, ಅರುಣಾಚಲ ಪ್ರದೇಶ ಭಾರತದ್ದಲ್ಲ, ವಿವಾದಿತ ಪ್ರದೇಶ: ಚೀನಾ | ಪ್ರಜಾವಾಣಿ
ಗಡಿ ವಿವಾದ

ಅರುಣಾಚಲ ಪ್ರದೇಶ ಭಾರತದ್ದಲ್ಲ, ವಿವಾದಿತ ಪ್ರದೇಶ: ಚೀನಾ

ಭಾರತ ಸರ್ಕಾರದ ಅಧಿಕಾರಿಗಳು ಮತ್ತು ದಲೈಲಾಮಾ ನೀಡುತ್ತಿರುವ ಪ್ರಚೋದನಾಕಾರಿ ಹೇಳಿಕೆಗಳು ಗಡಿ ವಿವಾದ ಪರಿಹರಿಸುವ ಪ್ರಕ್ರಿಯೆ ಮೇಲೆ ಋಣಾತ್ಮಕ ಪರಿಣಾಮ ಬೀರಲಿದೆ ಎಂದು ಚೀನಾದ ವಿದೇಶಾಂಗ ಸಚಿವಾಲಯ ಹೇಳಿದೆ.

ಚೀನಾದ ವಿದೇಶಾಂಗ ಇಲಾಖೆಯ ವಕ್ತಾರ ಲು ಕಾಂಗ್

ಬೀಜಿಂಗ್: ‘ಅರುಣಾಚಲಪ್ರದೇಶ ಭಾರತದ್ದಲ್ಲ. ಭಾರತ–ಚೀನಾ ಗಡಿಯ ವಿವಾದಿತ ಪ್ರದೇಶ’ ಎಂದು ಚೀನಾ ಹೇಳಿದೆ.

ಟಿಬೆಟನ್ನರ ಧರ್ಮಗುರು ದಲೈಲಾಮಾ ಅವರಿಗೆ ಅರುಣಾಚಲಪ್ರದೇಶಕ್ಕೆ ಭೇಟಿ ನೀಡಲು ಅವಕಾಶ ಮಾಡಿಕೊಟ್ಟಿರುವುದು ಟಿಬೆಟ್ ಮತ್ತು ಗಡಿಪ್ರದೇಶಕ್ಕೆ ಸಂಬಂಧಿಸಿ ಭಾರತ ಬದ್ಧತೆ ಪ್ರದರ್ಶಿಸದಿರುವುದನ್ನು ಸೂಚಿಸಿದೆ. ಭಾರತ ಸರ್ಕಾರದ ಅಧಿಕಾರಿಗಳು ಮತ್ತು ದಲೈಲಾಮಾ ನೀಡುತ್ತಿರುವ ಪ್ರಚೋದನಾಕಾರಿ ಹೇಳಿಕೆಗಳು ಗಡಿ ವಿವಾದ ಪರಿಹರಿಸುವ ಪ್ರಕ್ರಿಯೆ ಮೇಲೆ ಋಣಾತ್ಮಕ ಪರಿಣಾಮ ಬೀರಲಿದೆ ಎಂದು ಚೀನಾದ ವಿದೇಶಾಂಗ ಸಚಿವಾಲಯ ಹೇಳಿದೆ.

ನಾವು ಇತಿಹಾಸದಿಂದ ಪಾಠ ಕಲಿಯಬೇಕಿದೆ ಎಂದು ಚೀನಾದ ವಿದೇಶಾಂಗ ಇಲಾಖೆಯ ವಕ್ತಾರ ಲು ಕಾಂಗ್ ಹೇಳಿದ್ದಾರೆ.

‘ಅರುಣಾಚಲಪ್ರದೇಶದ ಜತೆ ಗುರುತಿಸಿಕೊಳ್ಳುವ ದಕ್ಷಿಣ ಟಿಬೆಟ್‌ನ ಜನ ಭಾರತದ ಅಕ್ರಮ ಆಡಳಿತದಿಂದ ಕಠಿಣ ಜೀವನ ನಡೆಸುತ್ತಿದ್ದಾರೆ’ ಎಂದು ಬುಧವಾರ ಚೀನಾದ ಸರ್ಕಾರಿ ಒಡೆತನದ ಪತ್ರಿಕೆಯೊಂದರ ಸಂಪಾದಕೀಯದಲ್ಲಿ ಉಲ್ಲೇಖಿಸಲಾಗಿದೆ.

‘ದಕ್ಷಿಣ ಟಿಬೆಟನ್ನರನ್ನು ತಾರತಮ್ಯದಿಂದ ಕಾಣಲಾಗುತ್ತಿದೆ. ಅಲ್ಲಿ ಜೀವಿಸುವುದು ದುಸ್ತರವಾಗಿರುವುದರಿಂದ ಅವರು ಮತ್ತೆ ಚೀನಾದ ಜತೆ ಒಂದಾಗಲು ಬಯಸಿದ್ದಾರೆ’ ಎಂದೂ ಸಂಪಾದಕೀಯದಲ್ಲಿ ಹೇಳಲಾಗಿದೆ.

ಒಂದು ವಾರಕ್ಕೂ ಹೆಚ್ಚು ಅರುಣಾಚಲಪ್ರದೇಶದಲ್ಲಿದ್ದ ದಲೈಲಾಮಾ ಮಂಗಳವಾರ ಅಲ್ಲಿಂದ ತೆರಳಿದ್ದರು. ಇದರ ಬೆನ್ನಲ್ಲೇ ಚೀನಾ ಈ ಹೇಳಿಕೆ ನೀಡಿದೆ. ಅರುಣಾಚಲಪ್ರದೇಶಕ್ಕೆ ಭೇಟಿ ನೀಡಲು ದಲೈಲಾಮಾ ಅವರಿಗೆ ಅವಕಾಶ ನೀಡಬಾರದು ಎಂದು ಈ ಹಿಂದೆಯೇ ಚೀನಾ ಹೇಳಿತ್ತು. ಆದರೆ, ಅರುಣಾಚಲಪ್ರದೇಶ ಭೇಟಿಗೆ ಅವಕಾಶ ನೀಡುವ ಕ್ರಮವನ್ನು ಭಾರತ ಸರ್ಕಾರ ಸಮರ್ಥಿಸಿಕೊಂಡಿತ್ತು.

Comments
ಈ ವಿಭಾಗದಿಂದ ಇನ್ನಷ್ಟು

ಉತ್ತರ ಸಿರಿಯಾ
ವೈಮಾನಿಕ ದಾಳಿ: 12 ಸಾವು

ಉತ್ತರ ಸಿರಿಯಾದ ಬಂಡುಕೋರರ ಹಿಡಿತದಲ್ಲಿರುವ ಇಡ್ಲಿಬ್ ಪ್ರಾಂತ್ಯದ ದುವೇಲೆ ಗ್ರಾಮದ ಮೇಲೆ ರಷ್ಯಾ ಪಡೆಗಳು ನಡೆಸಿದ ವೈಮಾನಿಕ ದಾಳಿಯಲ್ಲಿ ಇಬ್ಬರು ಬಂಡುಕೋರರು ಸೇರಿ 12...

26 Apr, 2017

ಚ್‌–1ಬಿ ವೀಸಾ
ಭಾರತದ ಕಂಪೆನಿಗಳ ಕೊಡುಗೆ ಮೌಲ್ಯಯುತ: ಅಮೆರಿಕ

ಅಮೆರಿಕ ಸರ್ಕಾರದ ಹಂಗಾಮಿ ವಕ್ತಾರ ಮಾರ್ಕ್‌ ಟೋನರ್‌, ‘ಅಮೆರಿಕ ಹಾಗೂ ಭಾರತ ಜತೆಗಿನ ವ್ಯವಹಾರ  ಮುಂದಿನ ದಿನಗಳಲ್ಲೂ ಗಟ್ಟಿಯಾಗಿರಲಿದೆ’ ಎಂದು ತಿಳಿಸಿದ್ದಾರೆ.

26 Apr, 2017

ಸಾವಿನ ದೃಶ್ಯಾವಳಿ
ಹತ್ಯೆಯ ದೃಶ್ಯ ಫೇಸ್‌ಬುಕ್‌ನಲ್ಲಿ ನೇರಪ್ರಸಾರ

ಫುಕೆಟ್‌ನ ವ್ಯಕ್ತಿಯೊಬ್ಬ ಮಗುವನ್ನು ಕೊಂದು, ತಾನೂ ಆತ್ಮಹತ್ಯೆ ಮಾಡಿಕೊಂಡಿರುವ  ದೃಶ್ಯಾವಳಿ ಫೇಸ್‌ಬುಕ್‌ನಲ್ಲಿ ನೇರಪ್ರಸಾರ ಆಗಿದೆ. ಮೊಬೈಲ್‌ ಫೋನನ್ನು ಆತ ಗೋಡೆಗೆ ಅಂಟಿಸಿದ್ದರಿಂದ ಈ ಸಾವಿನ ದೃಶ್ಯಾವಳಿ...

26 Apr, 2017

ಬ್ಯುಸಿನೆಸ್ ಕ್ಲಾಸ್
₹2 ಲಕ್ಷದ ಟಿಕೆಟ್‌ಗೆ ₹1 ಕೋಟಿಯ ದಾವೆ

ಕಳೆದ ಸೆಪ್ಟೆಂಬರ್‌ನಲ್ಲಿ ನ್ಯೂಜೆರ್ಸಿಯ ನೆವಾರ್ಕ್‌ನಿಂದ ಲಂಡನ್‌ಗೆ ಹೊರಟಿದ್ದ ಕರೆನ್ ಶಿಬೊಲೆಥ್ ಎಂಬುವರು 3146 ಅಮೆರಿಕನ್ ಡಾಲರ್ (ಸುಮಾರು ₹2.10 ಲಕ್ಷ) ನೀಡಿ ಟಿಕೆಟ್ ಪಡೆದಿದ್ದರು. ...

26 Apr, 2017

ಚೀನಾ ಸರ್ಕಾರ ಆದೇಶ
ಮುಸ್ಲಿಂ ಹೆಸರಿಟ್ಟರೆ ಪರವಾನಗಿ ರದ್ದು...!

ಮುಸಲ್ಮಾನರಲ್ಲಿ ಸಾಮಾನ್ಯವಾಗಿರುವ ‘ಇಸ್ಲಾಂ’, ‘ಕುರಾನ್‌’, ‘ಮೆಕ್ಕಾ’, ‘ಜಿಹಾದ್‌’, ‘ಇಮಾಮ್‌’, ‘ಸದ್ದಾಂ’,‘ಹಾಜಿ’, ‘ಮದೀನಾ’, ಸೇರಿದಂತೆ ಹಲವು ಹೆಸರುಗಳ ಮೇಲೆ ನಿಷೇಧ ಹೇರಿರುವ ಬಗ್ಗೆ  ‘ರೇಡಿಯೊ ಫ್ರೀ...

26 Apr, 2017