ಗಂಗಾವತಿ

ಮೂರು ಕರುಗಳಿಗೆ ಜನ್ಮ ನೀಡಿದ ಹಸು!

ತಾಲ್ಲೂಕಿನ ಶ್ರೀರಾಮನಗರದಲ್ಲಿ ಮಂಗಳವಾರ ರೈತರೊಬ್ಬರ ಹಸು ಮೂರು ಕರುಗಳಿಗೆ ಜನ್ಮ ನೀಡಿದೆ!

ಗಂಗಾವತಿ: ತಾಲ್ಲೂಕಿನ ಶ್ರೀರಾಮನಗರದಲ್ಲಿ ಮಂಗಳವಾರ ರೈತರೊಬ್ಬರ ಹಸು ಮೂರು ಕರುಗಳಿಗೆ ಜನ್ಮ ನೀಡಿದೆ! ಗ್ರಾಮದ ಐದನೇ ವಾರ್ಡ್ ಬಂಜಾರ ಕಾಲೊನಿಯ ಡ್ಯಾಗಲ ಮುನಿಶ್ವರರಾವ್ ಅವರು ಸಾಕಿದ 12 ವರ್ಷದ ಜರ್ಸಿ ಆಕಳು, ಎರಡು ಗಂಡು, ಒಂದು ಹೆಣ್ಣು ಕರುವನ್ನು ಹಾಕಿದೆ. ಕರುಗಳು ಹಾಗೂ ಆಕಳು ಆರೋಗ್ಯವಾಗಿವೆ. ಒಂದೊಂದು ಕರು ಕನಿಷ್ಠ 10 ರಿಂದ 12 ಕೆ.ಜಿ ಇವೆ. ಎಲ್ಲ ಅವಯವಗಳು ಸರಿಯಾಗಿವೆ.

ಕಳೆದ ಹಲವು ವರ್ಷದಿಂದ ಜಾನುವಾರು ವ್ಯಾಪಾರ ಮಾಡುತ್ತಿರುವ ಕೃಷಿಕ ಮುನಿಶ್ವರರಾವ್, ಸುಮಾರು ₹70 ಸಾವಿರಕ್ಕೆ ಈ ಆಕಳನ್ನು ಖರೀದಿಸಿದ್ದರು.
ಸಹಜವಾಗಿ ಶೇ 97ರಷ್ಟು ಜಾನುವಾರು ಒಂದು ಕರುವಿಗೆ ಜನ್ಮ ನೀಡುತ್ತವೆ. ಶೇ 2ರಷ್ಟು ಅವಳಿ ಕರುಗಳಿಗೆ ಜನ್ಮ ನೀಡುತ್ತವೆ. ಆದರೆ, ತ್ರಿವಳಿ ಕರುಗಳಿಗೆ ಹಸು ಜನ್ಮ ನೀಡುವುದು ಅತಿ ಅಪರೂಪ ಎಂದು ಗ್ರಾಮದ ಕೃಷಿಕರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

Comments
ಈ ವಿಭಾಗದಿಂದ ಇನ್ನಷ್ಟು
ನ್ಯಾಯಬೆಲೆ ಅಂಗಡಿಗಳಲ್ಲಿ ಹಣ ವಸೂಲಿ

ಕುಷ್ಟಗಿ
ನ್ಯಾಯಬೆಲೆ ಅಂಗಡಿಗಳಲ್ಲಿ ಹಣ ವಸೂಲಿ

27 May, 2017

ಗಂಗಾವತಿ
‘ಮೂರು ವರ್ಷ; ನೂರು ಯೋಜನೆ’

‘ಕೇಂದ್ರ ಸರ್ಕಾರದ ಮೂರು ವರ್ಷ ಪೂರೈಸಿದ ಅಂಗವಾಗಿ ಇಲ್ಲಿನ ಕೆಇಬಿ ಕಾಲೊನಿ ಗಣೇಶ ದೇವಸ್ಥಾನದಲ್ಲಿ  ಪೂಜೆ ಸಲ್ಲಿಸಿ, ದೇವಸ್ಥಾನದ ಆವರಣ ಸ್ವಚ್ಛಗೊಳಿಸಿದರು. ಸಸಿ ನೆಟ್ಟರು. ...

27 May, 2017

ಯಲಬುರ್ಗಾ
‘ವಿಶ್ವಾಸ ಕಳೆದುಕೊಂಡ ಕಾಂಗ್ರೆಸ್‌’

‘ಜಿಲ್ಲೆಯಲ್ಲಿ ಅಕ್ರಮ ನಡೆದರೂ ಸಂಬಂಧವಿಲ್ಲದವರಂತೆ ನಡೆದುಕೊಳ್ಳುತ್ತಿರುವ ಜಿಲ್ಲಾ ಉಸ್ತುವಾರಿ ಸಚಿವರು ಶೋಕಿಗಾಗಿ ಮಂತ್ರಿಯಾದಂತಿದೆ.

27 May, 2017

ಕನಕಗಿರಿ
ಕುಡಿವ ನೀರಿಗೆ ಹಾಹಾಕಾರ

ಗ್ರಾಮದಲ್ಲಿ 1200 ಜನಸಂಖ್ಯೆ ಇದೆ. ನೀರಿಗಾಗಿ ದೂರದ ಪಂಪ್‌ಸೆಟ್‌ಗಳನ್ನು ಹುಡುಕಿಕೊಂಡು ಜನರು ಅಲೆದಾಡುತ್ತಿದ್ದಾರೆ.

27 May, 2017

ಗಂಗಾವತಿ
ಪಿಎಸ್ಐ ಬೂಟಿನ ಏಟು: ವಿಡಿಯೊ ವೈರಲ್

‘ಪೊಲೀಸರ ಸಮ್ಮುಖದಲ್ಲಿಯೇ ಯುವಕರು ಬಡಿದಾಟ ಆರಂಭಿಸಿದಾಗ ತಳ್ಳಾಟ-ನೂಕಾಟ ನಡೆಯಿತು. ಈ ಸಂದರ್ಭ ಪಿಎಸ್ಐ ಪ್ರಕಾಶ ಮಾಳೆ  ಸಹನೆ ಕಳೆದುಕೊಂಡು, ತಾವು ಧರಿಸಿದ್ದ ಬೂಟಿನಿಂದ ಯುವಕರನ್ನು...

27 May, 2017