ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಡಿಗೆ ಪಾವತಿಸದಿದ್ದರೆ ಕ್ರಮ

Last Updated 14 ಏಪ್ರಿಲ್ 2017, 8:18 IST
ಅಕ್ಷರ ಗಾತ್ರ

ಸೋಮವಾರಪೇಟೆ: ವಿದ್ಯುತ್ ಕಂಬಕ್ಕೆ ಅಳವಡಿಸಿರುವ ಟಿ.ವಿ. ಕೇಬಲ್ ಆಪರೇಟರ್‌ಗಳು ಬಾಡಿಗೆ ಪಾವತಿಸದೆ ಇದ್ದರೆ ನಿರ್ದಾಕ್ಷಿಣ್ಯವಾಗಿ ವಿದ್ಯುತ್ ಕಡಿತ ಗೊಳಿಸಬೇಕೆಂದು ಗ್ರಾಹಕರ ಸಲಹಾ ಸಮಿತಿಯ ಸದಸ್ಯರು ಸಭೆಯಲ್ಲಿ ಆಗ್ರಹಿಸಿದರು.

ಇಲ್ಲಿನ ಕಾರ್ಯ ಮತ್ತು ಪಾಲನಾ ಶಾಖಾ ಕಚೇರಿಯಲ್ಲಿ ಬುಧವಾರ ಸಹಾ ಯಕ ಎಂಜಿನಿಯರ್‌ ನೀಲಶೆಟ್ಟಿ ಅಧ್ಯಕ್ಷತೆ ಯಲ್ಲಿ ನಡೆದ ಶಾಖಾಮಟ್ಟದ ವಿದ್ಯುತ್ ಗ್ರಾಹಕರ ಸಲಹಾ ಸಮಿತಿ ಸಭೆಯಲ್ಲಿ ಈ ಒತ್ತಾಯ ಕೇಳಿಬಂದಿತು.

ಸರ್ಕಾರ ನೀಡುತ್ತಿರುವ ಎಲ್.ಇ.ಡಿ. ಬಲ್ಬ್‌ಗಳಿಗೆ ಬೇಡಿಕೆ ಇರುವುದರಿಂದ ಗ್ರಾಹಕರಿಗೆ ಅದಷ್ಟು ಬೇಗ ಬಲ್ಬ್‌ಗಳನ್ನು ಪೂರೈಸಬೇಕೆಂದು ಸದಸ್ಯ ಧರ್ಮಪ್ಪ ಹೇಳಿದರು.

ಗೋಣಿಮರೂರು ಕುರುಬರ ಹಾಡಿ ಯಿಂದ ಕಾಫಿ ತೋಟದ ನಡುವೆ ಹಾದು ಹೋಗಿರುವ ಕಂಬಗಳು ಬಾಗಿದ್ದು, ಕಂಬಗಳ ಅಂತರವೂ ಹೆಚ್ಚಿದೆ. ಈ ಕಾರಣದಿಂದ ಮಧ್ಯೆ ಕಂಬಗಳನ್ನು ಅಳವಡಿಸಬೇಕೆಂದು ಗ್ರಾಹಕರ ಸಲಹಾ ಸಮಿತಿ ಸದಸ್ಯರಾದ ಮಂದಣ್ಣ ಮನವಿ ಮಾಡಿದರು.

ಪಟ್ಟಣದ ರೇಂಜರ್ ಬ್ಲಾಕ್‌ನಲ್ಲಿ ಕಂಬ ಹಾಕಲು ಸಾಧ್ಯವಿಲ್ಲದಿದ್ದರೆ  ಲ್ಯಾಡರ್ ಪೋಲ್ ಅಳವಡಿಸುವಂತೆ ಸಲಹಾ ಸಮಿತಿ ಸದಸ್ಯರಾದ ಟಿ.ಆರ್. ಮೋಹನ್ ಮನವಿ ಮಾಡಿದರು.

ಯಡವಾರೆ ಗ್ರಾಮದ ವಿಶ್ವನಾಥ್ ಎಂಬುವವರ ಮನೆಯ ಸಮೀಪ ವಿದ್ಯುತ್ ಕಂಬ ಶಿಥಿಲಗೊಂಡಿದ್ದು, ಅನಾ ಹುತ ಸಂಭವಿಸುವ ಮೊದಲು ಕಂಬ ವನ್ನು ಬದಲಾಯಿಸಬೇಕೆಂದು ಸದಸ್ಯ ರಾದ ಎಂ.ಪಿ.ಧರ್ಮ ಸಭೆಗೆ ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಸಹಾಯಕ ಎಂಜಿನಿಯರ್‌ ನೀಲಶೆಟ್ಟಿ, ಪ್ರಸ್ತುತ ನಿಗಮದಲ್ಲಿ ಚಾಲ್ತಿಯಲ್ಲಿರುವ ಯೋಜನೆ ಗಳು ಮತ್ತು ಕಾಮಗಾರಿಗಳ ಬಗ್ಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ಸದಸ್ಯರಾದ ರಂಗೇ ಗೌಡ, ಆಲೂರು ಸಿದ್ದಾಪುರ ಶಾಖೆಯ ಕಿರಿಯ ಎಂಜಿನಿಯರ್‌ ಎಂ.ಆರ್.ರಂಗ ಸ್ವಾಮಿ, ಸೋಮವಾರಪೇಟೆ ಶಾಖೆಯ ಶಾಖಾಧಿಕಾರಿ ದಯಾನಂದ್,  ಸಲಹಾ ಸಮಿತಿ ಸದಸ್ಯರಾದ ನೇತ್ರಾವತಿ ಸೋಮಪ್ಪ, ಎಸ್.ಪಿ.ಪ್ರಸನ್ನ, ಸಿ.ಎಸ್. ನಿಂಗರಾಜು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT