ಸಂತೇಮರಹಳ್ಳಿ

ಗೋಶಾಲೆ ಸ್ಥಗಿತ; ಜಾನುವಾರುಗಳಿಗೆ ಸಂಕಷ್ಟ

ಸಮೀಪದ ಮಂಗಲ ಗ್ರಾಮದ ಬಳಿಯ ಗೋಶಾಲೆ ಸ್ಥಗಿತಗೊಂಡಿದ್ದು ಈ ಭಾಗದ ಜಾನುವಾರುಗಳಿಗೆ ಕುಡಿಯುವ ನೀರು ಹಾಗೂ ಮೇವಿನ ಸಂಕಷ್ಟ ಎದುರಾಗಿದೆ.ಗೋಶಾಲೆಯ ಕೆಲವು ಜಾನುವಾರುಗಳಿಗೆ ಸಾಂಕ್ರಾಮಿಕ ರೋಗ ತಗುಲಿದ ಹಿನ್ನೆಲೆಯಲ್ಲಿ ತಾಲ್ಲೂಕು ಗೋಶಾಲೆಯನ್ನು ಸ್ಥಗಿತಗೊಳಿಸಿತ್ತು.

ಸಂತೇಮರಹಳ್ಳಿ: ಸಮೀಪದ ಮಂಗಲ ಗ್ರಾಮದ ಬಳಿಯ ಗೋಶಾಲೆ ಸ್ಥಗಿತಗೊಂಡಿದ್ದು ಈ ಭಾಗದ ಜಾನುವಾರುಗಳಿಗೆ ಕುಡಿಯುವ ನೀರು ಹಾಗೂ ಮೇವಿನ ಸಂಕಷ್ಟ ಎದುರಾಗಿದೆ.ಗೋಶಾಲೆಯ ಕೆಲವು ಜಾನುವಾರುಗಳಿಗೆ ಸಾಂಕ್ರಾಮಿಕ ರೋಗ ತಗುಲಿದ ಹಿನ್ನೆಲೆಯಲ್ಲಿ ತಾಲ್ಲೂಕು ಗೋಶಾಲೆಯನ್ನು ಸ್ಥಗಿತಗೊಳಿಸಿತ್ತು.

ಈಗ ಒಟ್ಟಾರೆ ಮೇವು ಕೊರತೆಯಿಂದ ಜಾನುವಾರುಗಳಿಗೆ ಕಷ್ಟವಾಗಿದೆ. ಸೋಂಕು ತಗುಲಿದ್ದ ರಾಸುಗಳಿಗೆ ಪಶುಪಾಲನಾ ಇಲಾಖೆ ಚಿಕಿತ್ಸೆ ನೀಡಿದೆ. ಇತರೆ ಜಾನುವಾರುಗಳಿಗೆ ಮುಂಜಾಗ್ರತೆ ಚಿಕಿತ್ಸೆ ನೀಡಲಾಗಿಲ್ಲ ಎಂದು ಹೇಳಿದರು.

ಸಾಂಕ್ರಾಮಿಕ ರೋಗ ನೆಪದಲ್ಲಿ ಗೋಶಾಲೆ ಸ್ಥಗಿತಗೊಳಿಸಲಾಗಿದೆ. ಸೋಂಕು ರಹಿತ ಜಾನುವಾರುಗಳಿಗೆ ಗೋಶಾಲೆ ಆರಂಭಿಸಬೇಕು ಎಂಬುದು ರೈತರ ಕೋರಿಕೆ.
ಮಂಗಲ, ಯಡಿಯೂರು, ಕರಡಿಮೋಳೆ, ಹುಲ್ಲೇಪುರ, ಮಹಾಂತಾಳಪುರ, ಭೊಗಾಪುರ, ಕಿರಗಸೂರು, ಯಲಕ್ಕೂರು, ಮಂಗಲ ಹೊಸೂರು, ಸಿಂಗನಪುರ ಗ್ರಾಮಗಳಿಂದ 2 ಸಾವಿರ ಜಾನುವಾರುಗಳಿಗೆ ಮೇವು, ನೀರು ದೊರಕುತ್ತಿತ್ತು.

ಒಣ ಹುಲ್ಲು, ಹೊಟ್ಟು ಹಾಗೂ ಜೋಳದಕಡ್ಡಿ 2 ತಿಂಗಳಿಗೆ ಆಗುವಷ್ಟು ಮೇವು ಮಾತ್ರ ಲಭ್ಯವಿದೆ. ಮಳೆ ಬಂದರೆ ಮೇವು ಹಾಳಾಗುತ್ತದೆ. ಕೂಡಲೇ ಮೇವುನ್ನು ಜಾನುವಾರುಗಳಿಗೆ ವಿತರಿಸಿ ಎಂಬುದು ರೈತರ ಮನವಿ.

Comments
ಈ ವಿಭಾಗದಿಂದ ಇನ್ನಷ್ಟು
ರಾಷ್ಟ್ರ ಮಟ್ಟದ ಪೈಪೋಟಿಗೆ ಸಿದ್ಧರಾಗಿ

ಕನಕಪುರ
ರಾಷ್ಟ್ರ ಮಟ್ಟದ ಪೈಪೋಟಿಗೆ ಸಿದ್ಧರಾಗಿ

21 Feb, 2018

ಭಾಲ್ಕಿ
ಸಮಸ್ಯೆಗಳ ನಡುವೆ ಉತ್ತಮ ಕಲಿಕೆ

ಶಿಶು ಮತ್ತು ಶಿಕ್ಷಕ ಸ್ನೇಹಿ ಯೋಜನೆಯಾದ ನಲಿ–ಕಲಿ ವಿಭಾಗದಲ್ಲಿ 1ರಿಂದ 3ನೇ ತರಗತಿವರೆಗೆ ಒಟ್ಟು 19 ವಿದ್ಯಾರ್ಥಿಗಳಿದ್ದು, ಒಟ್ಟು 5ನೇ ತರಗತಿವರೆಗೆ 36 ಮಕ್ಕಳಿದ್ದಾರೆ. ...

14 Feb, 2018

ದೇವನಹಳ್ಳಿ
‘ಸ್ವಾವಲಂಬಿ ಮಹಿಳೆಯರಿಂದ ಪ್ರಗತಿ’

ಪ್ರತಿಯೊಂದು ಕುಟುಂಬ ಸಮೃದ್ಧ ಜೀವನ ನಡೆಸಬೇಕು. ಸಂಕಷ್ಟ ಮುಕ್ತ ಸಮಾಜ ನಿರ್ಮಿಸಬೇಕು ಎಂಬ ಏಕೈಕ ಉದ್ದೇಶದಿಂದ ಆರಂಭಗೊಂಡ ಗ್ರಾಮಾ ಭಿವೃದ್ಧಿ ಯೋಜನೆ ನಿಂತ ನೀರಾಗದೇ ರಾಜ್ಯದಲ್ಲಿ...

14 Feb, 2018

ಮೈಸೂರು
ಸಂಚಾರ ಪೊಲೀಸರ ಯೋಗಾಭ್ಯಾಸ

ದೇಹದ ಸ್ನಾಯು ಸಡಿಲಗೊಳಿಸುವ ವ್ಯಾಯಾಮದಿಂದ ಆರಂಭಗೊಂಡ ಯೋಗಾಭ್ಯಾಸ, ಆಹ್ಲಾದಕಾರ ಹಾಗೂ ಉಲ್ಲಾಸಮಯ ವಾತಾವರಣದಲ್ಲಿ ಪೊಲೀಸರಿಗೆ ಚೈತನ್ಯ ತುಂಬಿತು.

13 Feb, 2018
ಶಿವರಾತ್ರಿ ಹಬ್ಬಕ್ಕೆ ಬಿಲ್ವಪತ್ರೆ ಸೇವೆ....

ಬಳ್ಳಾರಿ
ಶಿವರಾತ್ರಿ ಹಬ್ಬಕ್ಕೆ ಬಿಲ್ವಪತ್ರೆ ಸೇವೆ....

12 Feb, 2018