುವವರು ಮೊಬೈಲ್‌ ಅಥವಾ ಡೆಸ್ಕ್‌ಟಾಪ್‌ನಲ್ಲಿ ಉಳಿಸಿರುವ ಚಿತ್ರಗಳನ್ನು ಗೂಗಲ್‌ನೊಂದಿಗೆ ಸಂಪರ್ಕಿಸಿ, ‘ಫೋಟೊ’ ಆಯ್ಕೆಯಲ್ಲಿ ಸಂಗ್ರಹಿಸಬಹುದು.

ಈ ಫೋಟೊಗಳನ್ನು ನಿಮ್ಮ ಕುಟುಂಬ, ಗೆಳೆಯರೊಂದಿಗೆ ಸುಲಭವಾಗಿ ಹಂಚಿಕೊಳ್ಳಬಹುದು.  ಇದರಲ್ಲಿ ಪ್ರತ್ಯೇಕ ತಲೆಬರಹ, ಎಡಿಟ್‌ ಹಾಗೂ ಆಲ್ಬಮ್‌ ಆಯ್ಕೆಯೂ ಇದ್ದು ಫೋಟೊಗಳನ್ನು ಸಂಗ್ರಹಿಸಲು ಸಹಕಾರಿ.

* ಸಾಮಾಜಿಕ ಜಾಲತಾಣಗಳ ನಿರ್ವಹಣೆ

ಇದು IFTTT ಆಯ್ಕೆಯ ಸಾಧ್ಯತೆ. ನಮ್ಮ ಫೇಸ್‌ಬುಕ್, ಟ್ವಿಟರ್, ಇನ್‌ಸ್ಟಾಗ್ರಾಂ, ಪಿಂಟ್‌ರೆಸ್ಟ್ ಹೀಗೆ ಎಲ್ಲದಕ್ಕೂ ಒಂದೇ ಬಾರಿ ಪೋಸ್ಟ್‌ ಆಗುವಂತೆ ಜಿಮೇಲ್‌ ಖಾತೆಯ ಸೆಟ್ಟಿಂಗ್‌ಗಳನ್ನು ಮಾರ್ಪಡಿಸಿಕೊಳ್ಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT