ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿರಾಜಪೇಟೆ: ಬಾಂಗ್ಲಾ ವಲಸಿಗರ ವಿರುದ್ಧ ಕ್ರಮಕ್ಕೆ ಒತ್ತಾಯ

Last Updated 13 ಏಪ್ರಿಲ್ 2017, 6:24 IST
ಅಕ್ಷರ ಗಾತ್ರ

ವಿರಾಜಪೇಟೆ: ಜಿಲ್ಲೆಯಲ್ಲಿ ನೆಲೆಸಿರುವ ಬಾಂಗ್ಲಾ ವಲಸಿಗರ ಸೂಕ್ತ ಜರುಗಿಸ ಬೇಕು ಎಂದು ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿದರು.ಪಟ್ಟಣದ ಗಡಿಯಾರ ಕಂಬದಿಂದ ತಾಲ್ಲೂಕು ಕಚೇರಿವರೆಗೆ ಮೆರವಣಿಗೆ ನಡೆಸಿದ ಅವರು, ತಾಲ್ಲೂಕು ಕಚೇರಿ ಎದುರು ಸಾಂಕೇತಿಕವಾಗಿ ಧರಣಿ ನಡೆಸಿದರು.

ಬಾಂಗ್ಲಾ ವಲಸಿಗರು  ಜಿಲ್ಲೆಯಲ್ಲಿ ಅಕ್ರಮವಾಗಿ ನೆಲೆಸಿದ್ದಾರೆ. ಜಿಲ್ಲಾಡಳಿತದ ಗಮನಸೆಳೆದರು ಕ್ರಮ ಜರುಗಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಕ್ರಮ ವಲಸಿಗರ ಕುರಿತು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಪ್ರತಿಭಟನಕಾರರು ಈ ಸಂದರ್ಭ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು.

ಕೂಲಿ ಕಾರ್ಮಿಕರಾಗಿ ಜಿಲ್ಲೆಗೆ ಬಂದಿ ರುವ ಇವರ ದಾಖಲಾತಿ ಪರಿಶೀಲಿಸ ಬೇಕು; ಭಾಗಚಿತ್ರಗಳನ್ನು ಸಂಗ್ರಹಿಸ ಬೇಕು ಕೆಲಸ ಮಾಡುವ ತೋಟದ ಮಾಲೀಕರ  ವಿಳಾಸ, ಭಾವಚಿತ್ರ ಸಂಗ್ರ ಹಿಸಿ ಇಡಬೇಕಾಗಿದೆ ಎಂದು ಹೇಳಿದರು.

ಹಿಂದು ಜಾಗರಣಾ ವೇದಿಕೆಯ ತಾಲ್ಲೂಕು ಕಾರ್ಯದರ್ಶಿ ಎಂ.ಬಿ. ಚಂದ್ರನ್, ನಗರ ಅಧ್ಯಕ್ಷ ಸುಬ್ಬಯ್ಯ, ಸಂಚಾಲಕ ಆರ್.ಸುರೇಶ್, ಸಹ ಸಂಚಾಲಕ ಸುನೀಲ್‌, ವಿಭಾಗ ಪ್ರಧಾನ ಸಂಚಾಲಕ ಜೀವನ್, ಬಿಜೆಪಿಯ ಐನಮಡ ಜಪ್ಪು ಅಚ್ಚಪ್ಪ ಹಾಗೂ ವಿಎಚ್‌ಪಿ ನಗರ ಅಧ್ಯಕ್ಷ ಪೊನ್ನಪ್ಪ ರೈ,ಆರ್‌ಎಸ್‌ಎಸ್‌ನ ಸೀತಾರಾಂ ಭಟ್, ರಾಮದಾಸ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT