ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾಕ್‌ ಮಾನ್ಯತೆ ಪಡೆಯಲು ಸಿದ್ಧತೆ

ಮೈಸೂರು ವಿ.ವಿ; ಎನ್‌ಐಆರ್‌ಎಫ್‌ 36ನೇ ರ್‌್ಯಾಂಕಿಂಗ್‌: ರಾಷ್ಟ್ರಪತಿ ಭವನದಲ್ಲಿ ಪ್ರಶಸ್ತಿ ಪ್ರದಾನ
Last Updated 14 ಏಪ್ರಿಲ್ 2017, 8:21 IST
ಅಕ್ಷರ ಗಾತ್ರ

ಮೈಸೂರು: ರಾಷ್ಟ್ರೀಯ ಮೌಲ್ಯಂಕನ ಮತ್ತು ಮಾನ್ಯತಾ ಸಮಿತಿಯು (ನ್ಯಾಕ್‌) ಮೈಸೂರು ವಿಶ್ವವಿದ್ಯಾನಿಲಯಕ್ಕೆ ಪ್ರದಾನಿ ಸಿದ್ದ ‘ಎ++’ ಸ್ಥಾನಮಾನವು ಜನವ ರಿಗೆ ಅಂತ್ಯವಾಗಲಿದ್ದು, ಮತ್ತೆ ಮಾನ್ಯತೆ ಪಡೆಯಲು ವಿಶ್ವವಿದ್ಯಾನಿಲಯವು ಸಿದ್ಧತೆ ನಡೆಸಿದೆ ಎಂದು ಪ್ರಭಾರ ಕುಲಪತಿ ಪ್ರೊ.ದಯಾನಂದ ಮಾನೆ ಗುರುವಾರ ಇಲ್ಲಿ ತಿಳಿಸಿದರು.

‘ನ್ಯಾಕ್‌’ ಮಾನ್ಯತೆ 5 ವರ್ಷ ಅವಧಿ ಗಿರುತ್ತದೆ. ವಿಶ್ವವಿದ್ಯಾನಿಲಯ ಈಗ 4ನೇ ಬಾರಿಗೆ ಮಾನ್ಯತೆ ಪಡೆಯವುದಕ್ಕೆ ಸಜ್ಜಾ ಗಿದೆ. ಸಮಿತಿಯ ಮಾನದಂಡ ಪೂರೈ ಸುವ ನಿಟ್ಟಿನಲ್ಲಿ ಅಗತ್ಯ ಕ್ರಮವಹಿಸಲಾ ಗುತ್ತಿದೆ ಎಂದು ಪತ್ರಿಕಾ ಗೋಷ್ಠಿಯಲ್ಲಿ  ಅವರು ಮಾಹಿತಿ ನೀಡಿದರು.

ವಿಶ್ವವಿದ್ಯಾನಿಲಯಗಳ ರ್‌್ಯಾಂಕಿಂಗ್‌ ಸಮೀಕ್ಷೆ ‘ದಿ ವರ್ಲ್ಡ್‌ ರ್‌್ಯಾಂಕಿಂಗ್‌’, ‘ದಿ ವೀಕ್‌’, ‘ಐಸಿಎಆರ್‌ಇ–ಕೆಎಸ್‌ಯುಆರ್‌ ಎಫ್‌’ ‘ಟೈಮ್ಸ್‌’ ಸಂಸ್ಥೆಗಳಿಗೆ ಮೈಸೂರು ವಿಶ್ವವಿದ್ಯಾನಿಲಯವು ದತ್ತಾಂಶವನ್ನು ಒದಗಿಸಿದೆ. ಸ್ಥಾನ ನಿರೀಕ್ಷೆಯಲ್ಲಿದ್ದೇವೆ ಎಂದರು.

ಉತ್ಕೃಷ್ಟತಾ ಕೇಂದ್ರ; ಪ್ರಸ್ತಾವ ಸಲ್ಲಿಕೆ: ‘ವಿಶ್ವವಿದ್ಯಾನಿಲಯದಲ್ಲಿ ಉತ್ಕೃಷ್ಟತಾ ಕೇಂದ್ರಗಳ ಸ್ಥಾಪನೆಗೆ ಅನುದಾನ ಕೋರಿ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿಗೆ (ಕೆಎಸ್‌ಎಚ್‌ಇಸಿ) ಹಾಗೂ ಕರ್ನಾಟಕ ಜ್ಞಾನ ಆಯೋಗಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ಯೋಜನೆ, ಮೇಲುಸ್ತುವಾರಿ, ಮೌಲ್ಯ ಮಾಪನ ಮಂಡಳಿ ನಿರ್ದೇಶಕರೂ ಆಗಿರುವ ರ್‌್ಯಾಂಕಿಂಗ್‌ ನೋಡೆಲ್‌ ಅಧಿಕಾರಿ ಪ್ರೊ.ಲಿಂಗರಾಜ ಗಾಂಧಿ ತಿಳಿಸಿದರು.

‘ಡ್ರಗ್‌ ಡಿಸ್ಕವರಿ– ಮಾಲಿಕ್ಯುಲರ್‌ ಮೆಡಿಸಿನ್‌’, ‘ಉದ್ಯಮಶೀಲತೆ’, ‘ಕ್ಷೇತ್ರ ಅಭಿವೃದ್ಧಿ’ ಉತ್ಕೃಷ್ಟತಾ ಕೇಂದ್ರಗಳ ಸ್ಥಾಪನೆಗೆ ₹ 200 ಕೋಟಿ ಕೋರಿ ಕೆಎಸ್‌ಎಚ್‌ಇಸಿಗೆ ಹಾಗೂ ‘ಡಿಸೈನ್‌ ಮ್ಯಾನ್ಯುಫ್ಯಾಕ್ಚರ್‌ ಇನ್‌ ವುಡ್‌ ಬೇಸ್‌ ಹ್ಯಾಂಡಿಕ್ರಾಫ್ಟ್ಸ್‌’ ಕೇಂದ್ರ ಸ್ಥಾಪನೆಗೆ ₹ 150 ಕೋಟಿ ಒದಗಿಸುವಂತೆ ಕೆಜೆಎಗೆ ಮನವಿ ನೀಡಲಾಗಿದೆ. ಗುಣಮಟ್ಟದ ಶಿಕ್ಷಣ ಮತ್ತು ಸಂಶೋಧನೆಗೆ ಒತ್ತು ನೀಡಲಾಗಿದೆ’ ಎಂದು ವಿವರಿಸಿದರು.

ಬೋಧಕರ ನೇಮಕಾತಿಗೆ ಕ್ರಮ: ‘ಮೈಸೂರು ವಿಶ್ವವಿದ್ಯಾನಿಲಯದಲ್ಲಿನ ಬೋಧಕರ ನೇಮಕಾತಿ ಪ್ರಕ್ರಿಯೆಯನ್ನು ಕೈಗೆತ್ತಿಕೊಳ್ಳಲಾಗುವುದು. ರೋಸ್ಟರ್‌ ಪಾಲನೆಗೆ ಸಂಬಂಧಿಸಿದ ತೊಡಕುಗಳು ಬಗೆಹರಿದಿವೆ’ ಎಂದು ಆಡಳಿತಾಂಗ ಕುಲಸಚಿವ ಪ್ರೊ.ಆರ್‌.ರಾಜಣ್ಣ ಹೇಳಿದರು.
ಪರೀಕ್ಷಾಂಗ ಕುಲಸಚಿವ ಪ್ರೊ.ಜೆ.ಸೋಮಶೇಖರ್‌, ಹಣಕಾಸು ಅಧಿಕಾರಿ ಮಹದೇವಪ್ಪ ಇದ್ದರು.

ಪ್ರಶಸ್ತಿ ಪ್ರಮಾಣಪತ್ರ ಪ್ರದಾನ
ರಾಷ್ಟ್ರೀಯ ಸಾಂಸ್ಥಿಕ ರ್‌್ಯಾಂಕಿಂಗ್‌ ಚೌಕಟ್ಟಿನ (ಎನ್‌ಐಆರ್‌ಎಫ್‌) ರ್‌್ಯಾಂಕಿಂಗ್‌ ಪ್ರಶಸ್ತಿ ಪ್ರದಾನ ಸಮಾರಂಭವು ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ಈಚೆಗೆ ನಡೆಯಿತು. ಮೈಸೂರು ವಿಶ್ವವಿದ್ಯಾನಿಲಯಕ್ಕೆ ಸಂದ ರ್‌್ಯಾಂಕಿಂಗ್‌ ಪ್ರಶಸ್ತಿ ಪ್ರಮಾಣಪತ್ರ ಮತ್ತು ಪದಕವನ್ನು ವಿತರಿಸಿದರು. ರಾಷ್ಟ್ರಪತಿ ಪ್ರಣವ್‌ಮುಖರ್ಜಿ ಅಧ್ಯಕ್ಷತೆ ವಹಿಸಿದ್ದರು ಎಂದು ರ್‌್ಯಾಂಕಿಂಗ್‌ ನೋಡೆಲ್‌ ಅಧಿಕಾರಿ ಪ್ರೊ.ಲಿಂಗರಾಜ ಗಾಂಧಿ ತಿಳಿಸಿದರು. 

ಕೇಂದ್ರ ಮಾನವಸಂಪನ್ಮೂಲ ಸಚಿವಾಲಯದ ಎನ್‌ಐಆರ್‌ಎಫ್‌ ಬಿಡುಗಡೆ ಮಾಡಿದ ರ್‌್ಯಾಂಕಿಂಗ್‌ ಪಟ್ಟಿಯ ವಿಶ್ವವಿದ್ಯಾನಿಲಯ ಪ್ರವರ್ಗದಲ್ಲಿ ಮೈಸೂರು ವಿಶ್ವವಿದ್ಯಾನಿಲಯವು 36ನೇ ಸ್ಥಾನ ಹಾಗೂ ಒಟ್ಟಾರೆ ಪ್ರವರ್ಗದಲ್ಲಿ 57ನೇ ಸ್ಥಾನ ಪಡೆದಿದೆ. ದೇಶದಲ್ಲಿನ 724 ವಿಶ್ವವಿದ್ಯಾನಿಲಯಗಳು ಮತ್ತು 3,319 ಶಿಕ್ಷಣ ಸಂಸ್ಥೆಗಳು ಎನ್‌ಐಆರ್‌ಎಫ್‌ ರ್‌್ಯಾಂಕಿಂಗ್‌ ಸ್ಪರ್ಧೆಯಲ್ಲಿದ್ದವು ಎಂದರು.

ಅತಿಥಿ ಉಪನ್ಯಾಸಕರ ವೇತನ ಹೆಚ್ಚಳಕ್ಕೆ ಕ್ರಮ
‘2017–18ನೇ ಶೈಕ್ಷಣಿಕ ಸಾಲಿನಿಂದ ಮೈಸೂರು ವಿಶ್ವವಿದ್ಯಾನಿಲಯದ ಅತಿಥಿ ಉಪನ್ಯಾಸಕರ ವೇತನವನ್ನು ಹೆಚ್ಚಿಸುವ ಉದ್ದೇಶ ಇದೆ. ವಿಶ್ವ ವಿದ್ಯಾನಿಲಯ ಅನುದಾನ ಆಯೋಗದ (ಯುಜಿಸಿ) ಮಾರ್ಗ ಸೂಚಿಯಂತೆ ಅವರಿಗೆ ₹ 25 ಸಾವಿರದವರೆಗೆ ವೇತನ ನೀಡಲು ಅವಕಾಶ ಇದೆ. ಈ ಉಪನ್ಯಾಸಕರ ವೇತನ ಹೆಚ್ಚಳಕ್ಕೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ’ ಎಂದು ಪ್ರಭಾರ ಕುಲಪತಿ ಪ್ರೊ.ದಯಾನಂದ ಮಾನೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT