ಧರಣಿ

ನಾರಾಯಣಪುರ; ರೈತರ ಬಂಧನ, ಬಿಡುಗಡೆ

ಪ್ರತಿಭಟನಾ ನಿರತರು ಏಕಾಏಕಿ ರಸ್ತೆ ತಡೆಗೆ ಮುಂದಾದರು. ಆಗ ನಿಗಮದ ಅಧಿಕಾರಿಗಳು ಸ್ಥಳಕ್ಕೆ ಬಂದು ರೈತರ ಮನವೊಲಿಸಲು ಪ್ರಯತ್ನಿಸಿದರು

ಹುಣಸಗಿ: ರಾಂಪೂರ ಏತ ನೀರಾವರಿ ಕಾಲುವೆಗಳಿಗೆ ಏ. 25ರವರೆಗೆ ನೀರು ಹರಿಸುವಂತೆ  ನಾರಾಯಣಪುರದ ಮುಖ್ಯ ಎಂಜಿನಿಯರ್ ಕಚೇರಿ ಮುಂಭಾಗ ಹಮ್ಮಿಕೊಂಡಿದ್ದ ಧರಣಿ ಎರಡನೇ ದಿನವೂ ಮುಂದುವರೆಯಿತು.

ಈ ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡ ಸಿದ್ದು ಬಂಡಿ ಹಾಗೂ ಜಿ.ಪಂ ಸದಸ್ಯ ಬಸನಗೌಡ ಕಂಬಳಿ ಸೇರಿ ರೈತ ಮುಖಂಡರು ಪಾಲ್ಗೊಂಡಿದ್ದರು.
ನಿಗದಿಪಡಿಸಿರುವ ನೀರು ಬಿಡಬೇಕು ಅಲ್ಲಿಯ ತನಕ ಕದಲುವ ಮಾತೇ ಇಲ್ಲ ಎಂದು ರೈತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನಾ ನಿರತರು ಏಕಾಏಕಿ ರಸ್ತೆ ತಡೆಗೆ ಮುಂದಾದರು. ಆಗ ನಿಗಮದ ಅಧಿಕಾರಿಗಳು ಸ್ಥಳಕ್ಕೆ ಬಂದು ರೈತರ ಮನವೊಲಿಸಲು ಪ್ರಯತ್ನಿಸಿದರು. ಜಲಾಶಯದಲ್ಲಿ ಸಂಗ್ರಹವಿರುವ ನೀರು ಕುಡಿಯುವ ನೀರಿಗೆ ಮಾತ್ರ ಬಳಕೆ ಮಾಡಿಕೊಳ್ಳಲು ಸಂಗ್ರಹಿಸಲಾಗಿದೆ. ಕೃಷಿಗಾಗಿ ನೀರು ಇಲ್ಲ ಎಂದು ಹೇಳಿದರು.

ಕೆಲ  ಪ್ರತಿಭಟನಾಕಾರರು ಮುಖ್ಯ ಎಂಜಿನಿಯರ್ ಕಚೇರಿಗೆ ಮುತ್ತಿಗೆ ಹಾಕಲು ಮುಂದಾದರು. ಪರಿಸ್ಥಿತಿಯನ್ನು ಹತೋಟಿಗೆ ತರಲು  ಪ್ರತಿಭಟನಾ ನಿರತರನ್ನು  ಬಂಧಿಸಿ  ಬಿಡುಗಡೆ ಮಾಡಲಾಯಿತು.

ನಿಗಮದ ಕಚೇರಿಗೆ ಭದ್ರತೆ:  ಕಚೇರಿಗೆ ಸೂಕ್ತ ಪೊಲೀಸ್ ಭದ್ರತೆ ಒದಗಿಸಲಾಗಿದೆ.ಕಚೇರಿ ಮುಖ್ಯದ್ವಾರದ ಬಳಿ ಬ್ಯಾರಿಕೇಡ್‌ ಹಾಕಿ. ಪೊಲೀಸರನ್ನು ಹಾಗೂ ಡಿಎಆರ್ ತುಕಡಿಯನ್ನು ನಿಯೋಜಿಸಲಾಗಿದೆ.

Comments
ಈ ವಿಭಾಗದಿಂದ ಇನ್ನಷ್ಟು

ಸುರಪುರ
‘ಮಹಾದೇವಪ್ಪ ಚಟ್ಟಿ ರುಕ್ಮಾಪುರದ ಹೆಮ್ಮೆ’

ತಾಲ್ಲೂಕಿನ ರುಕ್ಮಾಪುರ ಗ್ರಾಮದ ಭಂಡಾರೆ ತೋಟದಲ್ಲಿ ಸೋಮವಾರ ಗ್ರಾಮ  ಸುಧಾರಣಾ ಸಮಿತಿ ವತಿಯಿಂದ  ಡಾ. ಮಹಾದೇವಪ್ಪ ಚಟ್ಟಿ ಮತ್ತು ಡಾ. ಚಂದ್ರಶೇಖರ ಚಟ್ಟಿ ದಂಪತಿಗೆ...

25 Jul, 2017

ಗುರುಮಠಕಲ್
ಕೋಲಿ ಸಮಾಜದ ಪ್ರತಿಭಟನೆ

ಪಟ್ಟಣದ ಗಾಂಧಿ ಮೈದಾನದಿಂದ ವಿಶೇಷ ತಹಶೀಲ್ದಾರ ಕಚೇರಿವರೆಗೆ  ಪ್ರತಿಭಟನಾ ಮೆರವಣಿಗೆ ನಡೆಸಿ ವಿಶೇಷ ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.

25 Jul, 2017
ಸಾಧಾರಣ ಮಳೆಗೆ ಕೊಚ್ಚಿಹೋದ ರಸ್ತೆ

ಯಾದಗಿರಿ
ಸಾಧಾರಣ ಮಳೆಗೆ ಕೊಚ್ಚಿಹೋದ ರಸ್ತೆ

23 Jul, 2017

ಯಾದಗಿರಿ
ಪಾದಯಾತ್ರೆಗೆ ಹರಿದುಬಂದ ಭಕ್ತಸಾಗರ

ಶಾಂತ ಶಿವಯೋಗಿ ಮಠದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗಂಗಾಧರ ಸ್ವಾಮೀಜಿ ಆಶೀರ್ವಚನ ನೀಡಿ, ‘ಅಕ್ಕರೆಯಿಂದ ಹೊಲವನ್ನು ಉತ್ತುವ ರೈತ ತಾನು ಬಿತ್ತುವ ಬೆಳೆ ಸಮೃದ್ಧವಾಗಿ...

23 Jul, 2017

ಚಿಂಚೋಳಿ
‘ಮುಖ್ಯನಾಲೆ ಬದಿಯಲ್ಲಿ ಸಸಿ ನೆಡಲು ಅಗತ್ಯ ಸಹಕಾರ’

‘ಅವಕಾಶವಿದ್ದಲ್ಲಿ ಸಸಿ ನೆಟ್ಟು ಹಸಿರು ಬೆಳೆಸಲು ಎಲ್ಲರೂ ಮುಂದಾಗಬೇಕು. ಕೆಳದಂಡೆ ಮುಲ್ಲಾಮಾರಿ ಯೋಜನೆಯ 80 ಕಿ.ಮೀ ಮುಖ್ಯ ನಾಲೆ ಬದಿ ಹಾಗೂ ಯೋಜನೆಯ ಮುಳುಗಡೆಯಾದ...

23 Jul, 2017