ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಾಧ್ಯಮ ಪ್ರತಿನಿಧಿಗಳೊಂದಿಗೆ ಸಹಮಿಲನ’

Last Updated 13 ಏಪ್ರಿಲ್ 2017, 4:19 IST
ಅಕ್ಷರ ಗಾತ್ರ

ಕುಂದಾಪುರ: ‘ಎಲ್ಲ ಧರ್ಮಗಳ ಸಂ ದೇಶ ಮತ್ತು ಗುರಿ ಶಾಂತಿ ಸ್ಥಾಪನೆಯೇ ಆಗಿದೆ. ಇಗರ್ಜಿಗಳು ಈ ಮಹತ್ಕಾರ್ಯ ವನ್ನು ಪ್ರಚುರ ಪಡಿಸುವ ಸಾಮಾಜಿಕ ಸಂಪರ್ಕವಾಗಿ ಮಾಧ್ಯಮ ಕ್ಷೇತ್ರ ಕಾರ್ಯಾಚರಿಸುತ್ತಿದೆ’ ಎಂದು ಕುಂದಾ ಪುರ ರೋಮನ್‌ ಕ್ರೈಸ್ತ ವಲಯ ಧರ್ಮ ಗುರು ಅನಿಲ್‌ ಡಿಸೋಜ ಹೇಳಿದರು.

ಇಲ್ಲಿನ ರೋಜರಿ ಮಾತಾ ಇಗ ರ್ಜಿಯ ಸಾಮಾಜಿಕ ಸಂಪರ್ಕ ಮಾಧ್ಯ ಮವು ಆಯೋಜಿಸಿದ್ದ ‘ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಸಹಮಿಲನ’ ಕಾರ್ಯ ಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮುಖ್ಯ ಅಭ್ಯಾಗತರಾಗಿ ಮಾತನಾ ಡಿದ ಉಜ್ವಾಡ್, ‘ಪತ್ರಿಕಾ ಸಂಪಾದಕ ಹಾಗೂ ಧರ್ಮಗುರು ಚೇತನ್ ಲೋಬೊ ಅವರು ವಾಸ್ತವದ ನೆಲೆಗಟ್ಟಿ ನಲ್ಲಿ ಸಮರ್ಥವಾದ ಜನಾಭಿಪ್ರಾಯ ರೂಪಿಸುವುದು ಮಾಧ್ಯಮಗಳ ಬಲು ದೊಡ್ಡ ಜವಾಬ್ದಾರಿ.

ಮಾಧ್ಯಮಗಳ ಮಾಹಿತಿ ಆಧಾರದಲ್ಲಿಯೇ  ನಮಗೆ ಸಾವಿರಾರು ಮೈಲಿಗಳ ದೂರದಲ್ಲಿನ ಘಟನೆ ಮತ್ತು ವ್ಯಕ್ತಿಗಳ ಸಾಚಾ ಅಥವಾ ನೀಚತನಗಳ ಅರಿವಾಗುತ್ತದೆ. ಆದರೆ ಇಂದು ಬಹುತೇಕ ಮಾಧ್ಯಮಗಳು ಕೆಲವು ಪೂರ್ವಗ್ರಹಯುಕ್ತ ಪ್ರಭಾವ ಗಳಿಗೆ ಒಳಗಾಗುತ್ತಿರುವುದು  ಪ್ರಜಾಪ್ರ ಭುತ್ವದ ದುರಂತ’ ಎಂದು ವಿಶಾದ ವ್ಯಕ್ತಪಡಿಸಿದರು.

ಪತ್ರಕರ್ತರಾದ ಯು.ಎಸ್.ಶೆಣೈ, ಅಂ ದೂಕಾ ಎಸ್‌., ಕೆ.ಜಿ ವೈದ್ಯ ಮಾತನಾ ಡಿದರು. ಇಗರ್ಜಿಯ ಪಾಲನಾ ಮಂಡಳಿ ಕಾರ್ಯದರ್ಶಿ ಸೆಲ್ಸಿಯಾನ ಡಿಸೋಜಾ, ಸಹಾಯಕ ಧರ್ಮಗುರು ಜರಾಲ್ಡ್ ಸಂದೀಪ್ ಡಿಮೆಲ್ಲೊ ಇದ್ದರು.

ಸಾರ್ವಜನಿಕ ಸಂಪರ್ಕ ಮಾಧ್ಯಮದ ಸಂಚಾಲಕ ಬರ್ನಾಡ್‌ ಡಿಕೋಸ್ತಾ ಸ್ವಾಗ ತಿಸಿದರು, ವಿನಯ ಡಿಕೋಸ್ತಾ ನಿರೂಪಿ ಸಿದರು, ಸಂಚಾಲಕ ಸದಸ್ಯ ವಿವಿಯನ್ ಕ್ರಾಸ್ಟೊ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT