ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆ ಅಭಿವೃದ್ಧಿಗೆ ₹ 15 ಕೋಟಿ ಬಿಡುಗಡೆ

Last Updated 14 ಏಪ್ರಿಲ್ 2017, 8:16 IST
ಅಕ್ಷರ ಗಾತ್ರ

ಸೋಮವಾರಪೇಟೆ: ತಾಲ್ಲೂಕಿನ ರಸ್ತೆ ಗಳ ಅಭಿವೃದ್ಧಿಗೆ ಒಟ್ಟು ₹ 15.35 ಕೋಟಿ ಅನುದಾನ ಬಿಡುಗಡೆಯಾಗಿದೆ ಎಂದು ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ತಿಳಿಸಿದ್ದಾರೆ.

ಹರಗ ರಸ್ತೆಯಲ್ಲಿ ಸೇತುವೆ ನಿರ್ಮಾ ಣಕ್ಕೆ ₹ 70ಲಕ್ಷ, ಸುಂಟಿ ಕೊಪ್ಪ-ಚೆಟ್ಟಳ್ಳಿ ರಸ್ತೆ ವಿಸ್ತರಣೆಗೆ ₹ 3.50 ಕೋಟಿ, ಮಾದಾಪುರ-ಸೂರ್ಲಬ್ಬಿ-ಶಾಂತಳ್ಳಿ ರಸ್ತೆ ಯಲ್ಲಿ ನೂತನ ಸೇತುವೆ ನಿರ್ಮಾಣಕ್ಕೆ ₹ 85 ಲಕ್ಷ, ಕಿರಗಂದೂರು-ಗುಬ್ಬನ ಮನೆ-ತಾಕೇರಿ-ಬಾರ್ಲಗದ್ದೆ, ಮಡಿಕೇರಿ ತಾಲ್ಲೂ ಕಿನ ಚೆಟ್ಟಳ್ಳಿ ರಾಜ್ಯ ಹೆದ್ದಾರಿ 8ರ 137.14 ರಿಂದ 148 ಕಿ.ಮೀ.ವೆಗಿನ ರಸ್ತೆ ಅಭಿ ವೃದ್ಧಿಗೆ ₹ 6 ಕೋಟಿ ಅನುದಾನ ಬಿಡುಗಡೆಯಾಗಿದೆ ಎಂದು ತಿಳಿಸಿದ್ದಾರೆ.

ಐಗೂರು -ಕಿರಗಂದೂರು-ಕೋಡ ಗದ್ದೆ-ತಾಕೇರಿ ರಸ್ತೆ ಅಭಿ ವೃದ್ಧಿಗೆ ₹ 30ಲಕ್ಷ, ಮಾದಾಪುರ-ಸೂರ್ಲಬ್ಬಿ-ಶಾಂತಳ್ಳಿ ರಸ್ತೆ ಅಭಿವೃದ್ಧಿಗೆ ₹ 50 ಲಕ್ಷ, ಮಸ ಗೋಡು- ಯಲಕನೂರು-ಕಣಿವೆ ರಸ್ತೆಗೆ ₹ 1 ಕೋಟಿ, ಬ್ಯಾಡಗೊಟ್ಟ-ಮಲ್ಲಿ ಪಟ್ಟಣ ರಸ್ತೆ ಕಾಮಗಾರಿಗೆ ₹ 80ಲಕ್ಷ, ಕಾನನಕಾಡು- ಕೃಷ್ಣಾಪುರ-ವಾಲ್ನೂರು ರಸ್ತೆಗೆ ₹ 70 ಲಕ್ಷ ಮಂಜೂರಾಗಿದೆ ಎಂದು ತಿಳಿಸಿದ್ದಾರೆ.

ಕಲ್ಕಂದೂರು-ಶಾಂತಳ್ಳಿ ರಸ್ತೆ ಅಭಿ ವೃದ್ಧಿಗೆ ₹ 1 ಕೋಟಿ ಅನು ದಾನ ಸೇರಿ ದಂತೆ ಒಟ್ಟು ₹ 15.35 ಕೋಟಿ ಹಣ ಬಿಡುಗಡೆಯಾಗಿದ್ದು, ಲೋಕೋಪ ಯೋಗಿ ಇಲಾಖೆಯ ಅಪೆಂಡಿಕ್ಸ್- ಇ ಮೂಲಕ ಶೀಘ್ರದಲ್ಲೇ ಕಾಮಗಾರಿ ಪ್ರಾರಂಭವಾಗಲಿದೆ ಎಂದು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT