, ಇಂಟರ್ನೆಟ್ ಕೆಫೆಗೆ ನುಗ್ಗಿದ ಹಾವು: ವಿಡಿಯೊ ವೈರಲ್ | ಪ್ರಜಾವಾಣಿ
ಅಬ್ಬಾ... ಬಚಾವ್!

ಇಂಟರ್ನೆಟ್ ಕೆಫೆಗೆ ನುಗ್ಗಿದ ಹಾವು: ವಿಡಿಯೊ ವೈರಲ್

ಹಠಾತ್ ಮೈಮೇಲೆ ಹಾವು ನೆಗೆದಿದ್ದರಿಂದ ಬೆಚ್ಚಿಬಿದ್ದ ಯುವಕ ಅದರಿಂದ ತಪ್ಪಿಸಿಕೊಂಡ ವಿಡಿಯೊ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದೀಗ ಅಂತರ್ಜಾಲ ತಾಣಗಳಲ್ಲಿ ವೈರಲ್ ಆಗಿದೆ.

ಬ್ಯಾಂಕಾಕ್‌: ಇಂಟರ್ನೆಟ್ ಕೆಫೆಯಿಂದ ಹೊರ ತೆರಳುತ್ತಿದ್ದ ವೇಳೆ ಯುವಕನೊಬ್ಬನ ಮೇಲೆ ಏಕಾಏಕಿ ಹಾವೊಂದು ನೆಗೆದಿದ್ದಲ್ಲದೆ, ಆತನನ್ನು ಕಚ್ಚಲು ಯತ್ನಿಸಿದ ಘಟನೆ ಥಾಯ್ಲೆಂಡ್‌ನಲ್ಲಿ ಇತ್ತೀಚೆಗೆ ನಡೆದಿದೆ.

ಹಠಾತ್ ಮೈಮೇಲೆ ಹಾವು ನೆಗೆದಿದ್ದರಿಂದ ಬೆಚ್ಚಿಬಿದ್ದ ಯುವಕ ಅದರಿಂದ ತಪ್ಪಿಸಿಕೊಂಡ ವಿಡಿಯೊ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದೀಗ ಅಂತರ್ಜಾಲ ತಾಣಗಳಲ್ಲಿ ವೈರಲ್ ಆಗಿದೆ. ಹಾವನ್ನು ಕಂಡ ತಕ್ಷಣ ಗಾಬರಿಗೊಂಡ ಜನ ಅಲ್ಲಿಂದ ಪಾರಾಗಲು ಯತ್ನಿಸಿದ ದೃಶ್ಯವೂ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಅಂದಹಾಗೆ, ಈ ಘಟನೆ ಏಪ್ರಿಲ್ 8ರಂದು ಥಾಯ್ಲೆಂಡ್‌ನ ವಿಸೆಟ್‌ ಚೈ ಚಾನ್ ಜಿಲ್ಲೆಯ ಇಂಟರ್ನೆಟ್ ಕೆಫೆಯೊಂದರಲ್ಲಿ ನಡೆದಿತ್ತು.

Comments
ಈ ವಿಭಾಗದಿಂದ ಇನ್ನಷ್ಟು

ಶಿವ ದೇವಾಲಯ
20 ವರ್ಷದ ಬಳಿಕ ಪೂಜೆಗೆ ಅವಕಾಶ

ಪಾಕ್‌ನ ಅಬೊಟಾಬಾದ್‌ ಜಿಲ್ಲೆಯ ಶಿವ ದೇವಾಲಯದಲ್ಲಿ ಪೂಜೆ ನಡೆಸಲು ಹಿಂದೂಗಳಿಗೆ 20 ವರ್ಷಗಳ ಬಳಿಕ ಪೆಶಾವರ ಹೈಕೋರ್ಟ್ ಅವಕಾಶ ಕಲ್ಪಿಸಿದೆ.

25 Apr, 2017

ಬಲೂಚಿಸ್ತಾನ
ಬಾಂಬ್‌ ದಾಳಿ ಐದು ಸಾವು

ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದ ಸೇನೆಯ ಬೆಂಗಾವಲು ಪಡೆಯನ್ನು ಗುರಿಯಾಗಿರಿಸಿ ನಡೆದ ಬಾಂಬ್‌ ದಾಳಿಯಲ್ಲಿ ಅರೆಸೇನಾ ಪಡೆಯ ನಾಲ್ಕು ಮಂದಿ ಯೋಧರು ಸೇರಿದಂತೆ ಐದು ಮಂದಿ...

25 Apr, 2017

ವಿಶ್ವ ಆರೋಗ್ಯ ಸಂಸ್ಥೆ
ಮಲೇರಿಯಾ ಲಸಿಕೆ

ಮಲೇರಿಯಾ ರೋಗಕ್ಕೆ ಹೊಸದಾಗಿ ಲಸಿಕೆಯೊಂದನ್ನು ಕೀನ್ಯಾದಲ್ಲಿ ಕಂಡುಹಿಡಿಯಲಾಗಿದ್ದು, 2018 ರಿಂದ 2020ರ ಅವಧಿಯಲ್ಲಿ ಸುಮಾರು 3.60 ಲಕ್ಷ ಮಕ್ಕಳಿಗೆ ಲಸಿಕೆಯನ್ನು ಹಾಕಲಾಗುತ್ತದೆ ಎಂದು ವಿಶ್ವ...

25 Apr, 2017

ಯುದ್ಧ
ಅಮೆರಿಕ ನಿರ್ನಾಮ ಮಾಡುತ್ತೇವೆ: ಉತ್ತರ ಕೊರಿಯಾ ಅಧಿಕೃತ ಪತ್ರಿಕೆ ಎಚ್ಚರಿಕೆ

ಉತ್ತರ ಕೊರಿಯಾದ ಆಡಳಿತಾರೂಢ ಪಕ್ಷದ ಮುಖವಾಣಿ ‘ರೊಡೊಂಗ್ ಸಿನ್ಮನ್’ ಪತ್ರಿಕೆಯ ವೆಬ್‌ಸೈಟ್‌ನಲ್ಲಿ ಈ ಸಂಬಂಧ ಸರಣಿ ಸಂಪಾದಕೀಯ ಪ್ರಕಟಿಸಲಾಗಿದೆ.

25 Apr, 2017
ಬಾಹ್ಯಾಕಾಶದಲ್ಲಿ ವಾಸ: ದಾಖಲೆ ನಿರ್ಮಿಸಿದ ಪೆಗ್ಗಿ

577 ದಿನ
ಬಾಹ್ಯಾಕಾಶದಲ್ಲಿ ವಾಸ: ದಾಖಲೆ ನಿರ್ಮಿಸಿದ ಪೆಗ್ಗಿ

25 Apr, 2017