ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬಾಲಿವುಡ್‌ ಕಿಲಾಡಿ’ ಶಿಸ್ತಿನ ಸಿಪಾಯಿ!

Last Updated 13 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಕಮರ್ಷಿಯಲ್‌ ಸಿನಿಮಾಗಳ ನಾಯಕನೊಬ್ಬನಿಗೆ ರಾಷ್ಟ್ರೀಯ ಪ್ರಶಸ್ತಿ ಬಂದಾಗಲೆಲ್ಲಾ ವಿಮರ್ಶಕರು ಅಸಹನೆ ವ್ಯಕ್ತಪಡಿಸುತ್ತಿದ್ದುದು ಮಾಮೂಲಾಗಿತ್ತು.

ಆದರೆ ರುಸ್ತುಂ ಚಿತ್ರಕ್ಕೆ ಅಕ್ಷಯ್‌ ಕುಮಾರ್‌ಗೆ ಪ್ರಶಸ್ತಿ ಬಂದಾಗ ಯಾರೂ ಸೊಲ್ಲೆತ್ತಲಿಲ್ಲ ಬದಲಿಗೆ ಅಕ್ಷಯ್‌ಗೆ ಪ್ರಶಸ್ತಿ ಬಂದದ್ದು ತಡವಾಯಿತೆಂದೇ ಹೇಳಿದರು. ಅಕ್ಷಯ್‌  ವ್ಯಕ್ತಿತ್ವೇ ಅಂತಹದು. ವಿವಾದಗಳಿಂದ ದೂರ. ಅಜಾತಶತ್ರು, ಹಸನ್ಮುಖಿ. ಈ ಗುಣಗಳು ಅಕ್ಷಯ್‌ಗೆ ಬಂದದ್ದು ಅವರ ಶಿಸ್ತಿನ ಜೀವನ. ಆರೋಗ್ಯಕರ ದೇಹದಿಂದಲೇ ಎನ್ನುತ್ತಾರೆ ಬಾಲಿವುಡ್‌ ಮಂದಿ. ಆರೋಗ್ಯವಂತ ದೇಹದಲ್ಲಿ ಮಾತ್ರ ಆರೋಗ್ಯ ಮನಸ್ಸಿರಲು ಸಾಧ್ಯ ಎಂಬ ಮಾತು ಅಕ್ಷಯ್‌ಗೆ ಒಪ್ಪುತ್ತದೆ.

ಚಿತ್ರದ ಉದ್ದೇಶಕ್ಕಾಗಿ ಅಕ್ಷಯ್‌ ವ್ಯಾಯಾಮ ಮಾಡುವವರಲ್ಲ. ‘ಇದು ನನ್ನ ಜೀವನ ಶೈಲಿ’ ಎನ್ನುತ್ತಾರೆ ಅವರು. ಹೌದು 50 ಹರೆಯದ ಅಕ್ಷಯ್‌ ಈಗಲೂ ಸುಲಭವಾಗಿ ತೆರೆಯ ಮೇಲೆ ಆ್ಯಕ್ಷನ್‌ ದೃಶ್ಯಗಳಲ್ಲಿ ಪಾಲ್ಗೊಳ್ಳಬಲ್ಲರು. ಸಹೋದ್ಯೋಗಿ ನಟರಿಗೆ ಬಂದಿರುವ ಬೆನ್ನು ನೋವು, ಮಂಡಿ ನೋವುಗಳು ಅಕ್ಷಯ್‌ರ ಹತ್ತಿರಕ್ಕೆ ಕೂಡ ಸುಳಿದಿಲ್ಲದಿರುವುದು ಸಹ ಇದೇ ಕಾರಣಕ್ಕೆ.

‘ಆರೋಗ್ಯ ಮೊದಲು ಉಳಿದಿದ್ದು ನಂತರ’ ಇದು ಅಕ್ಷಯ್‌ ಅವರ ಆರೋಗ್ಯ ಮಂತ್ರ. ಮಾರ್ಷಲ್ ಆರ್ಟ್‌ ಕಲಿತಿರುವ ಅಕ್ಷಯ್‌ಗೆ ವ್ಯಾಯಾಮದಿಂದ ದೇಹಕ್ಕಾಗುವ ನೋವು ಸವಿ ಎನಿಸುತ್ತದಂತೆ.

ತಮ್ಮ ಆರೋಗ್ಯ ಕಾಪಾಡಿಕೊಳ್ಳಲು ಅಕ್ಷಯ್‌ ಗಂಭೀರ ಜೀವನ ಶೈಲಿ ಅನುಸರಿಸುತ್ತಾರೆ. ಪಾರ್ಟಿಗಳಿಗೆ ಹೋಗದಿರುವುದು. ಅನಾರೋಗ್ಯಕರ ಆಹಾರ ಮತ್ತು ಪೇಯಗಳಿಂದ ದೂರ ಉಳಿಯುವುದು. ಸತತ ಕೆಲಸದಿಂದ ದೂರವಿರುವುದು. ಅಕ್ಷಯ್‌ ಪಾಲಿಸಿಕೊಂಡು ಬಂದಿರುವ ಸೂತ್ರಗಳು.
ಆರೋಗ್ಯದ ಬಗ್ಗೆ ಸದಾ ಜಾಗೃತವಾಗಿರುವ ಅಕ್ಷಯ್‌ ತಮ್ಮ ಆರೋಗ್ಯಕಾರಕ ಸಾಕಷ್ಟು ಹವ್ಯಾಸಗಳನ್ನು ರೂಢಿಸಿಕೊಂಡಿದ್ದಾರೆ. ಎಲ್ಲಿ ಹೋದರೂ ಲಿಫ್ಟ್‌ ಉಪಯೋಗಿಸದೆ ಮೆಟ್ಟಿಲೇರುತ್ತಾರೆ.

ಪ್ರತಿ ದಿನ ವ್ಯಾಯಾಮ ಮಾಡುವ ಅಕ್ಷಯ್‌ ತಮ್ಮ ದೇಹದಾರ್ಡ್ಯ ಹೆಚ್ಚಿಸಿಕೊಳ್ಳುವುದಕ್ಕಿಂತ ದೇಹದ ಗಟ್ಟಿತನ ಹೆಚ್ಚಿಸಿಕೊಳ್ಳುವುದರ ಬಗ್ಗೆ ಗಮನ ವಹಿಸುತ್ತಾರೆ. ಅಕ್ಷಯ್‌ ಸಿಕ್ಸ್‌ ಪ್ಯಾಕ್ಸ್‌ ಮಾಡಿದ್ದರೂ ಆರೋಗ್ಯವಂತರಾಗಿರುವುದು ಇದೇ ಕಾರಣಕ್ಕೆ.

ಪ್ರತಿ ದಿನ ಬೆಳಿಗ್ಗೆ 4.30ಕ್ಕೆ ತಪ್ಪದೆ ಏಳುವ ಅಕ್ಷಯ್‌ ಮೊದಲು ಒಂದು ಗಂಟೆ ಈಜುತ್ತಾರೆ. ನಂತರ ಒಂದು ಗಂಟೆ ಮಾರ್ಷಲ್ ಆರ್ಟ್‌ ತರಬೇತಿಗೆ ಮೀಸಲು. ನಂತರ ಯೋಗ ಮತ್ತು ಮಿತ ವ್ಯಾಯಾಮ. ಕೊನೆಯದಾಗಿ ಧ್ಯಾನ. ಮಾರ್ಷಲ್‌ ಆರ್ಟ್‌ ಮತ್ತು ಯೋಗದ ಹದವಾದ ಮಿಶ್ರಣದಿಂದ ಅವರ ಬಾಹ್ಯ ಮತ್ತು ಆಂತರಿಕ ಆರೋಗ್ಯವನ್ನು ಸದಾ ಸಮತೋಲನದಿಂದ ಕೂಡಿರುತ್ತದೆ.

‘ಬಾಲಿವುಡ್‌ ಕಿಲಾಡಿ’ ಎಂದೇ ಪ್ರಸಿದ್ಧ ನಟ ಅಕ್ಷಯ್‌  ಸಮತೋಲಿತ ಆಹಾರ ಸೇವಿಸುವುದಕ್ಕೆ ಪ್ರಾಮುಖ್ಯತೆ ನೀಡುತ್ತಾರೆ. ಅದರಲ್ಲಿಯೂ ಮನೆಯಲ್ಲಿ ಮಾಡಿದ ಆಹಾರವೇ ಅವರ ಮೊದಲ ಆಯ್ಕೆ.

‘ನನ್ನ ಫೀಟ್‌ನೆಸ್‌ನ ಗುಟ್ಟು ನಮ್ಮ ಮನೆಯ ಊಟ’ ಸ್ವತಃ ಅಕ್ಷಯ್ ಹಲವು ಕಾರ್ಯಕ್ರಮಗಳಲ್ಲಿ ಹೇಳಿಕೊಂಡಿದ್ದಾರೆ. ಕುಡಿತ, ಸಿಗರೇಟು ಗಳಿಂದ ದೂರವಿರುವ ಅಕ್ಷಯ್‌ ಟೀ, ಕಾಫಿಗಳಿಂದಲೂ ಬಹಳ ದೂರ. ಅಕ್ಷಯ್ ರಾತ್ರಿ ಊಟ ಸಂಜೆ 6ಕ್ಕೆ ಮುಗಿದಿರುತ್ತದೆ ಊಟ ಮುಗಿದ ಕನಿಷ್ಟ 3 ಗಂಟೆ ನಂತರವೇ ನಿದ್ದೆ.

ತಮ್ಮ ವರ್ಕ್‌ ಔಟ್‌ಗೆ ಒಪ್ಪುವಂತಹಾ ಊಟವನ್ನೇ ಅಕ್ಷಯ್‌ ಸೇವಿಸುತ್ತಾರೆ. ಅತಿಯಾದ ಊಟ ಅಥವಾ ಡಯೆಟ್‌ ಹೆಸರಿನಲ್ಲಿ ಕೇವಲ ತರಕಾರಿಗಳನ್ನು ತಿನ್ನದೇ ಸಮತೋಲಿತವಾದ ಆಹಾರ ಸೇವನೆಗೆ ಅವರು ಒತ್ತು ನೀಡುತ್ತಾರೆ.

ಅಕ್ಷಯ್‌ ಅವರ ಬೆಳಗ್ಗಿನ ಉಪಾಹಾರದಲ್ಲಿ ಪರಾಟ ಮತ್ತು ಒಂದು ಲೋಟ ಹಾಲು ಕಡ್ಡಾಯ. ಮಧ್ಯಾಹ್ನ ಊಟಕ್ಕೆ ರೋಟಿ, ದಾಲ್, ಚಿಕನ್ ಮತ್ತು ಮೊಸರು ಜೊತೆಗೆ ಒಂದು ಬೌಲ್ ವಿವಿಧ ಹಣ್ಣು ಮತ್ತು ಹಸಿ ತರಕಾರಿ ಸೇವಿಸುತ್ತಾರೆ.

ಸಂಜೆಗೆ ಸಕ್ಕರೆ ಇಲ್ಲದ ಹಣ್ಣಿನ ರಸ. ಸೂಪ್ ಮತ್ತು ತರಕಾರಿಗಳನ್ನಷ್ಟೆ ಅಕ್ಷಯ್ ರಾತ್ರಿ ಊಟಕ್ಕೆ ಸೇವಿಸುತ್ತಾರೆ.

ಅಕ್ಷಯ್‌ ಅವರು ವೈಯಕ್ತಿಕ ಮತ್ತು ವೃತ್ತಿಜೀವನ ಎರಡರಲ್ಲೂ ಶಿಸ್ತಿನ ಸಿಪಾಯಿ. ಇದರಿಂದಲೇ ಅವರು ನಿರ್ಮಾಪಕರ ನೆಚ್ಚಿನ ನಟ. ಎಂದೂ ತಡವಾಗಿ ಸೆಟ್‌ಗೆ ಹೋಗದ. ಒಪ್ಪಿಕೊಂಡ ಕೆಲಸವನ್ನು ಮುಗಿಸದೇ ಸೆಟ್‌ನಿಂದ ಹೊರಹೋಗದ ಶಿಸ್ತನ್ನು ಅವರು ಪಾಲಿಸುತ್ತಾ ಬಂದು ವರ್ಷಗಳೇ ಕಳೆದಿದೆ.

ವೈಯಕ್ತಿಕ ಜೀವನದಲ್ಲಿಯೂ ಇದೇ ಶಿಸ್ತು ಅವರದ್ದು, ‘ಬೇಗ ಮಲಗಿ ಬೇಗ ಏಳು’ ಎಂಬುದು ಅವರ ಪ್ರತಿದಿನದ ಪಾಲಿಸಿ. ‘ಬೇಗ ಏಳುವುದರಿಂದ ನನಗೆ ಚೈತನ್ಯ ದೊರಕುತ್ತದೆ’ ಎನ್ನುತ್ತಾರೆ ಈ ನಟ.

ಅಕ್ಷಯ್‌ ಪಕ್ಕಾ ಯೋಗ ಪಟು. ಯೋಗದ ಬಹುತೇಕ ಆಸನಗಳನ್ನು ಲೀಲಾಜಾಲವಾಗಿ ಕ್ರಮಬದ್ಧವಾಗಿ ಮಾಡುತ್ತಾರೆ.

ಈಜು ಮತ್ತು ಯೋಗವನ್ನು ಒಟ್ಟಿಗೆ ಸೇರಿಸಿ ಅಭ್ಯಾಸ ಮಾಡುತ್ತಾರೆ. ಇದರಿಂದ ಉತ್ತಮ ಫಲಿತಾಂಶ ದೊರಕುತ್ತದೆ ಎನ್ನುತ್ತಾರೆ ಅವರು.

**

ಹೀರೊ ಆಗುವುದು ತಮಾಷೆನಾ?
ಅಕ್ಷಯ್‌ ಜಿಮ್‌ ಮಾಡುವುದು ಮಾಂಸಖಂಡಗಳನ್ನು ಬೆಳೆಸಲು ಅಲ್ಲ. ಖಂಡಗಳನ್ನು ಬೆಳೆಸುವುದು, ಸಿಕ್ಸ್‌ ಪ್ಯಾಕ್‌ ಮಾಡುವುದು ಆರೋಗ್ಯವಲ್ಲ ಎಂಬುದು ಅಕ್ಷಯ್‌ ಅವರ ಗಟ್ಟಿ ನಂಬಿಕೆ. ಅಕ್ಷಯ್‌ ದೇಹವನ್ನು ಫಿಟ್‌ ಆಗಿಟ್ಟುಕೊಳ್ಳಲು ಜಿಮ್‌ ಮಾಡುತ್ತಾರೆಯೇ ವಿನಾ ಸಿಕ್ಸ್‌ ಪ್ಯಾಕ್‌ಗಾಗಿ ಅಲ್ಲ. ಬೇಸ್‌ ಬಾಲ್, ಫುಟ್‌ಬಾಲ್ ಆಡುವುದು, ಬೆಟ್ಟ ಹತ್ತುವುದು ಅಕ್ಷಯ್‌ಗೆ ಅಚ್ಚುಮೆಚ್ಚು.

‘ಹೀರೊ ಆಗಿರುವುದು ಸುಲಭದ ಕೆಲಸವಲ್ಲ ಅದಕ್ಕೆ ಸಾಕಷ್ಟು ಮಾನಸಿಕ, ಬೌದ್ಧಿಕ ಶಕ್ತಿ ಬೇಕು. ಇದಿಲ್ಲದವರು ಹಿರೋ ಪಟ್ಟವನ್ನು ಉಳಿಸಿಕೊಳ್ಳಲಾರರು’ ಎಂಬುದು ಅಕ್ಷಯ್‌ ಅವರ ನಂಬಿಕೆ. ತಮ್ಮ ಮಾನಸಿಕ ಮತ್ತು ಬೌದ್ಧಿಕ ಆರೋಗ್ಯ ಕಾಪಾಡಲು ಅಕ್ಷಯ್‌ ಅವರು ಯೋಗದ ಮೊರೆ ಹೋಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT