ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಡಳಿತ–ವಿರೋಧ ಪಕ್ಷದವರ ಮಧ್ಯೆ ವಾಗ್ವಾದ

ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಧ್ವನಿಸಿದ ಹಲ್ಲೆ ಪ್ರಕರಣ
Last Updated 13 ಏಪ್ರಿಲ್ 2017, 4:23 IST
ಅಕ್ಷರ ಗಾತ್ರ

ಉಡುಪಿ: ಅಕ್ರಮ ಮರಳುಗಾರಿಕೆ ಹಾಗೂ ಜಿಲ್ಲಾಧಿಕಾರಿ ಮೇಲೆ ದಂಧೆ ಕೋರರು ಹಲ್ಲೆ ನಡೆಸಿದ ವಿಷಯದ ಬಗ್ಗೆ ಬುಧವಾರ ನಡೆದ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಯಿತು. ಆಡಳಿತ ಮತ್ತು ವಿರೋಧ ಪಕ್ಷದವರು ಪರಸ್ಪರ ಆರೋಪ ಪ್ರತ್ಯಾ ರೋಪ ಮಾಡಿದ್ದು ವಾಗ್ವಾದಕ್ಕೂ ಕಾರಣವಾಯಿತು.

ವಿರೋಧ ಪಕ್ಷದ ಸದಸ್ಯ ಜನಾರ್ದನ ತೋನ್ಸೆ ಅವರು ಜಿಲ್ಲಾಧಿಕಾರಿ ಅವರ ಮೇಲೆ ನಡೆದ ಹಲ್ಲೆ ವಿಷಯವನ್ನು ಪ್ರಸ್ತಾ ಪಿಸಿದರು. ‘ಜಿಲ್ಲಾಧಿಕಾರಿ ಅವರೇ ದಾಳಿ ನಡೆಸಬೇಕಾದ ಪರಿಸ್ಥಿತಿ ಬರಲು ಕಾರಣ ಏನು ಎಂದು ಅವರು ಪ್ರಶ್ನಿಸಿದರು.

ಸಚಿವರು ಸಹ ಅಕ್ರಮ ಮರಳುಗಾರಿಕೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ ಉದಾ ಹರಣೆ ಇದೆ. ಆದರೆ, ಆ ವಿಷಯ ಮೊದಲೇ ಸೋರಿಕೆಯಾಗಿ ಆರೋಪಿ ಗಳು ತಪ್ಪಿಸಿಕೊಂಡಿದ್ದಾರೆ’ ಎಂದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಉಪಾ ಧ್ಯಕ್ಷೆ ಶೀಲಾ ಕೆ ಶೆಟ್ಟಿ, ಸದಸ್ಯ ಪ್ರತಾಪ್‌ ಹೆಗ್ಡೆ ಅವರು, ‘ಮಹಿಳಾ ಅಧಿಕಾರಿಯೊಬ್ಬರು ಅಕ್ರಮದ ವಿರುದ್ಧ ಕ್ರಮ ಕೈಗೊಳ್ಳುವ ದಿಟ್ಟತನ ಪ್ರದರ್ಶಿಸಿದಕ್ಕೆ ಮೆಚ್ಚುಗೆ ವ್ಯಕ್ತಪ ಡಿಸಬೇಕು. ಅದನ್ನು ಬಿಟ್ಟು ಅವರು ದಾಳಿ ಮಾಡಲು ಹೋಗಿದ್ದನ್ನು ಪ್ರಶ್ನಿಸುವುದು ಸರಿಯಲ್ಲ. ಅಲ್ಲದೆ ಸರ್ಕಾರ ಸಮರ್ಪಕ ವಾದ ಮರಳು ನೀತಿ ರೂಪಿಸದೆ ಇರು ವುದೇ ಇಷ್ಟೆಲ್ಲಾ ಸಮಸ್ಯೆಗಳಿಗೆ ಕಾರಣ. ಸಚಿವರು ನೀಡಿದ ಮಾಹಿತಿಯನ್ನು ಸೋರಿಕೆ ಮಾಡಿದ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಲಾಗಿದೆಯೇ’ ಎಂದು ಪ್ರಶ್ನಿಸಿದರು.

‘ಡಿಸಿ ಅವರ ಕ್ರಮವನ್ನು ನಾವು ಸಹ ಶ್ಲಾಘಿಸಿದ್ದೇವೆ. ಆದರೆ, ವಿವಿಧ ಇಲಾಖೆ ಗಳ ಅಧಿಕಾರಿಗಳೇ ಈ ದಂಧೆಯಲ್ಲಿ ಶಾಮೀಲಾಗಿರುವುದರಿಂದ ಇಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ ಯಾವುದೇ ಸರ್ಕಾರ ಬಂದರೂ ಇದನ್ನು ಬದಲಿಸಲಾಗದು’ ಎಂದು ಜನಾರ್ದನ್‌ ಸ್ಪಷ್ಟನೆ ನೀಡಿದರು.

ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಉದಯ್ ಎಸ್ ಕೋಟ್ಯಾನ್ ಮಾತನಾಡಿ, ‘ಅಧಿಕಾರಿಗಳ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂ ಧಿಸಿದಂತೆ ಎಷ್ಟು ಮಂದಿ ಆರೋಪಿಗ ಳನ್ನು ಬಂಧಿಸಲಾಗಿದೆ. ಪ್ರಮುಖ ಆರೋ ಪಿಗಳ ಬಂಧನವಾಗಿದೆಯೇ’ ಎಂದು ಪ್ರಶ್ನಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಎನ್‌. ವಿಷ್ಣು ವರ್ಧನ ಮಾತನಾಡಿ, ‘ಈವರೆಗೆ ಒಟ್ಟು 20 ಮಂದಿ ಆರೋಪಿಗಳನ್ನು ಬಂಧಿಸ ಲಾಗಿದ್ದು ಇವರಲ್ಲಿ 9 ಜನ ಮಾತ್ರ ಹೊರ ರಾಜ್ಯದವರು. 5 ಮಂದಿಯನ್ನು ಗಡಿ ಪಾರು ಮಾಡಲಾಗಿದೆ.

ಆರೋಪಿಗಳನ್ನು ಬಂಧಿಸುವ ಮುನ್ನ ಅವರು ಅಂದು ಆ ಸ್ಥಳದಲ್ಲಿದ್ದ ವಿಷಯವನ್ನು ತಂತ್ರಜ್ಞಾನದ ಸಹಾಯದಿಂದ ಖಚಿತಪಡಿಸಿಕೊಳ್ಳ ಲಾಗುತ್ತಿದೆ. ಎಲ್ಲ ಹಲ್ಲೆಕೋರರನ್ನು ಬಂಧಿಸಲಾಗುವುದು. ಯಾವುದೇ ಒತ್ತ ಡಕ್ಕೂ ಒಳಗಾಗುವ ಪ್ರಶ್ನೆಯೇ ಇಲ್ಲ’ ಎಂದರು.

‘ಮರಳು ಕಾರ್ಯಪಡೆ ಸಭೆಯ ನಂತರ ಅಕ್ರಮಕ್ಕೆ ಕಡಿವಾಣ ಹಾಕಲು ಹಲವು ಕ್ರಮಗಳನ್ನು ತೆಗೆದುಕೊಳ್ಳಲಾ ಗಿದೆ. ಮುಖ್ಯ ಕಾನ್‌ಸ್ಟೆಬಲ್ ಅಥವಾ ಎಎಸ್‌ಐ ಅವರನ್ನು ಒಳಗೊಂಡ 5 ಸಂ ಚಾರಿ ತಂಡಗಳನ್ನು ರಚನೆ ಮಾಡಲಾಗಿದೆ.

ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಸಿಬ್ಬಂದಿ ತಂಡವೊಂದನ್ನು ಕುಂದಾಪುರ ದಲ್ಲಿ ಇರಿಸಲಾಗಿದೆ. ಯಾವುದೇ ಸಂದ ರ್ಭದಲ್ಲಿ ಮಾಹಿತಿ ಬಂದರೂ ಅವರು ಸಹಾಯಕ್ಕೆ ಬರಲಿದ್ದಾರೆ. ನನಗೂ ಸಹ ಯಾವುದೇ ಸಮಯದಲ್ಲಿ ಕರೆ ಮಾಡಿ ಮಾಹಿತಿ ನೀಡಬಹುದು’ ಎಂದರು.

ಕೆಲ ಪೊಲೀಸ್‌ ಸಿಬ್ಬಂದಿ ಸಹ ಅಕ್ರಮ ಮರಳುಗಾರಿಕೆ ನಡೆಸುತ್ತಿರುವ ವರ ಜೊತೆ ಶಾಮೀಲಾಗಿದ್ದಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ವಿಷ್ಣುವ ರ್ಧನ, ‘ಯಾರಾದರೂ ಅಕ್ರಮದಲ್ಲಿ ಭಾಗಿಯಾಗಿದ್ದರೆ ಅದರ ಬಗ್ಗೆ ಲಿಖಿತ ದೂರು ನೀಡಿ. ತನಿಖೆ ನಡೆಸಿ ಕ್ರಮ ಕೈಗೊಳ್ಳುತ್ತೇನೆ’ ಎಂದರು.

ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಮಾತನಾಡಿ, ‘ಕರಾವಳಿ ನಿಯಂ ತ್ರಣ ವಲಯ ಮತ್ತು ನಿಯಂತ್ರಣೇತರ ವಲಯದಲ್ಲಿ ಮರಳುಗಾರಿಕೆ ಆರಂಭಿ ಸಲು ಕ್ರಮ ಕೈಗೊಳ್ಳಲಾಗಿದೆ. ಮರಳು ಬ್ಲಾಕ್‌ಗಳನ್ನು ಗುರುತಿಸಿ ಅಲ್ಲಿರುವ ಮರ ಳಿನ ಲಭ್ಯತೆ ಬಗ್ಗೆ ರಾಷ್ಟ್ರೀಯ ತಾಂತ್ರಿಕ ಶಿಕ್ಷಣ ಸಂಸ್ಥೆಯ ತಜ್ಞರಿಂದ ವರದಿ ಕೇಳ ಲಾಗಿದೆ. ವಶಪಡಿಸಿಕೊಂಡಿರುವ ಸುಮಾರು 90 ಲೋಡ್‌ ಮರಳನ್ನು ಕುಂದಾಪುರದಲ್ಲಿ ಸಂಗ್ರಹಿಸಲಾಗಿದ್ದು, ಸಾರ್ವಜನಿಕರು ಖರೀದಿಸಬಹುದು’ ಎಂದರು.

‘ಸರ್ಕಾರಿ ಕಾಮಗಾರಿಗಳಿಗೆ ದಕ್ಷಿಣ ಕನ್ನಡ ಜಿಲ್ಲೆಯಿಂದ ಮರಳು ಪಡೆಯಲು ಅವಕಾಶ ಇದ್ದು, ಅಲ್ಲಿನ ಜಿಲ್ಲಾಧಿಕಾರಿ ಅವರೂ ಸಹ ಇದಕ್ಕೆ ಒಪ್ಪಿಗೆ ಸೂಚಿಸಿ ದ್ದಾರೆ. ಮರಳಿಗೆ ಪರ್ಯಾಯವಾಗಿ ಎಂ– ಸ್ಯಾಂಡ್ ಬಳಕೆಗೂ ಪ್ರೋತ್ಸಾಹ ನೀಡಲು ಕ್ರಮ ಕೈಗೊಳ್ಳಲಾಗುವುದು.

ಕಾರ್ಕಳ ತಾಲ್ಲೂಕಿನಲ್ಲಿ ಮೂರು ಎಂ– ಸ್ಯಾಂಡ್ ಘಟಕ ಆರಂಭಿಸಲು ಅನುಮತಿ ನೀಡ ಲಾಗಿದ್ದು, ಆದಷ್ಟು ಬೇಗ ಅಲ್ಲಿ ಉತ್ಪಾ ದನೆ ಆರಂಭವಾಗುವಂತೆ ನೋಡಿಕೊಳ್ಳ ಲಾಗುವುದು’ ಎಂದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷ ದಿನಕರ ಬಾಬು ಇದ್ದರು.

*
ಜಿಲ್ಲಾಧಿಕಾರಿ ಮೇಲೆ ಹಲ್ಲೆ ಮಾಡಿದ ಪ್ರಕರಣದ ಆರೋಪಿಗಳ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸುವ ಬಗ್ಗೆ ಯೋಚಿಸಲಾಗುತ್ತಿದೆ.
-ಎನ್‌. ವಿಷ್ಣುವರ್ಧನ,
ಹೆಚ್ಚುವರಿ ಎಸ್ಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT