ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ಕೈಂಕರ್ಯಕ್ಕೆ ಸಿದ್ಧರಾದ ಗ್ರಾಮಸ್ಥರು

ನರಗುಂದ ತಾಲ್ಲೂಕು ನಾಲ್ಕನೇ ಕನ್ನಡ ಸಾಹಿತ್ಯ ಸಮ್ಮೇಳನ ಇಂದು: ಸಿದ್ಧಗೊಂಡ ಕಣಕಿಕೊಪ್ಪ ಗ್ರಾಮ
Last Updated 14 ಏಪ್ರಿಲ್ 2017, 6:11 IST
ಅಕ್ಷರ ಗಾತ್ರ

ನರಗುಂದ: ಬಂಡಾಯದ ನಾಡು, ಸಾಹಿತ್ಯ ಸಂಸ್ಕೃತಿಗೆ ಹೆಸರಾದ ನರಗುಂದ ತಾಲ್ಲೂಕು ಈಗ ಮತ್ತೆ  4ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅಧ್ಯಾತ್ಮ, ರಾಜ ಕೀಯದಲ್ಲಿ ಹೆಸರು ಮಾಡಿರುವ  ತಾಲ್ಲೂ ಕಿನ ಕಣಕಿಕೊಪ್ಪದಲ್ಲಿ ನಡೆಸುತ್ತಿದೆ. ಕನ್ನಡ ಸಾಹಿತ್ಯ ಪರಿಷತ್ತನ ತಾಲ್ಲೂಕು ಘಟಕದ ಅಧ್ಯಕ್ಷ ನಿವೃತ್ತ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಮೋಹನ ಕಲಹಾಳರ ನೇತೃತ್ವದಲ್ಲಿ ಸಮ್ಮೇಳನ ನಡೆಯಲಿದೆ.

ತಾಲ್ಲೂಕು ರೂಪುಗೊಂಡು ಅರ್ಧ ಶತಮಾನ ಕಳೆದರೂ ನಡೆದದ್ದು ಕೇವಲ ನಾಲ್ಕು ತಾಲ್ಲೂಕು ಸಾಹಿತ್ಯ ಸಮ್ಮೇಳನ ಮಾತ್ರ. ಮೊದಲ ಸಮ್ಮೇಳನ ನರಗುಂದ ದಲ್ಲಿ 2004ರಲ್ಲಿ  ರುದ್ರನಾಥ ಕಲ್ಯಾಣ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆದರೆ, ದಶಕಗಳ ನಂತರ 2014ರಲ್ಲಿ ಚಿಕ್ಕನರ ಗುಂದದಲ್ಲಿ  ಎಂ.ಕೆ.ದಿಬ್ಬದ ಅವರ ಅಧ್ಯ ಕ್ಷತೆಯಲ್ಲಿ 2ನೇ ಸಮ್ಮೇಳನ ನಡೆಯಿತು.

3ನೇ ಸಮ್ಮೇಳನ 2016ರಲ್ಲಿ ಬಿ.ಎಸ್‌. ಹಣಜಿ ಅಧ್ಯಕ್ಷತೆಯಲ್ಲಿ ಭೈರನಹಟ್ಟಿಯಲ್ಲಿ ನಡೆಯಿತು. ಈಗ 4ನೇ ಸಮ್ಮೇಳನ ಕಣಕಿಕೊಪ್ಪದಲ್ಲಿ ನಿವೃತ್ತ ಪ್ರಾಚಾರ್ಯ ಎಸ್‌.ಬಿ.ಕುಷ್ಟಗಿಯವರ ಅಧ್ಯಕ್ಷತೆಯಲ್ಲಿ ನಡಯಲಿದೆ. ಕಣಕಿಕೊಪ್ಪ ಮದುವಣ ಗಿತ್ತಿಯಂತೆ ಸಿಂಗಾರಗೊಂಡಿದ್ದು, ಕೆರೆಯ ಮುಂದಿನ ಬಯಲಲ್ಲಿ  ಹಸಿರು ಪರಿಸರ ದಲ್ಲಿ ಸಮ್ಮೇಳನ ನಡೆಯಲಿದೆ.

ಕಣಕಿಕೊಪ್ಪದ ವಿಶೇಷ: ಹೂಲಿ ಗ್ರಾಮದ ಬಾಲಲೀಲಾ ಸಂಗಮೇಶ್ವರರ ಕೃಪಾಕಟಾಕ್ಷ ಅವರ ಸಂಚಾರ ಹಾಗೂ ಪವಾಡಗ ಳಿಂದ ಪಾವನವಾದ ಈ ಗ್ರಾಮ ಅಧ್ಯಾತ್ಮ ಹಾಗೂ ರಾಜಕೀಯ ಕ್ಷೇತ್ರದಲ್ಲಿ ತಾಲ್ಲೂಕಿ ನಲ್ಲಿಯೇ ಶ್ರೇಷ್ಠ ಗ್ರಾಮವೆಂದು ಪ್ರಸಿದ್ದಿ ಪಡೆದಿದೆ. 

ಸುಮಾರು 4 ಸಾವಿರ ಜನ ಸಂಖ್ಯೆ ಹೊಂದಿರುವ ಗ್ರಾಮದಲ್ಲಿ ಪ್ರೌಢ  ಶಾಲೆಯವರಿಗೆ ಮಾತ್ರ ಶಿಕ್ಷಣ ಸೌಲಭ್ಯ ಇದ್ದರೂ ಇಲ್ಲಿಯ ಪ್ರತಿಭೆಗಳು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಮಿಂಚಿರು ವುದು ವಿಶೇಷ. ಇಲ್ಲಿಯ ಕೆರೆ ದಂಡೆ ಹಸಿರಿನಿಂದ ಕಂಗೊಳಿಸುತ್ತಿದ್ದು, ವಾಯು ವಿಹಾರಕ್ಕೆ ಹೇಳಿ ಮಾಡಿಸಿದಂತಿದೆ.

ಈಗ ಸಮ್ಮೇಳನಕ್ಕಾಗಿ ಬೃಹತ್‌ ವೇದಿಕೆ ಸಿದ್ಧ ಗೊಳ್ಳುತ್ತಿದೆ. ಗುರುವಾರ ಅಹೋರಾತ್ರಿ ಗ್ರಾಮಸ್ಥರು ಸಿದ್ಧತೆ ಮಾಡಿಕೊಂಡಿದ್ದಾರೆ. ರುಚಿಕರ ಭೋಜನ ತಯಾರಿಕೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಒಟ್ಟಾರೆ ಕಸಾಪ ಹಾಗೂ ಗ್ರಾಮಸ್ಥರ ಪ್ರಯತ್ನದಿಂದ ಒಂದೇ ವಾರದಲ್ಲಿ ನಿಗದಿಗೊಂಡ ಸಾಹಿತ್ಯ ಸಮ್ಮೇ ಳನವನ್ನು ಅರ್ಥಪೂರ್ಣವಾಗಿ ನಡೆಸಲು ಚಿಂತನೆ ನಡೆಸಲಾಗುತ್ತಿದೆ ಎಂದು ಅಧ್ಯಕ್ಷ ಕಲಹಾಳ, ಗ್ರಾಮದ ವಿ.ಎನ್‌. ಕೊಳ್ಳಿಯ ವರ ಹೇಳುತ್ತಾರೆ. ಬರದ ಸಂದರ್ಭದಲ್ಲಿ ಮಿತವ್ಯಯದಲ್ಲಿ ಅರ್ಥಪೂರ್ಣ ಸಮ್ಮೇಳನ ಆಯೋಜಿಸಲು ಕಸಾಪ ಪದಾಧಿಕಾರಿ ಗಳು ಸಿದ್ಧತೆ ಕೈಗೊಂಡಿದ್ದಾರೆ.
–ಬಸವರಾಜ ಹಲಕುರ್ಕಿ

ಶಿಕ್ಷಣ  ಪ್ರೇಮಿ  ಸಂಗಪ್ಪ  ಕುಷ್ಟಗಿ
ತಾಲ್ಲೂಕಿನ 4ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸಂಗಪ್ಪ ಬಾಳಪ್ಪ ಕುಷ್ಟಗಿ 35 ವರ್ಷ ಪಟ್ಟಣದ ಸರ್ಕಾರಿ ಸಿದ್ದೇಶ್ವರ ಪ್ರಥಮ ದರ್ಜೆ ಕಾಲೇಜಿನಲ್ಲಿ ಅರ್ಥಶಾಸ್ತ್ರದ ಉಪನ್ಯಾಸಕರಾಗಿ, ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿದ್ದಾರೆ.

ಇವರು ಆರಂಭದಿಂದ ಶಿಕ್ಷಣ, ಸಾಹಿತ್ಯ ಪ್ರೇಮಿಯಾಗಿ ಕನ್ನಡ ಸಾಹಿತ್ಯ ಪರಿಷತ್‌ನ ತಾಲ್ಲೂಕು ಘಟಕದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಜನಾನುರಾಗಿಯಾಗಿದ್ದಾರೆ.

ಸಹ ಸ್ರಾರು ವಿದ್ಯಾರ್ಥಿಗಳ ಮೆಚ್ಚಿನ ಉಪ ನ್ಯಾಸಕರಾದ ಸಂಗಪ್ಪ ಕುಷ್ಟಗಿ ಅಧ್ಯಾತ್ಮದತ್ತ ಹೆಚ್ಚು ಒಲವು ಹೊಂದಿದ್ದು, ಹಿರೇಮಠದ ಚನ್ನವೀರ ಶಿವಾಚಾರ್ಯರು, ಮುಗಳಖೋಡ ಯಲ್ಲಾಲಿಂಗ, ಅಥಣಿ ಶಿವಯೋಗಿಗಳ ಕುರಿತು ಆಧ್ಯಾತ್ಮಿಕ ಹಿನ್ನೆಲೆಯ ಗ್ರಂಥ ರಚನೆ ಮಾಡಿದ್ದಾರೆ. ರಾಜ್ಯ ಮಟ್ಟದ ಪ್ರಶಸ್ತಿ ಪಡೆದ ಇವರು ಮಾತಿನ ಚತುರರಾಗಿದ್ದು ಎಲ್ಲರ ಗಮನ ಸೆಳೆಯುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT