ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇವು ವಿತರಿಸಲು ಕ್ರಮ ಕೈಗೊಳ್ಳಿ

Last Updated 13 ಏಪ್ರಿಲ್ 2017, 6:22 IST
ಅಕ್ಷರ ಗಾತ್ರ

ಪಾಂಡವಪುರ: ಬರಗಾಲದಿಂದಾಗಿ ಜಾನುವಾರುಗಳಿಗಾಗಿ ಸಂಗ್ರಹಿಸಿರುವ ಮೇವನ್ನು ಇದುವರೆಗೂ ವಿತರಣೆ ಮಾಡಿಲ್ಲ. ಕೂಡಲೇ ವಿತರಿಸುವ ಕ್ರಮ ಕೈಗೊಳ್ಳಿ ಎಂದು ಸದಸ್ಯರಾದ ನಿಂಗೇ ಗೌಡ ಮತ್ತು ಅಲ್ಪಹಳ್ಳಿ ಗೋವಿಂದಯ್ಯ ಅವರು ತಾಲ್ಲೂಕು ಪಂಚಾಯಿತಿ ಸಾಮಾನ್ಯಸಭೆಯಲ್ಲಿ ಒತ್ತಾಯಿಸಿದರು. 

ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಅಧ್ಯಕ್ಷೆ ರಾಧಮ್ಮ ಕೆಂಪೇಗೌಡ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಾಮಾನ್ಯಸಭೆಯಲ್ಲಿ ಮಾತನಾಡಿದ ಸದಸ್ಯರಾದ ನಿಂಗೇಗೌಡ ಮತ್ತು ಅಲ್ಪಹಳ್ಳಿ ಗೋವಿಂದಯ್ಯ, ಬರಗಾಲದಿಂದಾಗಿ ಜಾನುವಾರುಗಳಿಗೆ ಅಧಿಕಾರಿಗಳು ಮೇವು ಸಂಗ್ರಹಣೆ ಮಾಡಿರುವುದು ಸ್ವಾಗತಾರ್ಹ.

ಆದರೆ, ಇದುವರೆಗೂ ಜಾನುವಾರು ಗಳಿಗೆ ಮೇವು ವಿತರಣೆ ಮಾಡದಿರು ವುದು ಸರಿಯಲ್ಲ. ಬರಗಾಲ ಮತ್ತು ಬೇಸಿಗೆಯಿಂದಾಗಿ ಜಾನುವಾರುಗಳು ಕೂಡ ತತ್ತರಿಸಿ ಹೋಗಿವೆ. ಕೂಡಲೇ ಜಾನುವಾರುಗಳಿಗೆ ಮೇವು ವಿತರಿಸಲು ಕ್ರಮವಹಿಸಿ ಎಂದು ಆಗ್ರಹಿಸಿದರು.

ತಾಲ್ಲೂಕಿನ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಜಾನುವಾರು ಗಳಿಗಾಗಿ 250 ನೀರಿನ ತೊಟ್ಟಿಗಳನ್ನು ನಿರ್ಮಿಸಲಾಗಿದೆ. ಕೆಲವು ತೊಟ್ಟಿಗಳಲ್ಲಿ ಕಸಕಡ್ಡಿ ತುಂಬಿಕೊಂಡು ಬಳಕೆ ಯಾಗುತ್ತಿಲ್ಲ ಎಂದು ಆರೋಪಿಸಿದರು. 

ಇದಕ್ಕೆ ಪ್ರತಿಕ್ರಿಯಿಸಿದ ಇಒ ಮಂಜುನಾಥಸ್ವಾಮಿ, ಈ ಸಂಬಂಧ ತಹಶೀಲ್ದಾರ್ ಅವರಿಗೆ ಪತ್ರ ಬರೆದು ಕ್ರಮವಹಿಸಲಾಗುವುದು. ಅಲ್ಲದೆ ನೀರಿನ ತೊಟ್ಟಿಗಳ ಬಳಕೆಗೂ ಕ್ರಮ ಕೈಗೊಳ್ಳ ಲಾಗುವುದು ಎಂದರು.

2016–17ನೇ ಸಾಲಿನ ಇಲಾಖೆವಾರು ಪ್ರಗತಿ ಪರಿಶೀಲನೆ ನಡೆಯಿತು. ತಾಲ್ಲೂಕಿನ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಕುಡಿಯುವ ನೀರಿನ ಸಂಬಂಧ ಕೈಗೊಂಡಿರುವ ಕ್ರಮಗಳ ಬಗ್ಗೆ ಚರ್ಚೆ ನಡೆಯಿತು. ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಕಾರ್ಯಕ್ರಮವನ್ನು ಪರಿಣಾಮ ಕಾರಿಯಾಗಿ ಅನುಷ್ಠಾನಗೊಳಿಸಲು ನಿರ್ಧರಿಸಲಾಯಿತು.

ತಾಲ್ಲೂಕು ಪಂಚಾಯಿತಿ ಸ್ಥಿರ ಸ್ವತ್ತಾದ ಅಂಗಡಿ ಮಳಿಗೆಳನ್ನು ಬಾಡಿಗೆ ಪಡೆದಿರುವ ಎಚ್.ಇ.ಸುರೇಶ್‌ ಅವರು ₹ 69,630 ಮತ್ತು ಬಿ.ಸಿ.ನಂಜಪ್ಪ ಅವರು ₹46,530 ಬಾಡಿಗೆ ಪಾವತಿಸಿಲ್ಲ. ಕೂಡಲೇ ಅವರಿಗೆ ನೋಟಿಸ್‌ ನೀಡಿ ಬಾಡಿಗೆ ವಸೂಲಿ ಮಾಡುವ ಕ್ರಮ ವಹಿಸಲು ಎಂದು ಸಭೆ ತೀರ್ಮಾನಿಸಿತು.
ಆಡಳಿತ ಮತ್ತು ಅಭಿವೃದ್ಧಿ ವಿಷಯಗಳ ಬಗ್ಗೆ ಅಧ್ಯಯನ ನಡೆಸಲು ಕೇರಳ ಮತ್ತು ತಮಿಳುನಾಡಿಗೆ ಸದಸ್ಯರು ಪ್ರವಾಸಕೈಗೊಳ್ಳಲು ನಿರ್ಧರಿಸಲಾಯಿತು.
ಉಪಾಧ್ಯಕ್ಷೆ ಲಕ್ಷ್ಮಮ್ಮ ರಂಗಸ್ವಾಮಿ, ಸ್ಥಾಯಿ ಸಮಿತಿ ಅಧ್ಯಕ್ಷ ಪುಟ್ಟೇಗೌಡ, ಇಒ ಮಂಜುನಾಥಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT