ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುದ ನೀಡುವ ಹಕ್ಕಿಗಳ ಕಲರವ

ಹಕ್ಕಿಗಳ ದಾಹ ತಣಿಸಲು ಟೊಂಕಕಟ್ಟಿ ನಿಂತ ಪಕ್ಷಿ ಪ್ರಿಯ ಟಿ.ಜಿ.ಶಾಂತರಾಜು
Last Updated 12 ಏಪ್ರಿಲ್ 2017, 4:59 IST
ಅಕ್ಷರ ಗಾತ್ರ

ಚಿಕ್ಕನಾಯಕನಹಳ್ಳಿ: ‘ಪ್ರತಿ ವರ್ಷ ಬೇಸಿಗೆಯಲ್ಲಿ ಯಂಕಣ್ಣನ ಕಟ್ಟೆಯಲ್ಲಿ ನೀರು ಇರುತ್ತಿತ್ತು. ನೀರು ಹರಸಿ ಬರುತ್ತಿದ್ದ ಹತ್ತಾರು ಬಗೆಯ ಹಕ್ಕಿಗಳು ಕಟ್ಟೆಯಲ್ಲಿ ದಾಹ ತಣಿಸಿಕೊಳ್ಳುತ್ತಿದ್ದವು. ಕಟ್ಟೆಯ ಸುತ್ತ ಇದ್ದ ಮರಗಳಲ್ಲಿ ಬೀಡು ಬಿಡುತ್ತಿದ್ದವು. ಹಕ್ಕಿಗಳ ಕಲರವ ಮುದ ನೀಡುತ್ತಿತ್ತು. ಆದರೆ ಈ ಬಾರಿ ಕಟ್ಟೆ ಒಣಗಿದ್ದರಿಂದ ನೀರು ಹುಡುಕಿಕೊಂಡು ಬರುತ್ತಿದ್ದ ಹಕ್ಕಿಗಳ ಪರದಾಟ ನೋಡಿದರೆ ಕರುಳು ಚುರುಕ್‌ ಎನ್ನುತ್ತಿತ್ತು’ ಎನ್ನುತ್ತಾರೆ ಪಕ್ಷಿ ಪ್ರಿಯ ಟಿ.ಜಿ.ಶಾಂತರಾಜು. 

‘ಹಕ್ಕಿಗಳ ನೀರಡಿಕೆ ನೀಗಿಸಲು ಏನಾದರೂ ಮಾಡಬೇಕು ಅನಿಸಿದ ತಕ್ಷಣ, ಕಟ್ಟೆಯ ಸಮೀಪದ ತಮ್ಮ ಜಮೀನನ್ನು ಸಮತಟ್ಟು ಮಾಡಿಸಿದೆ. ಪ್ಲಾಸ್ಟಿಕ್ ಟಬ್‌ಗಳನ್ನು ತಂದು ನೀರು, ಕಾಳು ಹಾಕಲು ಪ್ರಾರಂಭಿಸಿದೆ’ ಎಂದು ಹೇಳಿದರು.

‘ಶಿವರಾತ್ರಿಯ ದಿನದಂದು ನೀರು, ಕಾಳು ಇಟ್ಟು ಕಾದೆ. ಪ್ರಾರಂಭದಲ್ಲಿ ಹಕ್ಕಿಗಳು ಬರಲಿಲ್ಲ. ಕ್ರಮೇಣ ಹಕ್ಕಿಗಳ ಹಿಂಡು ಬರ ತೊಡಗಿತು. ನೀರು ಕುಡಿದು, ಕಾಳು ತಿಂದು, ಮಧ್ಯಾಹ್ನ ಪಕ್ಕದ ಮರಗಳ ಮೇಲೆ ಬೀಡು ಬಿಡುತ್ತವೆ.  ನಿತ್ಯ 5 ಕೊಡ ನೀರು ಹಾಗೂ 3 ಕೆ.ಜಿ ದವಸ ಖರ್ಚಾಗುತ್ತಿದೆ. ಅಲ್ಲದೇ ಇರುವೆಗಳಿಗಾಗಿ ಹೊಲದಲ್ಲಿ ಸಕ್ಕರೆ ಚೆಲ್ಲುತ್ತಿದ್ದೇನೆ’ ಎಂದರು. ತಾರೀಕಟ್ಟೆಯ ತಮ್ಮ ಒಂದು ಎಕರೆಯಲ್ಲಿ ತಮ್ಮ ತಂದೆಯ ಹೆಸರಿನಲ್ಲಿ ಅನಾಥಶ್ರಮ, ವೃದ್ಧಾಶ್ರಮ ಕಟ್ಟುತ್ತಿದ್ದಾರೆ.

‘ಹೊಲದ ಪಕ್ಷಿಗಳಿಗೆ ಶಾಶ್ವತ ನೆಲೆ
ಕೊಳವೆ ಬಾವಿ ಕೊರೆಸಿ ನೀರಿನ ಸಮಸ್ಯೆಯನ್ನು ಹೋಗಲಾಡಿಸುತ್ತೇನೆ. ಅಲ್ಲದೇ ಈ ಬಾರಿ ಮಳೆ ಬಿದ್ದ ತಕ್ಷಣ ಹಣ್ಣಿನ ಗಿಡಗಳನ್ನು ನೆಟ್ಟು, ಪಕ್ಷಿಗಳಿಗೆ ಶಾಶ್ವತ ನೆಲೆ ಕಲ್ಪಿಸುವ ಉದ್ದೇಶ ಹೊಂದಿದ್ದೇನೆ ಎನ್ನುತ್ತಾರೆ ಶಾಂತರಾಜು.ಲ್ಲಿ ಕೊಳವೆಬಾವಿ ಕೊರೆಸಿ ಪಕ್ಷಿಗಳಿಗೆ ನೀರಿನ ಸಮಸ್ಯೆಯನ್ನು ಶಾಶ್ವತವಾಗಿ ಹೋಗಲಾಡಿಸುವ ಕನಸಿದೆ. ಈ ಬಾರಿ ಮಳೆ ಬಿದ್ದ ತಕ್ಷಣ ಹಣ್ಣಿನ ಗಿಡಗಳನ್ನು ನೆಡುತ್ತೇನೆ’ ಎಂದು ತಮ್ಮ ಕನಸು ಹಂಚಿಕೊಂಡರು.

*
ಸ್ವಲ್ಪ ಸಮಯ, ಹಣ ಮೀಸಲಿಟ್ಟರೆ ಯಾರು ಬೇಕಾದರೂ ಹಕ್ಕಿಗಳಿಗೆ ನೀರು, ಕಾಳು ನೀಡಬಹುದು. ಇದರಿಂದ ತೃಪ್ತಿ ದೊರೆಯುತ್ತದೆ. ಅಲ್ಲದೇ ಹಕ್ಕಿಗಳ ಕಲರವ ಮನಸ್ಸಿಗೆ ಮುದ ನೀಡುತ್ತದೆ.
-ಟಿ.ಜಿ.ಶಾಂತರಾಜು, ಪಕ್ಷಿಪ್ರಿಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT