ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪುಲಿಮುರುಗನ್‌’

Last Updated 13 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಮಲಯಾಳಂನ ಸೂಪರ್‌ಸ್ಟಾರ್‌ ನಟ ಮೋಹನ್‌ ಲಾಲ್‌ ನಟನೆಯ ಆ್ಯಕ್ಷನ್‌ ತ್ರಿಲ್ಲರ್‌ ಸಿನಿಮಾ ‘ಪುಲಿಮುರುಗನ್‌’ ಸಿನಿಮಾ ‘ಅತಿದೊಡ್ಡ 3ಡಿ ಸ್ಕ್ರೀನಿಂಗ್‌’ ಸಿನಿಮಾ ಎನಿಸಿಕೊಳ್ಳುವ ಮೂಲಕ ವಿಶ್ವ ದಾಖಲೆ ಬರೆಯಲು ಸಜ್ಜಾಗಿದೆ.

ಸದ್ಯ ಹಾಲಿವುಡ್‌ ಚಿತ್ರ ‘ಮೆನ್‌ ಇನ್‌ ಬ್ಲಾಕ್‌ 3’ ಹೆಸರಿನಲ್ಲಿರುವ ಆ ದಾಖಲೆಯನ್ನು ಅಳಿಸಲು ಈಗಾಗಲೇ ವೇದಿಕೆ ಸಜ್ಜಾಗಿದ್ದು, ಕೇರಳದ ಅಂಗಮಾಲಿಯಲ್ಲಿರುವ ಎಡಿಎಲ್‌ಯುಎಕ್ಸ್‌ ಕನ್ವೆನ್ಷನ್‌ ಹಾಲ್‌ನಲ್ಲಿ ಸಿನಿಮಾ ಪ್ರದರ್ಶನ ಕಂಡಿದೆ.

ಭಾರತದ ಅತಿದೊಡ್ಡ ಡಿಜಿಟಲ್‌ ಸಿನಿಮಾ ವಿತರಕ ಸಂಸ್ಥೆಯಾಗಿರುವ ಯುಎಫ್‌ಒ(ಅನ್ಐಡೆಂಟಿಫೈಡ್‌ ಫ್ಲೈಯಿಂಗ್‌ ಆಬ್ಜೆಕ್ಟ್‌) ಮೂವೀಸ್‌ ಪ್ರದರ್ಶನದ ಹೊಣೆ ಹೊತ್ತಿದೆ.

ಈ ಹಿಂದೆ ಬರ್ಲಿನ್‌ನ ಒ2 ವರ್ಲ್ಡ್‌ನಲ್ಲಿ ಪ್ರದರ್ಶಿಸಲಾಗಿದ್ದ ‘ಮೆನ್‌ ಇನ್‌ ಬ್ಲಾಕ್‌ 3’ ಸಿನಿಮಾವನ್ನು 6819 ಜನರು ವೀಕ್ಷಿಸಿದ್ದರು. ಪುಲಿಮುರುಗನ್‌ ಚಿತ್ರವನ್ನು 10000 ಸಿನಿಪ್ರಿಯರು ಕುಳಿತು ವೀಕ್ಷಿಸಲು ಅವಕಾಶ ಕಲ್ಪಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT