ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೈಂದೂರು ತಾಲ್ಲೂಕಿಗೆ ಸೇರ್ಪಡೆ ಬೇಡ: ಆಗ್ರಹ

Last Updated 13 ಏಪ್ರಿಲ್ 2017, 4:20 IST
ಅಕ್ಷರ ಗಾತ್ರ

ಗಂಗೊಳ್ಳಿ (ಬೈಂದೂರು):  ಅಸ್ತಿತ್ವಕ್ಕೆ ಬರ ಲಿರುವ ಬೈಂದೂರು ತಾಲ್ಲೂಕಿಗೆ ಗಂಗೊ ಳ್ಳಿಯನ್ನು ಸೇರಿಸದೆ ಯಥಾಸ್ಥಿತಿ ಕಾಯ್ದು ಕೊಳ್ಳಬೇಕು ಎಂದು ಬುಧವಾರ ನಡೆದ ನಾಗರಿಕರ ಪ್ರತಿಭಟನೆಯಲ್ಲಿ ಆಗ್ರಹಿಸಲಾಯಿತು.

ನಾಗರಿಕ ಹೋರಾಟ ಸಮಿತಿ ನೇತೃತ್ವ ದಲ್ಲಿ ಗ್ರಾಮ ಪಂಚಾಯಿತಿ ಎದುರು ನಡೆದ ಧರಣಿಯನ್ನು ಉದ್ದೇಶಿಸಿ ಮಾತ ನಾಡಿದ ಮಾಜಿ ಮಂಡಲ ಪ್ರಧಾನ ಬಿ. ಸದಾನಂದ ಶೆಣೈ, ‘ಗಂಗೊಳ್ಳಿಗೆ ಕುಂದಾ ಪುರದೊಂದಿಗೆ ದೀರ್ಘಕಾಲದ ಭಾವ ನಾತ್ಮಕ ಸಂಬಂಧವಿದೆ.

ಹಲವು ವಿಚಾರ ಗಳಲ್ಲಿ ಅದು ಕುಂದಾಪುರವನ್ನು ಅವಲಂಬಿಸಿದೆ. ಎರಡರ ನಡುವೆ ಉತ್ತಮ ಸಾರಿಗೆ ಸಂಪರ್ಕವಿದೆ. ಎರಡನ್ನು ಬೇರ್ಪ ಡಿಸುವ ನದಿಗೆ ಸೇತುವೆಯಾದರೆ ಅಂತರ ನಿವಾರಣೆಯಾಗಿ ಒಂದೇ ಎನಿಸಲಿವೆ.

ನೂತನ ತಾಲ್ಲೂಕಿಗೆ ಸೇರುವುದರಿಂದ ಗಂಗೊಳ್ಳಿಯ ಜನರಿಗೆ ತುಂಬ ಅನನು ಕೂಲವಾಗುತ್ತದೆ. ಜನರ ವಿರೋಧ ಲೆಕ್ಕಿ ಸದೆ ಆಡಳಿತ ಈ ವಿಚಾರದಲ್ಲಿ ಮುಂದು ವರಿದರೆ ಪ್ರಬಲ ವಿರೋಧ ಎದುರಿಸ ಬೇಕಾಗುತ್ತದೆ’ ಎಂದರು.

ತಾಲ್ಲೂಕು ಪಂಚಾಯಿತಿ ಸದಸ್ಯ ಸುರೇಂದ್ರ ಖಾರ್ವಿ, ಜಮಾತ್ ಅಧ್ಯಕ್ಷ ಜಿ. ಮಹಮದ್ ರಫೀಕ್, ಹಿಂಜಾವೇ ಉಡುಪಿ ಜಿಲ್ಲಾ ಸಹಸಂಚಾಲಕ ಟಿ. ವಾಸುದೇವ ದೇವಾಡಿಗ, ಗ್ರಾಮ ಪಂಚಾಯಿತಿ ಸದಸ್ಯ ಮುಜಾಹಿದ್ ನಾಕುದಾ, ಮಾಜಿ ಸದಸ್ಯ ಉಮಾನಾಥ ದೇವಾಡಿಗ, ನ್ಯಾಯಾಲಯದ ನಿವೃತ್ತ ಶಿರಸ್ತೆದಾರ್ ಜಿ. ಭಾಸ್ಕರ ಕಲೈಕಾರ್, ಚರ್ಚ್ ಪಾಲನಾ ಮಂಡಳಿಯ ಸದಸ್ಯೆ ಪ್ರೀತಿ ಫೆರ್ನಾಂಡಿಸ್, ರೋಟರಿ ಅಧ್ಯಕ್ಷ ಎಂ. ಜಿ. ರಾಘವೇಂದ್ರ ಭಂಡಾರ್ಕಾರ್ ಈ ವಿಚಾರದಲ್ಲಿ ಜನಪ್ರತಿನಿಧಿಗಳ ಮೂಲಕ ಸರ್ಕಾರದ ಮೇಲೆ ಒತ್ತಡ ತರಬೇಕು ಎಂದರು.

ಗ್ರಾಮ ಪಂಚಾಯಿತಿ ಆಡಳಿತಾಧಿ ಕಾರಿ ಸೀತಾರಾಮ ಶೆಟ್ಟಿ ಅವರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾ ಯಿತು. ಸಮಿತಿ ಸಂಚಾಲಕ ಬಿ. ರಾಘ ವೇಂದ್ರ ಪೈ ಸ್ವಾಗತಿಸಿ, ಗ್ರಾಮ ಪಂಚಾ ಯಿತಿ ಸದಸ್ಯ ಲಕ್ಷ್ಮೀಕಾಂತ ಮಡಿವಾಳ ವಂದಿಸಿದರು. ಸಮಿತಿ ಅಧ್ಯಕ್ಷ ಎಚ್. ಎಸ್. ಚಿಕ್ಕಯ್ಯ ಪೂಜಾರಿ, ಅಭಿವೃದ್ಧಿ ಅಧಿಕಾರಿ ಮಾಧವ, ಸದಸ್ಯರು, ಗ್ರಾಮ ಕರಣಿಕ ರಾಘವೇಂದ್ರ ದೇವಾಡಿಗ, ಸಂಘಟನೆಗಳ ಪ್ರಮುಖರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT